Advertisement

ಮಹದೇವಪುರ: ವಾರಕ್ಕೊಮ್ಮೆ ನೀರು ಪೂರೈಕೆ

03:44 PM Jun 06, 2019 | Suhan S |

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮಕ್ಕೆ ವಾರಕ್ಕೆ ಒಂದು ಬಾರಿ ನೀರು ಸರಬರಾಜು ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಪಂ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ತಾಪಂ ಇಒ ಶಿವಕುಮಾರ್‌ ಅವರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಗ್ರಾಮ ಬಹು ಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಬಿಡುಗಡೆ ಎಂದು ಹೇಳಲಾಗಿದ್ದರೂ ಅದು ಇನ್ನು ಚಾಲನೆಗೆ ಬರುವ ಕನಸಾಗಿದೆ. ಅದರ ಜೊತೆಗೆ, ಈ ಹಿಂದೆ 2017-18ನೇ ಸಾಲಿನ ಎಸ್‌ಟಿಪಿ ಯೋಜನೆಯಡಿ ಮಹದೇವಪುರ ಗ್ರಾಪಂ ವ್ಯಾಪ್ತಿಗೆ 36.59 ಲಕ ್ಷರೂ. ಗಳನ್ನು ಈ ಹಿಂದಿನ ಸರ್ಕಾರ ಬಿಡುಗಡೆ ಮಾಡಿ ಶುದ್ಧ ಕುಡಿಯುವ ನೀರು ಘಟಕವನ್ನು ರಾಜಪರಮೇಶ್ವರಿ ಅಣೆಕಟ್ಟೆ ಮೂಲಕ ಜಾಕ್‌ವಾಲ್ ನಿರ್ಮಾಣ ಮಾಡಿ ನಾಲೆಯಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್‌ ಅಳವಡಿಸಿ ನೀರು ಸರಬರಾಜಿನ ಕಾಮಗಾರಿ ನಡೆಸಿ ಅರ್ಧಕ್ಕೆ ನಿಂತು ಹೋಗಿದೆ.

ಅಧಿಕಾರಿಗಳ ವಿರುದ್ಧ ದೂರು: ಲೇ ಹಣವೂ ಬಿಡುಗಡೆಯಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಸಂಬಂಧಿಸಿದ ಕುಡಿಯುವ ನೀರು ಸರಬರಾಜು ಇಲಾಖೆ ವಿಫ‌ಲವಾಗಿದ್ದು ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಜಿಪಂ ಎಂಜಿನಿಯರ್‌ಗಳ ವಿರುದ್ಧ ಆರೋಪ ಮಾಡಿದರು. ತ್ವರಿತವಾಗಿ ಕಾಮಗಾರಿ ನಡೆಸದೆ ಅಧಿಕಾರಿಗಳು ಗ್ರಾಪಂ ಪಿಡಿಒ ವೈಮನಸ್ಯದಿಂದ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಪರದಾಡಬೇಕಿದೆ ಎಂದು ಜಿಪಂ ಎಇಇ ಅವರಿಗೆ ದೂರು ನೀಡಿ ಗ್ರಾಮಕ್ಕೆ ನೀರು ಕೊಡಿ ಎಂದು ಕೇಳಿದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಧಮ್ಕಿ ಹಾಕುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ದೂರಿದರು.

ನೀರಿಗೆ ಪರದಾಟ:ಪ್ರತಿದಿನ ಗ್ರಾಮಸ್ಥರು ನದಿ ಹಾಗೂ ಕೊಳವೆ ಬಾವಿಗಳ ಮೂಲಕ ನೀರು ತರಲು ಸೈಕಲ್ ಹಾಗೂ ಬೈಕ್‌ಗಳಲ್ಲಿ ತೆಗೆದುಕೊಂಡು ಬಿಂದಿಗೆ ಕಟ್ಟಿಕೊಂಡು ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯಿತಿ ಸೇರಿದಂತೆ ಇತರ ಕಡೆಗಳಿಗೆ ದೂರು ನೀಡದರೂ ಕ್ರಮ ಕೈಗೊಂಡು ಗ್ರಾಮಕ್ಕೆ ನೀರು ಸರಬರಾಜು ಮಾಡಲು ಮುಂದಾಗದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿ ಕೂಡಲೇ ಸ್ಥಳಕ್ಕೆ ಜಿಪಂ ಎಇಇ ಅವರನ್ನು ಕರೆಸಬೇಕು ಎಂದು ತಾಪಂ ಇಒ ಶಿವಕುಮಾರ್‌ ಅವರಿಗೆ ಪಟ್ಟು ಹಿಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಜಗದೀಶ್‌, ಗ್ರಾಪಂ ಸದಸ್ಯರಾದ ಎಂ.ವಿ.ಕೃಷ್ಣ, ನಟರಾಜು, ಮಾಜಿ ಸದಸ್ಯ ಗೋವಿಂದರಾಜು, ತಾಪಂ ಮಾಜಿ ಸದಸ್ಯ ತಮ್ಮೆಗೌಡ, ಶಿವಣ್ಣ ಗವಿಸಿದ್ದು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next