Advertisement

ಮಹದಾಯಿ ಹೋರಾಟದಲ್ಲಿ ನಮಗೆ ಜಯ ಸಿಗಲಿದೆ : ಸಚಿವ ಸುಭಾಷ್ ಶಿರೋಡ್ಕರ್

06:29 PM Jan 20, 2023 | Team Udayavani |

ಪಣಜಿ: ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‍ನಲ್ಲಿ ನಾವು ಬಲವಾಗಿ ವಾದ ಮಾಡುತ್ತಿದ್ದೇವೆ. ಇದಲ್ಲದೇ ಕರ್ನಾಟಕ ಸರ್ಕಾರವನ್ನು ವಿವಿಧ ಹಂತಗಳಲ್ಲಿ ವಿರೋಧಿಸಲು 4 ತಿಂಗಳಲ್ಲಿ 15 ಕಡೆ ಪತ್ರ ವ್ಯವಹಾರ ನಡೆಸಲಾಗಿದೆ. ಆಡಳಿತಾತ್ಮಕ ಮಟ್ಟದಲ್ಲಿ ಗೋವಾ  ರಾಜ್ಯ ಸರ್ಕಾರ ಅಗತ್ಯ ನಿರ್ಧಾರಗಳನ್ನು ಕೈಗೊಂಡಿದೆ.  ಸುಪ್ರೀಂ ಕೋರ್ಟ್‍ನಲ್ಲಿ ಮಹದಾಯಿ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ವಿಧಾನಸಭಾ ಅಧಿವೇಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಹದಾಯಿ ವಿಷಯದ ಚರ್ಚೆಯಲ್ಲಿ ಅವರು ಸರ್ಕಾರದ ಪರವಾಗಿ ಮಂಡಿಸಿದರು. ವಕೀಲರಾಗಿರುವ ಕಾರ್ಲೋಸ್ ಫೆರೇರಾ ಅವರು ಶಾಸಕರಾಗುವ ಮೊದಲು ತಾನು ಮಹದಾಯಿ ಸಮಸ್ಯೆಗೆ ಸಮಿತಿಯನ್ನು ನೇಮಿಸುವಂತೆ ಒತ್ತಾಯಿಸಿದ್ದೆ ಎಂದರು. ಮಹದಾಯಿ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಒಗ್ಗೂಡುವ ಅಗತ್ಯವಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದಾಗ ಕಡ್ಡಾಯವಾಗಿ ಇಂಟರ್‍ಲಾಕ್ ಅರ್ಜಿ ಸಲ್ಲಿಸಬೇಕು ಎಂದು ಅಧಿವೇಶನದಲ್ಲಿ ಶಾಸಕ ಕಾರ್ಲೊಸ್ ಫೆರೆರಾ ಸೂಚಿಸಿದರು.

ಈ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕ ಯೂರಿ ಅಲೆಮಾಂವ ರವರು ಮಹದಾಯಿ ಕುರಿತು ಅಧಿವೇಶನದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿ ” ಮೂರು ಜಗತ್ತಿಗೆ ಸ್ವಾಮಿ, ಆದರೆ ತಾಯಿಯಿಲ್ಲದೆ ಬಿಕಾರಿ” ಈ ವಾಕ್ಯದ ಮೂಲಕ ತಮ್ಮ ಮಾತು ಆರಂಭಿಸಿದರು. ನಾಉ ಏನನ್ನು ಮಾಡುತ್ತಿದ್ದೇವೆ ಎಂಬುದನ್ನು ಜನತೆ ನಮ್ಮನ್ನು ನೋಡುತ್ತಿರುತ್ತಾರೆ. ಯಾವಾಗ ಖಾಸಗಿ ಸಂಸ್ಥೆಯೊಂದು ಸಾಖಳಿಯಲ್ಲಿ ಬೈಠಕ್ ಆಯೋಜಿಸಿದಾಗ ಅದಕ್ಕೆ ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ. ಅಲ್ಲಿ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂಬ ನಿಲುವನ್ನು ಪಕ್ಷ ತೆಗೆದುಕೊಂಡಿತ್ತು. ಆದರೆ  ಹಿಂದಿನ ಸರ್ಕಾರ ಕರ್ನಾಟಕಕ್ಕೆ ಮಹದಾಯಿ ವಿಷಯದಲ್ಲಿ ಪರಿಸರ ಅನುಮತಿ ನೀಡಿರುವುದನ್ನು ಸದನದಲ್ಲಿ ಅವರು ನೆನಪಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೃಷ್ಣ ಸಾಲ್ಕರ್, ಸಚಿವ ರವಿ ನಾಯ್ಕ್, ಶಾಸಖೃಅಧ ಸುದಿನ್ ಧವಲಿಕರ್, ನೀಲೇಶ್ ಕಬ್ರಾಲ್, ರೋಹನ್ ಖಂವಟೆ, ಮೈಕೆಲ್ ಲೋಬೋ, ಕೇದಾರ್ ನಾಯ್ಕ್, ರುಡಾಲ್ಫ್ ಫೆನಾರ್ಂಡಿಸ್, ರಾಜೇಶ್ ಪಾಲ್ದೇಸಾಯಿ, ಉಲ್ಲಾಸ್ ತುಯೇಕರ್, ವೆಂಝಿ ವಿಗಾಸ್, ಕ್ರೂಜ್ ಸಿಲ್ವಾ, ಎಲ್ಟನ್ ಡಿಕೋಸ್ಟಾ, ಬಾಬುಷ್ ಮಾನ್ಸೆರಾಟ್, ಗೋವಿಂದ್ ಗಾವ್ಡೆ, ನೀಲಕಾಂತ್ ಹಳರ್ಣಕರ್, ಸುಭಾಷ್ ಫಲ್ದೇಸಾಯಿ, ಮಾವಿನ್ ಗುಡಿನ್ಹೊ ತಮ್ಮ ಅಭಿಪ್ರಾಯಗಳನ್ನು ಅಧಿವೇಶನದಲ್ಲಿ ಮಂಡಿಸಿದರು.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ, ಜಡಿಗೇನಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next