Advertisement

ಗೋವಾ ರಾಜ್ಯಕ್ಕಿದೆ ನಿಸರ್ಗದತ್ತ ಅಭಯಹಸ್ತ 

07:28 PM Jul 09, 2021 | Team Udayavani |

ಪಣಜಿ: ಗೋವಾಕ್ಕೆ ನಿಸರ್ಗದ ಅಭಯಹಸ್ತವಿದೆ. ರಾಜ್ಯದ ಜನತೆ ನಿಸರ್ಗವನ್ನು ಪೂಜಿಸುತ್ತಾರೆ. ನಮ್ಮ ಜೀವದಾಯಿನಿ ಮಹದಾಯಿ ನದಿಯನ್ನು ಕರ್ನಾಟಕಕ್ಕೆ ಒಪ್ಪಿಸಿ ಗೋವಾ ಜನತೆಗೆ ವಿಶ್ವಾಸಘಾತ ವೆಸಗಿದ ಮಾಜಿ ಕೇಂದ್ರ ಪರಿಸರ ಮಂತ್ರಿ ಪ್ರಕಾಶ ಜಾವಡೇಕರ್‌ ಅವರನ್ನು ಮಂತ್ರಿಮಂಡಲದಿಂದ ಹೊರಹಾಕಿದ್ದರಿಂದ ನೈಸರ್ಗಿಕ ನ್ಯಾಯ ಲಭಿಸಿದಂತಾಗಿದೆ ಎಂದು ಗೋವಾ ಪ್ರದೇಶ ಕಾಂಗ್ರೆಸ್‌ ಸಮೀತಿ ಅಧ್ಯಕ್ಷ ಗಿರೀಶ್‌ ಚೋಡಣಕರ್‌ ಟೀಕಾ ಪ್ರಹಾರ ನಡೆಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಿಕೊಳ್ಳಲು ಶಾಮೀಲಾಗಿರುವ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಅವರಿಗೂ ಕೂಡ ಶೀಘ್ರವೇ ಶಿಕ್ಷೆಯಾಗಲಿದೆ. ಗೋವಾ ಜನರ ಭಾವನೆಯೊಂದಿಗೆ ಆಟವಾಡಿದವರಿಗೆ ಇದು ಒಂದು ಪಾಠವಾಗಿದೆ ಎಂದು ಗಿರೀಶ್‌ ಚೋಡಣಕರ್‌ ವಾಗ್ಧಾಳಿ ನಡೆಸಿದರು.

ಉತ್ತರ ಗೋವಾ ಸಂಸದ ಶ್ರೀಪಾದ ನಾಯಕ್‌ ಅವರನ್ನು ಆಯುಷ್‌ ಖಾತೆಯಿಂದ ಕೈಬಿಟ್ಟು, ಪೋರ್ಟ್‌, ಶಿಪಿಂಗ್‌, ವಾಟರ್‌ವೆàಜ್‌ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಮಂತ್ರಿ ಸ್ಥಾನ ನೀಡಲಾಗಿದೆ. ಗೋವಾದ ಮಟ್ಟಿಗೆ ಇದು ಸಂತಸದ ಸಂಗತಿಯಾಗಿದೆ. ಗೋವಾದ ನದಿಯನ್ನು ಪ್ರಧಾನಿ ಮೋದಿಯ ಕ್ರೋನ್‌ ಕ್ಲಬ್‌ನಲ್ಲಿ ಸಿಕ್ಕಿಸಲು ಶ್ರೀಪಾದ ನಾಯಕ ಬಿಡುವುದಿಲ್ಲ ಎಂಬ ಆಶಯವಿದೆ ಎಂದು ಗಿರೀಶ್‌ ಚೋಡಣಕರ್‌ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next