Advertisement

Mahadeshwara: ಬೆಟ್ಟದ ಮಾದಪ್ಪನ ಪ್ರತಿಮೆ ಬಳಿ ಮತ್ತೆ ಮಣ್ಣು ಕುಸಿತ

02:49 PM Nov 07, 2023 | Team Udayavani |

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ 108 ಅಡಿ ಎತ್ತರದ ಪ್ರತಿಮೆ ಬಳಿ ಸಮೀಪ ಮತ್ತೂಮ್ಮೆ ಮಣ್ಣುಕುಸಿತ ಸಂಭವಿಸಿ ಬೃಹತ್‌ ಕಲ್ಲುಗಳೆಲ್ಲ ಸಮೀಪದ ಜಮೀನುಗಳಿಗೆ ಉರುಳಿ ಬಿದ್ದಿವೆ.

Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪದಗಿರಿ ಒಡ್ಡು ಪ್ರದೇಶದಲ್ಲಿ 108 ಅಡಿ ಎತ್ತರ ಮಹದೇಶ್ವರನ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಪ್ರತಿಮೆ ನಿರ್ಮಾಣಗೊಂಡ 2 ತಿಂಗಳಿನಲ್ಲೆ ಧಾರಾಕಾರ ಮಳೆಗೆ ಒಂದು ಭಾಗದ ಮಣ್ಣು ಕುಸಿದಿದ್ದ ಪರಿಣಾಮ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮತ್ತೂಮ್ಮೆ ಮಣ್ಣುಕುಸಿತ ಸಂಭವಿಸಿದೆ.

ಇದರ ಪರಿಣಾಮ ತಡೆಗೋಡೆಯಾಗಿ ನಿರ್ಮಿಸಿದ್ದ ಬೃಹತ್‌ ಕಲ್ಲುಗಳೆಲ್ಲ ಕೆಳಭಾಗದ ಜಮೀನು ಗಳಿಗೆ ಉರುಳಿಬಿದ್ದಿವೆ. ಇದರಿಂದಾಗಿ ಜಮೀನಿನಲ್ಲಿ ಬೆಳೆದಿದ್ದ ಕೆಲ ಗಿಡ-ಮೆಗಳೆಗೆಲ್ಲಾ ಹಾನಿಯಾಗಿದೆ.

ಒಟ್ಟಾರೆ ದೀಪದಗಿರಿ ಒಡ್ಡುವಿನಲ್ಲಿ ಮಳೆ ಬಂದಾಗಲೆಲ್ಲಾ ಈ ರೀತಿಯ ಮಣ್ಣುಕುಸಿತ ಸಂಭವಿಸಿರುವುದು ಭ ಕ್ತಾದಿಗಳ ಆತಂಕಕ್ಕೆ ಕಾರಣವಾಗಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಪ್ರತಿಮೆ ಸುತ್ತಮುತ್ತಲು ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಭಕ್ತಾದಿಗಳ ದರ್ಶನಕ್ಕೆ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next