Advertisement

ಮಹಾಲಿಂಗಪುರ : ಟೇಕ್ವಾಂಡೋ ಕ್ರೀಡೆಯಲ್ಲಿ ಮಿಂಚಿದ ಮುಧೋಳದ ದಿಯಾ ಪೂಜಾರಿ

10:38 AM Sep 25, 2022 | Team Udayavani |

ಮಹಾಲಿಂಗಪುರ : ಬೆಂಗಳೂರಿನಲ್ಲಿ ಆಗಸ್ಟ್ ನಲ್ಲಿ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ದಿಯಾ ಪೂಜಾರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ. 2019 ಹಾಗೂ 2020 ರಿಂದ ಸತತ ಮೂರನೇ ಬಾರಿಗೆ ಟೇಕ್ವಾಂಡೋ ಕ್ರೀಡೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.

Advertisement

ಬೆಂಗಳೂರು ಟೇಕ್ವಾಂಡೋ ಅಸೋಷಿಯೇಷನ್, ಸ್ಪೋರ್ಟ್ಸ ಅಥಾರಿಟಿ ಆಫ್ ಇಂಡಿಯಾ, ಕರ್ನಾಟಕಾ ಓಲಂಪಿಕ್ ಅಸೋಷಿಯೇಷನ್ ಅವರ ಸಹಯೋಗದಲ್ಲಿ ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಈ ಕ್ರೇಡೆಗಳು ಇದೀಗ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿರುವದು ವಿಶೇಷವಾಗಿದೆ.

ಟೇಕ್ವಾಂಡೋ ಇದು ವಿಶ್ವದ ಅತ್ಯಂತ ಜನಪ್ರಯ ಯುದ್ಧಕಲೆ ಅಥವಾ ಸಮರ ಕಲೆಯಾಗಿದ್ದು, ಮೂಲತಃ ದಕ್ಷಿಣ ಕೋರಿಯಾ ತನ್ನ ಸೈನಿಕರಿಗೆ ತರಬೇತಿಯ ಭಾಗವಾಗಿ ಈ ಕಲೆಯನ್ನು ಕಲಿಸಿತು.

ಇದೀಗ ಇದು ಜಗತ್ತಿನಾದ್ಯಂತ ಅತ್ಯಂತ ಜನಪ್ರೀಯ ಕ್ರೀಡೆ ಎನಿಸಿಕೊಂಡಿದೆ. ಕರಾಟೆ, ಜುಡೋಗಳಲ್ಲಿ ಕೈಗೆ ಹೆಚ್ಚಿನ ಕೆಲಸವಿರುತ್ತದೆ, ಕೈಯನ್ನು ಬಳಸಲಾಗುತ್ತದೆ ಆದರೆ ಟೇಕ್ವಾಂಡೋ ಕ್ರೀಡೆಯಲ್ಲಿ ಕಾಲು ಹೆಚ್ಚಾಗಿ ಬಳಕೆಯಾಗುತ್ತವೆ. ಭಾರತದಲ್ಲಿಯು ಇದೀಗ ಅತಿ ಹೆಚ್ಚು ಜನ ಈ ಕಲೆಯನ್ನು ಕಲಿಯುತ್ತಿರುವದು ಇನ್ನೊಂದು ವಿಶೇಷ. ಮುಧೋಳದ ಮಣ್ಣಲ್ಲಿ ಕುಸ್ತಿಯ ಕಂಪು ಸೂಸುವದನ್ನು ಇಲ್ಲಿನ ಕುಸ್ತಿಪಟುಗಳು ದೇಶವಿದೇಶಗಳಲ್ಲಿ ಆಡಿ ಗೆದ್ದುಬರುವದರ ಮೂಲಕ ಕಂಡಿದ್ದೇವೆ. ಇದೀಗ ಹೊಸ ಸಮರ ಕಲೆ ಟೇಕ್ವಾಂಡೋದಲ್ಲಿ, ಚಾಂಪಿಯನ್ ಆಗಿರುವದು ನಿಜಕ್ಕು ಹೆಮ್ಮೆಪಡುವಂತಾಗಿದೆ.

2019 ರಲ್ಲಿ ನಡೆದ 37ನೇ ಸಬ್ ಜ್ಯೂನಿಯರ್ ಹಾಗೂ ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಬೆಳ್ಳ ಪದಕ ಗೆದ್ದುಕೊಂಡಿದ್ದಾಳೆ, 2020 ಫೆಬ್ರುವರಿ 3 ರಿಂದ. 9 ರವರೆಗೆ ನಡೆದ ಓಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ, ಮತ್ತೆ ಇದೇ 2022 ಆಗಷ್ಟ 25.ರಿಂದ 28 ರವರೆಗೆ ನಡೆದ ಓಪನ್ ಸ್ಟೇಟ್ ಸಬ್ ಜ್ಯೂನಿಯರ ಟೇಕ್ವಾಂಡೋ ದಲ್ಲಿ ಬೆಳ್ಳಿಯ ಪದಕ ಗೆದ್ದು ತಂದಿದ್ದಾಳೆ.

Advertisement

ಇದನ್ನೂ ಓದಿ : 1050 ಖಾಸಗಿ ಫೈನಾನ್ಸ್‌: ಅಕ್ರಮ ಬಡ್ಡಿ ಕಾಟ ತಪ್ಪಿಸಲು ಸೌಹಾರ್ದ ಕ್ಷೇತ್ರ ಬೆಳೆಸಿ

ದಿಯಾ ಟೇಕ್ವಾಂಡೋದಲ್ಲಿರುವ ಎರಡು ರೀತಿಯ ಸಮರಕಲೆಗಳಲ್ಲಿ ಕಿಯೋರುಗಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಮುಧೋಳದ ಸಾಯಿನಿಕೇತನ ಶಾಲೆಯಲ್ಲಿ
5 ನೇ ತರಗತಿಯಲ್ಲಿ ಓದುತ್ತಿರುವ ದಿಯಾ ಪೂಜಾರಿ ಸ್ಥಳೀಯ ಆರ್ ಎಂ ಜಿ ಕಾಲೇಜು ಪಕ್ಕದಲ್ಲಿರುವ ಸ್ಪೋರ್ಟ್ಸ ಕ್ಲಬ್ ನಲ್ಲಿ ಕಲಿಸುವ ಟೇಕ್ವಾಂಡೋ ಕ್ರೀಡೆಯ ತರಬೇತಿ ಪಡೆಯುತ್ತಿದ್ದು, ಇವರಿಗೆ ಅನೀಲ ಮುನವಳ್ಳಿ, ಸಚಿನ್ ಜಾದವ್, ಮನೋಜ ಇವರು ತರಬೇತುದಾರರಾಗಿದ್ದಾರೆ.

ಮುಧೋಳ ರನ್ನ‌ನ ಮುಖಾಂತರ ಸಾಹಿತ್ಯಕವಾಗಿ ಹೆಸರುವಾಸಿಯಾದರೆ, ಇಲ್ಲಿನ ಘೋರ್ಪಡೆ ಮಹಾರಾಜರು ಬೆಳೆಸಿದ ವಿಶೇಷ ಬೇಟೆನಾಯಿ ತಳಿ ಇದೀಗ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡು ಮುಧೋಳದ ಕೀರ್ತಿ ಹೆಚ್ಚಿಸಿದೆ, ಇಲ್ಲಿನ ಕುಸ್ತಿ ಪಟುಗಳು ದೇಶ ವಿದೇಶಗಳಲ್ಲಿ ಆಡಿ ಮುಧೋಳ ಶಕ್ತಿಪ್ರದರ್ಶನದಲ್ಲೂ ಹಿಂದೆ ಬಿದ್ದಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಇದೀಗ ವಿದೇಶ ಯುದ್ಧ ಅಥವಾ ಸಮರ ಕಲೆ, ಸ್ವಯಂ ರಕ್ಷಣೆಗೋಸ್ಕರ ಆಡುವ ಟೇಕ್ವಾಂಡೋ ದಲ್ಲಿ ದಿಯಾಳಂಥ ಪ್ರತಿಭೆಗಳು ಚಾಂಪಿಯನ್ ಳಾಗಿ ಹೊರಹೊಮ್ಮುತ್ತಿರುವದು ಮತ್ತಷ್ಟು ಹೆಮ್ಮೆಪಡುವಂಥ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next