Advertisement

ಪೊಲೀಸರ ಭರ್ಜರಿ ಕಾರ್ಯಾಚರಣೆ : 23 ಆರೋಪಿಗಳ ಬಂಧನ, 1ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶ

08:50 PM Jun 09, 2022 | Team Udayavani |

ಮಹದೇವಪುರ :  ವೈಟ್​ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 23 ಆರೋಪಿಗಳ ಸಹಿತ 1ಕೋಟಿಗೂ ಅಧಿಕ ಮೌಲ್ಯದ ಕಳವು ಮಾಲುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ವಿವಿಧ ಕಳ್ಳತನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 23 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1.70 ಕೋಟಿ ರೂ. ಮೌಲ್ಯದ ಕಳವು ಮಾಡಿದ್ದ ಮಾಲು ಜಪ್ತಿ ಮಾಡಲಾಗಿದೆ.

ಇದರಲ್ಲಿ 9 ಕಾರು, 45 ಬೈಕ್​ಗಳು, 135 ಮೊಬೈಲ್​ಗಳು, 5 ಕ್ಯಾಮರಾ, 1 ಲ್ಯಾಪ್​ಟಾಪ್, 150 ಗ್ರಾಂ ಚಿನ್ನ ಒಳಗೊಂಡಿದೆ.

ವಶಕ್ಕೆ ಪಡೆದ ಮಾಲುಗಳು ಹೆಚ್​ಎಎಲ್, ಕಾಡುಗುಡಿ, ಬೆಳ್ಳಂದೂರು, ಮಾರತ್ತಹಳ್ಳಿ, ವೈಟ್​ಫೀಲ್ಡ್  ಕೆಆರ್ ಪುರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಾಗಿವೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next