Advertisement

ಗದ್ದುಗೆಗಾಗಿ ಬಿಜೆಪಿಯಲ್ಲಿ ಗುದ್ದಾಟ! ನಾಳೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

02:30 PM Nov 08, 2020 | sudhir |

ಮಹಾಲಿಂಗಪುರ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನ. 9ರಂದು ಮ. 4ಕ್ಕೆ ನಡೆಯಲಿದ್ದು, ಅಧ್ಯಕ್ಷ ಗದ್ದುಗೆಗಾಗಿ ಬಿಜೆಪಿ ವಲಯದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಒಟ್ಟು 23 ಸ್ಥಾನಗಳಲ್ಲಿ 13 ಬಿಜೆಪಿ, 10 ಕಾಂಗ್ರೆಸ್‌ ಸದಸ್ಯರ ಬಲವನ್ನು ಹೊಂದಿದೆ. ಬಿಜೆಪಿಗೆ ಶಾಸಕರು ಮತ್ತು ಸಂಸದರು ಸೇರಿ ಒಟ್ಟು 15 ಮತಗಳಿರುವ ಕಾರಣ ಬಿಜೆಪಿಗೆ ಸುಲಭವಾಗಿ ಪುರಸಭೆಯಲ್ಲಿ ಅಧಿಕಾರ ದೊರೆಯಲಿದೆ.

Advertisement

ಹೆಚ್ಚಿದ ಪೈಪೋಟಿ: ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಹುತೇಕ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದ್ದು, ಗೋದಾವರಿ ಬಾಟ, ಲಕ್ಷ್ಮೀ ಮುದ್ದಾಪುರ ಪ್ರಬಲ
ಆಕಾಂಕ್ಷಿಗಳಾಗಿದ್ದಾರೆ. ಮೊದಲ 30 ತಿಂಗಳ ಅವಧಿಯಲ್ಲಿ ತಲಾ 15 ತಿಂಗಳ ಅಧಿಕಾರ ಹಂಚಿಕೆಯಂತೆ ಇಬ್ಬರು ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಗೌಡರು ಮತ್ತು ಸವದಿಯವರಿಗೆ ಸವಾಲು: ಮಹಾಲಿಂಗಪುರ ಪುರಸಭೆಯ ಬಿಜೆಪಿ 13 ಸದಸ್ಯರು ಮೇಲ್ನೋಟಕ್ಕೆ ಶಾಸಕ ಸಿದ್ದು
ಸವದಿ, ಸ್ಥಳಿಯ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂಬ ಮಾತುಗಳು ಕೇಳಿಬಂದಿವೆ. ಆದರೆ ತೆರೆಮರೆಯಲ್ಲಿ ಅಧ್ಯಕ್ಷ ಆಕಾಂಕ್ಷೆಯ ಪ್ರಬಲ ಸ್ಪ ರ್ಧಿಗಳು ಬಿಜೆಪಿ ಮುಖಂಡರ ಮನೆ-ಮನೆಗೆ ಭೇಟಿ, ತಮ್ಮ ಸಮುದಾಯಗಳ ಹಿರಿಯರಿಂದ ಮುಖಂಡರಿಗೆ ಒತ್ತಡ ಹೇರುವ ಮೂಲಕ ಅಂತಿಮ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ:ವಿನಯ್‌ ಜನ್ಮ ದಿನಾಚರಣೆ: “ಅಣ್ಣಾ ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಕಾರ್ಯಕರ್ತರ ಬೆಂಬಲ

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಹತ್ತಾರು ಮಾನದಂಡ ಆಧರಿಸಿ, ಪಕ್ಷ ಹಿತದೃಷ್ಟಿಯನ್ನು ಆಧರಿಸಿ, ಒಮ್ಮತದ ಮತ್ತು ಸೂಕ್ತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕಾದ ಸವಾಲು ಶಾಸಕ ಸಿದ್ದು ಸವದಿ ಮತ್ತು ಸ್ಥಳಿಯ ಭಾಜಪ ಮುಖಂಡರ ಬಸನಗೌಡ ಪಾಟೀಲ ಅವರ ಮುಂದಿದೆ.

Advertisement

ಕಾಂಗ್ರೆಸ್‌ ಸದಸ್ಯರ ಪ್ರವಾಸ: ಕಾಂಗ್ರೆಸ್‌ 10 ಸದಸ್ಯರು ಕಳೆದ ನಾಲ್ಕು ದಿನಗಳಿಂದ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಅವರು ಅ ಕಾರಕ್ಕೆ ಬರಲು ಇನ್ನು ಮೂರು ಸದಸ್ಯರ ಕೊರತೆ ಇದ್ದು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ 3 ಸದಸ್ಯರು ಕಾಂಗ್ರೆಸ್‌ಗೆ ಹೋಗುವಂತಹ ಯಾವುದೇ ಲಕ್ಷಣಗಳಿಲ್ಲ. ಆದರೂ ಅಂತಿಮ ಕ್ಷಣದವರೆಗೂ ಕ್ಷೀಪ್ರ ರಾಜಕೀಯ ಬದಲಾವಣೆಗಳನ್ನು ಅಲ್ಲಗಳೆಯುವಂತಿಲ್ಲ

– ಚಂದ್ರಶೇಖರ ಮೋರೆ

 

Advertisement

Udayavani is now on Telegram. Click here to join our channel and stay updated with the latest news.

Next