Advertisement

Mahadayi ಹೋರಾಟ; ಮಹಾರಾಷ್ಟ್ರ ಮತ್ತು ಗೋವಾ ಒಟ್ಟಾಗಿ ಎದುರಿಸುತ್ತದೆ : ಶಿಂಧೆ

04:50 PM Jun 17, 2023 | Team Udayavani |

ಪಣಜಿ:  ಗೋವಾ ಮತ್ತು ಮಹಾರಾಷ್ಟ್ರ ಈ ಎರಡೂ ರಾಜ್ಯಗಳು ಸಹೋದರರಿದ್ದಂತೆ. ಮಹದಾಯಿ ನೀರಿನ ಹೋರಾಟ ಮೂರು ರಾಜ್ಯಗಳ ಪ್ರಶ್ನೆಯಾಗಿದ್ದು, ಮಹಾರಾಷ್ಟ್ರ ಮತ್ತು ಗೋವಾ ಈ ಹೋರಾಟವನ್ನು ಒಟ್ಟಾಗಿ ಎದುರಿಸಲಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ತಿಲಾರಿ ಅಣೆಕಟ್ಟು ಯೋಜನೆಗಾಗಿ ಅಂತಾರಾಜ್ಯ ನಿಯಂತ್ರಣ ಮಂಡಳಿಯ ಸಭೆಯ ನಂತರ ಮಾತನಾಡಿದರು. ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಪಸ್ಥಿತರಿದ್ದರು.

ಸುಮಾರು ಒಂದು ದಶಕದ ಅವಧಿಯ ನಂತರ ಆಡಳಿತ ಮಂಡಳಿಯ ಮೊದಲ ಸಭೆ ಇದಾಗಿದೆ. ಗೋವಾ ಮತ್ತು ಮಹಾರಾಷ್ಟ್ರಗಳು ಸಹೋದರ ಸಂಬಂಧ ಹೊಂದಿವೆ ಎಂದು ಶಿಂಧೆ ಹೇಳಿದರು. ಮಹದಾಯಿ ನೀರಿಗಾಗಿ ಗೋವಾ ಮತ್ತು ಮಹಾರಾಷ್ಟ್ರ ಒಟ್ಟಾಗಿ ಕರ್ನಾಟಕದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಶಿಂಧೆ ಹೇಳಿದ್ದಾರೆ. ಇದರಿಂದಾಗಿ ಮಹದಾಯಿ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

ತಿಲಾರಿ ಅಣೆಕಟ್ಟು ಮಹಾರಾಷ್ಟ್ರದಲ್ಲಿದೆ. ತಿಲಾರಿ ಕಾಲುವೆಯಿಂದ ಗೋವಾಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇದು ಪೆಡ್ನೆ, ಡಿಚೋಳಿ ಮತ್ತು ಬಾರದೇಶ್ ತಾಲೂಕಿನ ಕೆಲವು ಭಾಗಗಳಿಗೆ ಪೂರೈಕೆಯಾಗುತ್ತದೆ.

ಏತನ್ಮಧ್ಯೆ, ಕಳೆದ ಕೆಲವು ದಿನಗಳ ಹಿಂದೆ ಮಹದಾಯಿ ಯೋಜನೆಗೆ ಹೊಸ ಡಿಪಿಆರ್ ಗೆ ಅನುಮೋದನೆ ಪಡೆದ ನಂತರ ಕರ್ನಾಟಕವು ಆಕ್ರಮಣಕಾರಿಯಾಗಿ ಚಲಿಸಿದೆ ಎಂದು ಗೋವಾ ಸರ್ಕಾರ ಆರೋಪಿಸಿದೆ. ಗೋವಾ ರಾಜ್ಯವು ಕೇಂದ್ರದ ಮುಖಂಡರನ್ನು ಭೇಟಿ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹೀಗಾಗಿ ಕೇಂದ್ರ ಸರ್ಕಾರ ಮಹದಾಯಿ ಹರಿವು ಪ್ರಾಧಿಕಾರ ಸ್ಥಾಪಿಸಿದೆ. ಇದರ ಕಚೇರಿಯೂ ಪಣಜಿಯಲ್ಲೇ ಇರುತ್ತದೆ. ಮಹದಾಯಿಯು ಗೋವಾಕ್ಕೆ ಅಸ್ಮಿತೆಯ ಸಮಸ್ಯೆ ಮಾತ್ರವಲ್ಲ, ಗೋವಾದ ಒಟ್ಟಾರೆ ಪರಿಸರದ ಮೇಲೆ ಪರಿಣಾಮ ಬೀರುವ ಸಮಸ್ಯೆಯೂ ಆಗಿದೆ ಎಂದು ಇಲ್ಲಿನ ಪರಿಸರ ಹೋರಾಟಗಾರರ ನಿಲುವಾಗಿದೆ. ಹಾಗಾಗಿಯೇ ಮಹದಾಯಿ ಉಳಿಸುವ ಚಳವಳಿ ಗೋವಾದಲ್ಲಿಯೂ ಆರಂಭಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next