Advertisement

ಶ್ರವಣಬೆಳಗೊಳದ ಭಿತ್ತಿಚಿತ್ರಗಳ ವಿಶೇಷ ಕ್ಯಾಲೆಂಡರ್‌ ಬಿಡುಗಡೆ

06:15 AM Jan 04, 2018 | Team Udayavani |

ಬೆಂಗಳೂರು: “ಪರಂಪರೆಯ ಸ್ವರ್ಶ ಇಲ್ಲದ ಕಲೆ ಮತ್ತು ಕಲಾವಿದನಿಂದ ಹೊಸತನದ ಸೃಷ್ಟಿ ಅಸಾಧ್ಯ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದರು. 

Advertisement

ನಗರದ ನಯನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಸವಿನೆನಪಿಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಹೊರ ತಂದಿರುವ ಶ್ರವಣ ಬೆಳಗೊಳದ ಭಿತ್ತಿಚಿತ್ರಗಳ ವಿಶೇಷ ಕ್ಯಾಲೆಂಡರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಲಾವಿದನಿಗೆ ಕಲೆಯ ಜತೆಗೆ ಬಡತನವೂ ಅಂಟಿ ಕೊಂಡು ಬಂದಿರುತ್ತದೆ.

ಕಲೆಯನ್ನು ನಿಭಾಯಿಸುವಂತೆ ಬಡತನ ವನ್ನು ನಿಭಾಯಿಸಿ, ಸ್ವಾಭಿಮಾನದಿಂದ ಬದುಕುತ್ತಾನೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ರಿಜಿಸ್ಟ್ರಾರ್‌ ಎಚ್‌.ವಿ. ಇಂದ್ರಮ್ಮ, ಸದಸ್ಯ ಗಣಪತಿ ಎಸ್‌. ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

ಕ್ಯಾಲೆಂಡರ್‌ ಕುರಿತು: ಮಹಾಮಸ್ತಕಾಭಿಷೇಕ ಮಹೋತ್ಸವ- 2018ರ ಸವಿನೆನಪಿಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಶ್ರವಣಬೆಳಗೊಳದ ಭಿತ್ತಿಚಿತ್ರ ಗಳ ವಿಶೇಷ ಕ್ಯಾಲೆಂಡರ್‌ ಹೊರತಂದಿದೆ. ಬಾಹುಬಲಿಯ ಪರಿಚಯದ ಜತೆಗೆ ಮಹಾಮಸ್ತಕಾಭಿಷೇಕದ ಚಿತ್ರಗಳು, ಇತಿಹಾಸದ ಪರಿಕಲ್ಪನೆ ಸಹಿತವಾಗಿ ಕ್ಯಾಲೆಂಡರ್‌ನ ರಚನೆ ಮಾಡಲಾಗಿದೆ. ಮೊದಲ ಪುಟದಲ್ಲಿ ಬಾಹುಬಲಿ ಚಿತ್ರ ಮತ್ತು ಇತಿಹಾಸದ ಬಗ್ಗೆ ವಿವರಣೆ ನೀಡ ಲಾ ಗಿದೆ. ಉಳಿದ 12 ಪುಟದಲ್ಲಿ ಮಹಾಮಸ್ತಕಾಭಿಷೇಕದ ಚಿತ್ರಗಳನ್ನು ಜೋಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next