Advertisement

ವೈರಾಗ್ಯ ಮೂರ್ತಿಗೆ ಮಹಾ ಮಜ್ಜನ ಆರಂಭ;ಸಿಎಂ ಜಲಾಭಿಷೇಕ 

05:46 PM Apr 13, 2020 | Team Udayavani |

ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿರುವ ಭಗವಾನ್‌ ಬಾಹುಬಲಿಗೆ  88 ನೇ ಮಹಾಮಸ್ತಕಾಭಿಷೇಕ ಶನಿವಾರ ಮಧ್ಯಾಹ್ನದಿಂದ ಜಲಾಭಿಷೇಕದಿಂದ ಆರಂಭವಾಗಿದೆ.

Advertisement

ಜೈನ ಮಹಾಮುನಿಗಳು, ಆಚಾರ್ಯರು ಮತ್ತು ಗಣ್ಯರು ಜಲಾಭಿಷೇಕ ಮಾಡುವ ಮೂಲಕ ವಿಧಿ ವಿಧಾನಗಳನ್ನು ಆರಂಭಿಸಿದ್ದಾರೆ. ದೇಶದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಾರು ಮಂದಿ ಭಕ್ತರು  ಉಪಸ್ಥಿತರಿದ್ದು ಭಗವಾನ್‌ ಬಾಹುಬಲಿ ಕೀ ಜೈ ಎಂಬ ಘೋಷಗಳನ್ನು ಕೂಗಿದರು. ವರ್ಧಮಾನ ಸಾಗರ್‌ ಮುನಿ ಅವರು ಮೊದಲ ಜಲಾಭಿಷೇಕವನ್ನು ಮಾಡಿದರು.

ಜಲಾಭಿಷೇಕದ ತೀರ್ಥ ಪ್ರೋಕ್ಷಣೆಯಿಂದ ಭಕ್ತರು ಪುನೀತರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಾಭಿಷೇಕ 

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಲಿಯನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ  ಬಾಹುಬಲಿ  ಮೂರ್ತಿಗೆ  ಜಲಾಭಿಷೇಕ ನಡೆಸಿದರು.ಅವರೊಂದಿಗೆ ಸಚಿವ ಎ.ಮಂಜು, ಸಚಿವೆ ಉಮಾಶ್ರೀ ಅವರು ಪಾಲ್ಗೊಂಡಿದ್ದರು. ಸಿಎಂ ಜಲಾಭಿಷೇಕ ನಡೆಸುವ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ , ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next