Advertisement

ಕರ್ನಾಟಕದ ವಿರುದ್ಧ ಗೋವಾ ನಿರ್ಣಯ?

01:15 PM Jan 30, 2018 | Team Udayavani |

ಪಣಜಿ: ಮಹದಾಯಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಕೆಂಡ ಕಾರುತ್ತಲೇ ಇರುವ ಗೋವಾ ಸರ್ಕಾರವು ಇದೀಗ ರಾಜ್ಯದ ವಿರುದ್ಧ ನಿರ್ಣಯ ಅಂಗೀಕರಿಸಲು ಮುಂದಾಗಿದೆ. ಕರ್ನಾಟಕವು ಮಹದಾಯಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶ ದತ್ತ ತಿರುಗಿಸುತ್ತಿದ್ದು, ಬಜೆಟ್‌ ಅಧಿವೇಶ ನದಲ್ಲಿ ಕರ್ನಾಟಕ ರಾಜ್ಯದ ವಿರುದ್ಧ ನಿರ್ಣಯ ಅಂಗೀಕರಿಸಲು ಚಿಂತನೆ ನಡೆಸ ಲಾಗಿದೆ ಎಂದು ಗೋವಾ ವಿಧಾನಸಭೆ ಉಪ ಸಭಾಪತಿ ಮೈಕಲ್‌ ಲೋಬೊ ಹೇಳಿದ್ದಾರೆ.

Advertisement

ಅಷ್ಟೇ ಅಲ್ಲ, ಕರ್ನಾಟಕ ಕೋರ್ಟ್‌ ಆದೇಶ ಉಲ್ಲಂಘಿಸಿ ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡು ಕಾಮಗಾರಿ ಕೈಗೆತ್ತಿಕೊಂಡಿದೆ. ಇದರ ವಿರುದ್ಧ ಪ್ರತ್ಯೇಕ ರಿಟ್‌  ಅರ್ಜಿ ಸಲ್ಲಿಸಲಾಗುವುದು ಎಂದೂ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವು ಕಳಸಾ ಬಂಡೂರಿ ನಾಲೆ ನಿರ್ಮಾಣಗೊಳಿಸಲು ನಿಯಮಗಳನ್ನು ಉಲ್ಲಂಘನೆ ಮಾಡಿದೆ. ನಾಲೆಯ ನಿರ್ಮಾಣ ಕಾರ್ಯವನ್ನು ಕರ್ನಾಟಕವು ಶೇ.90ರಷ್ಟು ಪೂರ್ಣಗೊಳಿಸಿದ್ದು, ಶೇ.10ರಷ್ಟು ಮಾತ್ರ ಕಾಮಗಾರಿ ಬಾಕಿ ಉಳಿದಿದೆ. ಗೋವಾದ ಹಿಂದಿನ ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳು ಮಹದಾಯಿ ವಿಷಯವನ್ನು ಅಲಕ್ಷಿಸಿದ್ದರು ಎಂದೂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next