Advertisement

ಮಹಾಲಿಂಗಪುರ ಪುರಸಭೆ: ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

03:59 PM Mar 12, 2020 | Suhan S |

ಮಹಾಲಿಂಗಪುರ: ಪುರಸಭೆಗೆ ಚುನಾವಣೆ ನಡೆದು 18 ತಿಂಗಳ ನಂತರ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದೆ.

Advertisement

ಬಿಜೆಪಿಗೆ ಅಧಿಕಾರ: 23 ಸದಸ್ಯ ಬಲದ ಪುರಸಭೆಯಲ್ಲಿ 13 ಜನ ಬಿಜೆಪಿ ಸದಸ್ಯರು ಮತ್ತು 10 ಜನ ಕಾಂಗ್ರೆಸ್‌ ಸದಸ್ಯರು ಇದ್ದಾರೆ. 13 ಸದಸ್ಯರ ಬಲದ ಜತೆಗೆ ಸಂಸದರು, ಶಾಸಕರ ಮತಗಳು ಇರುವುದರಿಂದ ಪುರಸಭೆ ಅಧಿ ಕಾರ ಗದ್ದುಗೆ ಏರಲು ಬಿಜೆಪಿಗೆ ಸರಳವಾಗಲಿದೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. 10 ಜನ ಸದಸ್ಯರ ನಡೆಉವೆ ಪೈಪೋಟಿಯಿದೆ. ಅಧ್ಯಕ್ಷ ಆಕಾಂಕ್ಷಿಗಳ ಲಾಬಿ, ಪಕ್ಷದ ನಾಯಕರುಗಳ ಮನೆಗೆ ಸದಸ್ಯರ ಭೇಟಿ, ಅವಶ್ಯ ಬಿದ್ದರೆ ರೆಸಾರ್ಟ್‌ ರಾಜಕಾರಣ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.

ಉಪಾಧ್ಯಕ್ಷ ಸರಳ: ಹಿಂದುಳಿದ ವರ್ಗ ಮಹಿಳೆ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಗೋದಾವರಿ ಬಾಟ, ಲಕ್ಷ್ಮೀ ಮುದ್ದಾಪುರ ಇಬ್ಬರಲ್ಲಿ ಒಬ್ಬರು ಉಪಾಧ್ಯಕ್ಷರಾಗಲಿದ್ದಾರೆ.  ಗೌಡರ ತೀರ್ಮಾನ ಅಂತಿಮ: ಆಕಾಂಕ್ಷಿಗಳು ಶತ ಪ್ರಯತ್ನ ಮಾಡಿದರೂ ಸಹ ಬಸನಗೌಡ ಪಾಟೀಲ ತೀರ್ಮಾನವೇ ಅಂತಿಮವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next