Advertisement

ಮುಂಬಯಿಯಲ್ಲಿ ಯಕ್ಷ ಪ್ರಮೀಳೆಯರ ಅಬ್ಬರ

06:00 AM Aug 17, 2018 | |

ಮುಂಬಯಿಯಲ್ಲಿ ಮೂರು ವರ್ಷದಿಂದ ಮಹಿಳಾ ಯಕ್ಷ ಸಂಭ್ರಮವನ್ನು ಹಮ್ಮಿಕೊಂಡ  ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗ (ರಿ.)ಕ್ಕೆ ಸಲ್ಲುತ್ತದೆ. ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿಯ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ ಇವರ ನೇತೃತ್ವದ ತಂಡದ ಕಲಾವಿದೆಯರು ಅಮೋಘ ಪ್ರಸಂಗಗಳೊಂದಿಗೆ ಮುಂಬಯಿಯ ಕಲಾರಸಿಕರ ಮನಸೂರೆಗೊಂಡಿದ್ದಾರೆ. 

Advertisement

ಈ ವರ್ಷ ಭವ್ಯಶ್ರೀ ಹರೀಶ್‌ ಕುಲ್ಕುಂದ ಭಾಗವತರಾಗಿ ಮತ್ತು ಕು| ಅಪೂರ್ವಾ ಚೆಂಡೆಕರಾಗಿ ಪರಿಚಯಿಸಲ್ಪಟ್ಟರು. ಥಾಣೆಯಲ್ಲಿ “ಮದನಾಕ್ಷಿ ತಾರಾವಳಿ-ಶಿವಭಕ್ತ ವೀರಮಣಿ’, ಮೀರಾರೋಡ್‌ ಸಭಾಭವನದಲ್ಲಿ “ಸುದರ್ಶನ ಗರ್ವಭಂಗ-ಭಾರ್ಗವವಿಜಯ’, ಐರೋಲಿ ಹೆಗಡೆ ಭವನದಲ್ಲಿ “ಶೂರ ಪದ್ಮಾಸುರ-ಕುಮಾರ ವಿಜಯ’, ಪನ್ವೇಲ್‌ ಬಾಲಾಜಿ ಮಂದಿರದಲ್ಲಿ ಮತ್ತು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ “ಶ್ರೀ ದೇವೀ ಮಹಾತೆ¾’ ಎಂಬ ಪ್ರಸಂಗಗಳು ಪ್ರದರ್ಶನ ಕಂಡವು. ಊರಿನಲ್ಲಾಗುವಂತೆ ದೊಂದಿ ರಾಳ ಮತ್ತು ಬ್ಯಾಂಡ್‌ ವಾದ್ಯ ಇವುಗಳ ಅಬ್ಬರದೊಂದಿಗೆ ಮಹಿಷಾಸುರ, ಚಂಡ-ಮುಂಡರ ಪ್ರವೇಶಗಳು ಮನಸೂರೆಗೊಂಡವು. ಯಾವುದೇ ಪೂರ್ವತಯಾರಿಗಳಿಲ್ಲದೆ ಪ್ರತಿಯೊಂದು ಪ್ರಸಂಗಗಳು ಅದ್ಭುತ ಪ್ರದರ್ಶನ ಕಾಣುವಲ್ಲಿ ಕಲಾವಿದೆಯರ ಚಾಕಚಕ್ಯತೆ ಶ್ಲಾ ಸುವಂತಹದ್ದೆ.

ಕವಿ ಮುದ್ದಣ ವಿರಚಿತ “ಕುಮಾರ ವಿಜಯ ಪ್ರಸಂಗ’ ಬಹಳ ಮೆಚ್ಚುಗೆಗೆ ಪಾತ್ರವಾಯಿತು. ಯಾವುದೇ ವ್ಯವಸಾಯಿ ಮೇಳಕ್ಕೆ ಕಡಿಮೆಯಿಲ್ಲದೆ ಪ್ರಸಂಗಗಳು ಪ್ರದರ್ಶನಗೊಂಡವು ಎಂಬುದು ಮುಂಬಯಿಯ ಕಲಾಪ್ರೇಕ್ಷಕರ ಮೆಚ್ಚುನುಡಿ. ಕಿರಿಯರಿಂದ ಹಿಡಿದು ಹಿರಿಯವರೆಗೂ ಯಾರೂ ಕುಳಿತಲ್ಲಿಂದ ಕದಲದೇ ಕೊನೆಯ ತನಕ ಮಹಿಳಾ ಕಲಾವಿದೆಯರ ಬಯಲಾಟವನ್ನು ಆಸ್ವಾದಿಸಿದರು. 

 ಹವ್ಯಾಸಿ ಭಾಗವತ ಮಹೇಶ್‌ ಕನ್ಯಾಡಿ ಮತ್ತು ಭವ್ಯಶ್ರೀ ಹರೀಶ್‌ ಕುಲ್ಕುಂದ ಇವರು ಭಾಗವತರಾಗಿ ಮೇಳೈಸಿದರು. ಚೆಂಡೆಯಲ್ಲಿ ಸುಬ್ರಹ್ಮಣ್ಯ ಭಟ್‌ ದೇಲಂತಮಜಲು ಮತ್ತು ಕು| ಅಪೂರ್ವ ಸಾಥ್‌ ನೀಡಿದರು. ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು ಕೈಚಳಕವನ್ನು ತೋರಿದರು ಮತ್ತು ಚಕ್ರತಾಳದಲ್ಲಿ ಅಮೋಘ ಸಹಕರಿಸಿದರು. 

ಮುಮ್ಮೇಳದಲ್ಲಿ ಮಹಿಷಾಸುರನಾಗಿ ಪೂರ್ಣಿಮಾ ಯತೀಶ್‌ ರೈ ಅಬ್ಬರಿಸಿದರು. ಅಂತೆಯೇ ಉಳಿದ ಪ್ರಸಂಗಗಳಲ್ಲಿ ತಮ್ಮ ಸಾಧನೆಯ ಉತ್ಕೃಷ್ಠತೆಯನ್ನು ತೋರಿದರು. ಶ್ರೀದೇವಿಯಾಗಿ ವಿ| ಸುಮಂಗಲಾ ರತ್ನಾಕರ್‌ ರಾವ್‌ ಅವರ ಮನೋಜ್ಞ ಅಭಿನಯ, ಮಾಲಿನಿಯಾಗಿ ಸುಷ್ಮಾ ವಸಿಷ್ಠ ಮೈರ್ಪಾಡಿ ಇವರ ಲೀಲಾಜಾಲವಾದ ಲಯಬದ್ಧವಾದ ಅಭಿನಯ, ಮಾಲತಿ ವೆಂಕಟೇಶ ಅವರ ಗಾಂಭೀರ್ಯದ ರಕ್ತಬೀಜ, ವಸುಂಧರ ಹರೀಶ್‌ ಶೆಟ್ಟಿ ಇವರ ಪುಂಡುವೇಷ ಮತ್ತು ಉಳಿದ ಕಲಾವಿದೆಯರ ತಮ್ಮ ಪ್ರತಿಭೆಗೆ ತಕ್ಕ ಪ್ರಯತ್ನದಿಂದ ದೇವೀ ಮಹಾತ್ಮೆ ಪ್ರಸಂಗವು ರಂಜಿಸಿತು. 

Advertisement

ಉಳಿದಂತೆ ಬೇರೆ ಎಲ್ಲಾ ಪ್ರಸಂಗಗಳೂ ಅದ್ಭುತವಾಗಿ ಪ್ರದರ್ಶನ ಕಂಡವು. ಸಾಯಿಸುಮ ಮಿಥುನ್‌ರಾಜ್‌ ನಾವಡ ಇವರ ಬಣ್ಣದ ವೇಷ, ರೇವತಿ ನವೀನ್‌ರವರ ಹಾಸ್ಯ, ಸೌಜನ್ಯಾ ಶ್ರೀಕುಮಾರ್‌,ಕು| ಛಾಯಾಲಕ್ಷ್ಮೀ, ಕು|ಚೈತ್ರಾ, ಕು|ಪ್ರತಿಷ್ಠಾ ರೈ, ಕು|ಕೃತಿ ವಿ ರಾವ್‌, ಕು| ಮೈತ್ರಿ ಭಟ್‌ ಮವ್ವಾರು, ಕು| ವೈಷ್ಣವಿ ರಾವ್‌, ಕು| ಸಮನ್ವಿ ರೈ, ಕು| ಜಿತಾಶ್ರೀ ಮತ್ತು ಬೇಬಿ ಶ್ರೇಯಾ ಇವರೆಲ್ಲರು ಯಶಸ್ವಿ ಪ್ರದರ್ಶನ ನೀಡುವಲ್ಲಿ ಸಹಭಾಗಿಗಳಾದರು. ವೇಷಭೂಷಣದಲ್ಲಿ ಗಂಗಾಧರ್‌ ಶೆಟ್ಟಿಗಾರ್‌ ಇವರ ನೇತೃತ್ವದ ಶ್ರೀ ಮೋಹಿನಿ ಕಲಾ ಸಂಪದ ಮತ್ತು ಬಳಗದವರು ಸಹಕರಿಸಿದರು. 
 
 ಕಡಲಕಲಿ

Advertisement

Udayavani is now on Telegram. Click here to join our channel and stay updated with the latest news.

Next