ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಸಂಬಂಧಿಸಿ ಹೋರಾಟನಿರತ ರೈತರು ಬುಧವಾರ ರಾಜಭವನ ಚಲೋ ಪಾದಾಯಾತ್ರೆ ನಡೆಸುತ್ತಿದ್ದು, ಮಹಿಳೆಯರು ಸೇರಿದಂತೆ ಸಾವಿರಾರು ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಚಿತ್ರರಂಗ ಸೇರಿದಂತೆ ವಿವಿಧ ಕನ್ನಡ ಪರ, ಕಾರ್ಮಿಕರ ಪರ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಮಲ್ಲೇಶ್ವರಂ ನಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಿರುವ ರೈತರು . ಅಲ್ಲಿಂದ ಮುಖ್ಯ ಮಂತ್ರಿಗಳ ಗೃಹ ಕಚೇರಿ, ಚುನಾವಣ ಆಯೋಗಕ್ಕೆ ತೆರಳಿ ಮನವಿ ಸಲ್ಲಿಸಲಿದ್ದಾರೆ.
ಪಾದಾಯಾತ್ರೆ ನಡೆಯುತ್ತಿರುವ ಸ್ಥಳಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ನಾಲ್ವರಿಗೆ ಮಾತ್ರ ಪ್ರವೇಶ
ಪೊಲೀಸರು ರಾಜಭವನದ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿದ್ದು , ಹೋರಾಟಗಾರರ ಪೈಕಿ ನಾಲ್ವರಿಗೆ ಮಾತ್ರ ರಾಜಭವನ ಪ್ರವೇಶಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲ್ಲಿಸಲು ಅವಕಾಶ ನೀಡಿದ್ದಾರೆ.