Advertisement

ಮಹದಾಯಿಗಾಗಿ 3 ವರ್ಷದಲ್ಲಿ 1100 ಮನವಿ

06:00 AM Jul 21, 2018 | Team Udayavani |

ನರಗುಂದ: ಜೀವಜಲಕ್ಕಾಗಿ ಹೋರಾಟ ನಡೆಸುತ್ತಲೇ ಇರುವ ಮಹದಾಯಿ ಹೋರಾಟಗಾರರು ಕಳೆದ ಮೂರು ವರ್ಷದಿಂದ
ಇದುವರೆಗೆ ಸಲ್ಲಿಸಿರುವ ಮನವಿಗಳು ಒಂದಲ್ಲ ಎರಡಲ್ಲ. ಬರೋಬ್ಬರಿ 1,100ಕ್ಕೂ ಹೆಚ್ಚು. 

Advertisement

ತಹಶೀಲ್ದಾರರಿಂದ ರಾಜ್ಯಪಾಲರವರೆಗೆ, ಶಾಸಕರಿಂದ ಪ್ರಧಾನಿ-ರಾಷ್ಟ್ರಪತಿವರೆಗೂ ಸೇರಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಮುಖ ಅಧಿಕಾರಸ್ಥರಿಗೆ ಇಷ್ಟೊಂದು ಪ್ರಮಾಣದಲ್ಲಿ ಮನವಿ ಸಲ್ಲಿಸಿಯೂ ವಿವಾದ ಮಾತ್ರ ಇತ್ಯರ್ಥಗೊಂಡಿಲ್ಲ.

ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಹೋರಾಟದ ಹಿಂದೆ ಸಹಿಸಲಾಗದ ನೋವಾಗಿದ್ದು, ಕೇವಲ ನರಗುಂದ ದಿಂದ ಇಷ್ಟು ಮನವಿಗಳು ಸಲ್ಲಿಕೆಯಾಗಿವೆ. ಇನ್ನು ನಾಡಿನಾದ್ಯಂತ ಸಲ್ಲಿಕೆಯಾದ ಮನವಿಗಳು ಲೆಕ್ಕವಿಲ್ಲದಷ್ಟು ಎಂಬುದು ಗಮನಾರ್ಹ.

ಶಾಸಕರಿಗೆ 672 ಅರ್ಜಿ: ರಾಜ್ಯದ 224 ಶಾಸಕರಿಗೆ 3 ಬಾರಿ ಅಂದರೆ 672, 28 ಸಂಸದರಿಗೆ 5 ಬಾರಿ ಅಂದರೆ 140 ಸೇರಿ ಶಾಸಕರು-ಸಂಸದರಿಗೆ ಸಲ್ಲಿಸಿದ್ದು 812 ಮನವಿ ಪತ್ರ. ನರಗುಂದ ತಹಶೀಲ್ದಾರ್‌ಗೆ 50,ಗದಗ ಜಿಲ್ಲಾಧಿ ಕಾರಿಗೆ 40ಕ್ಕೂ ಮೇಲ್ಪಟ್ಟು ಮನವಿ ಸಲ್ಲಿಸಿದ ರೈತರು,  ಅಧಿಕಾರಗಳೇ ನೀವಾದರೂ ಸರ್ಕಾರಗಳಿಗೆ ನಮ್ಮ ಮೊರೆ ತಲುಪಿಸಿ ಎಂದು ಗೋಗರೆದಿದ್ದಾರೆ.

ದಯಾಮರಣಕ್ಕೆ 1500 ಅರ್ಜಿ: ಇನ್ನೊಂದೆಡೆ ಮಹದಾಯಿ ಹೋರಾಟಗಾರರು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಚಳವಳಿ ನಡೆಸಿದ್ದು, ಹೋರಾಟದ ಮತ್ತೂಂದು ಮೈಲಿಗಲ್ಲು. ಜು.16ರಂದು ದಯಾಮರಣ ಪತ್ರ ಚಳವಳಿಗೆ ಚಾಲನೆ ನೀಡಿ ಎಂದು 880 ಪತ್ರ ಅಂಚೆ ಮೂಲಕ ರವಾನಿಸಲಾಗಿದೆ. ಇದರ ಜತೆಗೆ ದಯಾಮರಣಕ್ಕೆ ಇಲ್ಲಿವರೆಗೂ 1500ಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದಾರೆ. ಒಟ್ಟಾರೆ ರೈತರಿಂದ ಸಲ್ಲಿಕೆಯಾದ ಒಟ್ಟು ಮನವಿಗಳು 2 ಸಾವಿರ ಗಡಿದಾಟಿವೆ. ಇದು ಹೋರಾಟದ ಗಂಭೀರತೆಗೆ ಸಾಕ್ಷಿಯಾಗಿದೆ. ಜು.21ರ ರೈತ ಹುತಾತ್ಮ ದಿನಾಚರಣೆಯಂದು ಹೋರಾಟ 1102 ದಿನಕ್ಕೆ ತಲುಪಲಿದೆ.

Advertisement

ಮೂರು ವರ್ಷಗಳುದ್ದಕ್ಕೂ 2 ಸಾವಿರಕ್ಕೂ ಹೆಚ್ಚು ಮನವಿ ಸಲ್ಲಿಸಿದ್ದರೂ ರೈತರ ಬೇಡಿಕೆಗೆ ಬೆಲೆಯಿಲ್ಲ. ದೇಶದ ಅ ಧಿಕಾರ ಚುಕ್ಕಾಣಿ ಹಿಡಿದವರೆಲ್ಲರಿಗೂಮನವಿ ಸಲ್ಲಿಸಿ ನೀರಿಗಾಗಿ ಹಾತೊರೆದಿದ್ದೇವೆ. ಇನ್ನು  ಆ ನ್ಯಾಯ ದೇವತೆಯೇ ನಮ್ಮ
ಅಳಲು ಆಲಿಸಬೇಕು.

– ವೀರೇಶ ಸೊಬರದಮಠ ಸ್ವಾಮೀಜಿ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ

ಯಾರಿಗೆ, ಎಷ್ಟು ಮನವಿ ಸಲ್ಲಿಕೆ ?
12 ಪ್ರಧಾನಿ ನರೇಂದ್ರ ಮೋದಿ
05 ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ
03 ರಾಷ್ಟ್ರಪತಿ ರಾಮನಾಥ ಕೋವಿಂದ
02 ನ್ಯಾಯಾಧಿಕರಣ ಮುಖ್ಯಸ್ಥ ನ್ಯಾ.ಪಂಚಾಳ
03 ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ
02 ಎಐಸಿಸಿ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂ ಧಿ
30 ಮಾಜಿ ಸಿಎಂ ಸಿದ್ದರಾಮಯ್ಯ
10 ರಾಜ್ಯಪಾಲ ವಜುಬಾಯಿ ವಾಲಾ
16 ಸಿಎಂ ಕುಮಾರಸ್ವಾಮಿ

– ಸಿದ್ದಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next