Advertisement

ಸಾಬೂನಿನಲ್ಲಿ ಮಹಾಲಿಂಗೇಶ್ವರನ ಕಲಾಕೃತಿ

12:11 AM Apr 18, 2019 | Team Udayavani |

ನಗರ: ಈಗ ಎಲ್ಲರ ಮಾತುಗಳಲ್ಲೂ ಮಹಾಲಿಂಗೇಶ್ವರನ ಜಾತ್ರೆಯದ್ದೇ ಸುದ್ದಿ. ಯುವಕನೋರ್ವ ಸ್ನಾನದ ಸೋಪ್‌ನಲ್ಲಿ ಮಹಾಲಿಂಗೇಶ್ವರನ ಕಲಾಕೃತಿ ರಚಿಸಿ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಸಾಬೂನಿನಲ್ಲಿ ಅದ್ಭುತ ಕಲಾಕೃತಿ ರಚಿಸಿದವರು ಪುತ್ತೂರು ತಾಲೂಕು ಮುರ ನಿವಾಸಿ ರಂಜಿತ್‌ ಗೌಡ. ಮುರ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪಡೆದಿದ್ದಾರೆ. ಶಾಲೆ-ಕಾಲೇಜು ದಿನಗಳಲ್ಲೇ ಕಲಾಕೃತಿಗಳನ್ನು ರಚಿಸುವ ಆಸಕ್ತಿ, ಕೌಶಲ ಬೆಳೆಸಿಕೊಂಡ ಅವರು ಅದನ್ನೇ ಹವ್ಯಾಸವಾಗಿ ರೂಢಿಸಿಕೊಂಡರು.

ಕೆನರಾ ಬ್ಯಾಂಕ್‌ ಸಹಕಾರದಲ್ಲಿ ಕಾರ್ಕಳ ಸಿಇ ಕಾಮತ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟಿಸ್ಟ್‌ ಮಿಯರ್‌ನಲ್ಲಿ ವುಡ್‌ ಆ್ಯಂಡ್‌ ಸ್ಟೋನ್‌ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಅಲ್ಲಿಂದ ಅವರ ಕಲಾಕೃತಿಗಳ ಪರಿಧಿ ವಿಸ್ತರಿಸಿದೆ. ರಂಜಿತ್‌ ಅವರ ವೃತ್ತಿ ಜೀವನ ವುಡ್‌ ಕಾರ್ವಿಂಗ್‌ ಆದರೂ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಕಲೆ ಮಾಧ್ಯಮವಾಗಿದೆ. ಸಮಯ ಸಿಕ್ಕಾಗೆಲ್ಲ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಸ್ಫೂರ್ತಿ ನೀಡಿದೆ
ರಂಜಿತ್‌ ಅವರು ಸಂತೂರ್‌ ಸೋಪ್‌ ಮೂಲಕ ಪ್ರಸಿದ್ಧ ವ್ಯಕ್ತಿಗಳ ಕಲಾಕೃತಿ ಮತ್ತು ಪಕ್ಷಿ, ಪ್ರಾಣಿ, ದೇವರ ಮೂರ್ತಿಯನ್ನು ರಚಿಸಿ, ಚಿತ್ರಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದು ಅನೇಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ, ಸ್ಫೂರ್ತಿಯನ್ನೂ ನೀಡಿದೆ. ಪುತ್ತೂರು ಮಹಾಲಿಂಗೇಶ್ವರ ದೇವರ ಕಲಾಕೃತಿಗೂ ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ರಂಜಿತ್‌.

Advertisement

Udayavani is now on Telegram. Click here to join our channel and stay updated with the latest news.

Next