ಬೆಂಗಳೂರು: ಹಲವಾರು ವರ್ಷಗಳಿಂದ ನೆನೆ ಗುದಿಗೆ ಬಿದ್ದಿರುವ ಮಹಾದಾಯಿ ವಿವಾದವನ್ನು ಗೋವಾ ಸರಕಾರದ ಜತೆ ಪರಸ್ಪರ ಮಾತು ಕತೆ ಮೂಲಕ ಬಗೆಹರಿಸಿಕೊಳ್ಳುವ ಸರ್ವ ಸಮ್ಮತ ನಿರ್ಧಾರಕ್ಕೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಬಂದಿವೆ.
ಮಹಾದಾಯಿ ವಿಚಾರ ದಲ್ಲಿ ರಾಜಕೀಯ ಉದ್ದೇಶ ದಿಂದ ಪರಸ್ಪರ ಕೆಸರೆರಚಾಡದೆ ಗೋವಾದಲ್ಲಿ ಆಡಳಿತ ನಡೆಸು
ತ್ತಿರುವ ಬಿಜೆಪಿಯ ಹಿರಿಯ ನಾಯಕ ಮನೋಹರ ಪಾರೀಕರ್ ಅವರ ಮನವೊ ಲಿಸುವ ಜವಾಬ್ದಾರಿಯನ್ನು ರಾಜ್ಯದ ಬಿಜೆಪಿ ಮುಖಂಡರು ವಹಿಸಿಕೊಂಡರೆ, ಗೋವಾದ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸುವ ಹೊಣೆಗಾರಿಕೆ ಯನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೋವಾ ಸರಕಾರ, ವಿಪಕ್ಷ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿ, ಸಂಧಾನದ ಮೂಲಕ ವಿವಾದ ಬಗೆ ಹರಿಸಲು ಆ.28ರ ಅನಂತರ ಪ್ರಯತ್ನ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಈ ಬೆಳವಣಿಗೆಯಿಂದಾಗಿ ಮಹಾದಾಯಿ ಸಂಕಟಕ್ಕೆ ಪರಿಹಾರದ ಆಶಾಭಾವನೆ ಮೂಡಿದ್ದು, ಸೋಮವಾರ ನಡೆದ ಸಭೆಯಲ್ಲಿ ರಾಜ ಕೀಯ ಮರೆತು ಪ್ರಯತ್ನ ನಡೆಸಲು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಪ್ಪಿ ಕೊಂಡಿದ್ದಾರೆ.