Advertisement
ರಥೋತ್ಸವ ಅಂಗವಾಗಿ ಏರ್ಪಡಿಸಿದ್ದ 155ನೇ ಮಹಾದೇವಿಯ ಮಹಾಪುರಾಣ ಮಂಗಲಗೊಂಡಿತು. ವಿಶೇಷವೆಂದರೆ ತಾಳಿಕೋಟೆ ಸಮಿಪದ ಗೋಟಖಂಡಿR ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಮಾತೆ ಮಹಾದೇವಿ ತಾಯಿ ಮಂ ದಿರಕ್ಕೆ ವಿವಾಹವಾಗದ ಹೆಣ್ಣು ಮಕ್ಕಳು ಭೇಟಿ ನೀಡಿ ತಮಗೆ ಪತಿ ಭಾಗ್ಯವನ್ನು ಅಪೇಕ್ಷೀಸಿದಲ್ಲಿ ಮದುವೆ ಭಾಗ್ಯ ದೊರತೇ ದೊರೆಯುತ್ತದೆ ಎಂಬುದು ಈ ಭಾಗದಲ್ಲಿನಹಿರಿಯರ ಮಾತು.
Related Articles
ಬೇಡಿಕೆ ಈಡೇರಿಸಿಕೊಂಡು ಸುಖಃ ಸಂಸಾರ ಸಾಗಿಸತೊಡಗಿದ್ದಾರೆ. ಪ್ರತಿ ವರ್ಷ ಈ ವರ ನೀಡಿದ ಮಹಾದೇವಿ ತಾಯಿಯನ್ನು ಮರೆಯದೇ ಆಕೆಯ ರಥೋತ್ಸವ ದಿನದಂದು ಆಗಮಿಸಿ ಎಲ್ಲ ಮುತ್ತೈದೆಯರು ಒಗ್ಗೂಡಿ ಪುರುಷರ ಆಸರೆ ಇಲ್ಲದೇ ರಥವನ್ನು ಎಳೆಯುವುದರೊಂದಿಗೆ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ.
Advertisement
ಮಹಾದೇವಿ ತಾಯಿಯ ನೂತನ ಮಹಾಮೂರ್ತಿಯನ್ನು ಗ್ರಾಮದ ಮಹಾದಾನಿ ಮಡಿವಾಳಮ್ಮ ಅಗಸರ ಎಂಬುವರು 70 ಸಾವಿರ ರೂ. ಖರ್ಚು ಮಾಡಿ ಸ್ವ ಇಚ್ಚೆಯಿಂದ ನಿರ್ಮಿಸಿ ಭಕ್ತಾದಿಗಳಿಗೆ ಭಕ್ತಿ ಸಮರ್ಪಿಸಲು ಅನವು ಮಾಡಿಕೊಟ್ಟಿದ್ದಾರೆ. ಅದರಂತೆ ನೂತನ ರಥ ಕಳೆದ 13 ವರ್ಷಗಳ ಹಿಂದೆಯೇ ಈ ಗ್ರಾಮದಿಂದ ಮುತ್ತೈದೆತನದ ಭಾಗ್ಯವನ್ನು ಪಡೆದುಕೊಂಡ ಹೋದ ಸುಮಂಗಲೆಯರೆಲ್ಲರೂ ತಮ್ಮ ತಮ್ಮ ಪತಿ ಮನೆಯಿಂದಲೇ ದೇಣಿಗೆ ಹಣ ಸಂಗ್ರಹಿಸಿ ಎಲ್ಲರೂ ಒಗ್ಗೂಡಿ 2.75 ಲಕ್ಷ ರೂ. ವೆಚ್ಚ ಭರಿಸಿ ಮಹಾದೇವಿ ತಾಯಿಯ ನೂತನ ರಥ ನಿರ್ಮಿಸಿದ್ದಾರೆ. ಈ ರಥವನ್ನು ಪ್ರತಿ ವರ್ಷ ಸುಮಂಗಲೆಯರೇ ಎಳೆದು ಭಕ್ತಿ ಸಮರ್ಪಿಸಿ ಸುಖಃ ಶಾಂತಿ ನೆಮ್ಮದಿ ಅಪೇಕ್ಷಿಸಿ ವರ ಪಡೆದು ಸಾಗುತ್ತಿದಂತೆ ಈ ಸಲವೂ ಸಹ ಭಕ್ತಿ ಭಾವದಿಂದ ರಥವನ್ನು ಎಳೆದು ಭಕ್ತಿಯನ್ನು ಸಮರ್ಪಿಸಿದರು.
ಈ ರಥವು ಮಹಾದೇವಿ ತಾಯಿ ಮಂದಿರದಿಂದ ಸುಮಾರು 1 ಕಿ.ಮೀ. ಮೀಟರ್ ಅಂತರದಲ್ಲಿರುವ ಬಸವೇಶ್ವರ ಪಾದಗಟ್ಟೆವರೆಗೆ ತಲುಪಿ ಮರಳಿ ಅದೇ ಮಾರ್ಗದಿಂದ ಶ್ರೀದೇವಿಯ ಮಂದಿರಕ್ಕೆ ತಲುಪಿ ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಜಾತ್ರಾ ಮಹೋತ್ಸವದಲ್ಲಿ ಮುಂಬೈ, ಪುಣೆ, ಸೊಲ್ಲಾಪುರ, ಕೊಲ್ಲಾಪುರ, ಹೈದ್ರಾಬಾದ್, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ವಿಜಯಪುರ ನಗರ, ಪಟ್ಟಣಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು.