Advertisement

ಮಹದಾಯಿ ; ಮಧ್ಯಪ್ರವೇಶಕ್ಕೆ ಸುಪ್ರೀಂಗೆ ಮೊರೆ

07:32 PM Jul 17, 2021 | Team Udayavani |

ನರಗುಂದ: ಕುಡಿಯುವ ನೀರಿಗೆ ವಿಳಂಬ ಮಾಡೋದೇಕೇ? ಕೂಡಲೇ ಮಹದಾಯಿ ಯೋಜನೆಗೆ ಸಂಬಂಧಿಸಿ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿ ಸರ್ವೋತ್ಛ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ಜೀವ ಜಲಕ್ಕಾಗಿ ಸುದೀರ್ಘ‌ 6 ವರ್ಷ ಪೂರೈಸಿ 7 ನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಮತ್ತು ಕಳಸಾ-ಬಂಡೂರಿ 2190ನೇ ದಿನದ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಅವರು ಮಾತನಾಡಿದರು.

ಮಹದಾಯಿ ನ್ಯಾಯಾಧಿಕರಣ ಕುಡಿಯುವ ನೀರಿಗೆ ಆದ್ಯತೆ ನೀಡಿ 5.5 ಟಿಎಂಸಿ ನೀರು ಹಂಚಿಕೆ ಮಾಡಿದೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿನ ವಿಳಂಬ ಖಂಡಿಸಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಲಿದ್ದೇವೆ ಎಂದು ತಿಳಿಸಿದರು. ರೈತರೇ ದೇಶದ ಮಾಲಿಕರು. ಆದರೆ, ಇಂದು ರೈತರ ಸಮಸ್ಯೆಗಳಿಗೆ ಪರಿಹಾರ ಸೂತ್ರಗಳಿಲ್ಲ. ಇಂದು ಕರಾಳ ದಿನ ಆಚರಿಸಿದ್ದೇವೆ. ಶಾಶ್ವತ ಖರೀದಿ ಕೇಂದ್ರ ಸ್ಥಾಪನೆಗಾಗಿ ರಾಜ್ಯ ಉತ್ಛ ನ್ಯಾಯಾಲಯದಲ್ಲಿ ಪಿಐಎಲ್‌ ಸಲ್ಲಿಸಲಾಗಿದೆ ಎಂದರು.

2018ರಲ್ಲಿ ಮಹದಾಯಿ ಹೋರಾಟದಲ್ಲಿ 11 ಜನ ರೈತರು ಮಡಿದಿದ್ದಾರೆ. 8 ಜನರಿಗೆ ಇದುವರೆಗೂ ಸರ್ಕಾರದ ಪರಿಹಾರ ದೊರಕಿಲ್ಲ. ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಒದಗಿಸಲು ಕಾನೂನು ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದು ಸೊಬರದಮಠ ಸ್ವಾಮೀಜಿ ಹೇಳಿದರು. ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಕಾರ್ಯದರ್ಶಿ ಎಸ್‌.ಬಿ.ಜೋಗಣ್ಣವರ, ಗುರು ರಾಯನಗೌಡ್ರ, ಪರಶುರಾಮ ಜಂಬಗಿ, ಹನಮಂತ ಮಡಿವಾಳರ, ಈರಣ್ಣ ಗಡಗಿ, ಹನುಮಂತ ಸರನಾಯ್ಕರ, ಮುತ್ತಣ್ಣ ಕುರಿ, ಅರ್ಜುನ ಮಾನೆ ಹಾಗೂ ಎಲ್ಲ ಮಹದಾಯಿ ಹೋರಾಟಗಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next