Advertisement

ಮಹದಾಯಿ: ಬಿಎಸ್‌ವೈ ಹೇಳಿಕೆ ಸ್ವಾಗತಾರ್ಹ

01:30 PM May 29, 2017 | Team Udayavani |

ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಕುರಿತು ಕೇಂದ್ರದ ಹಿರಿಯ ನಾಯಕರು ಒಪ್ಪಿಗೆ ಸೂಚಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಹೇಳಿರುವ ವಿಷಯ ಸ್ವಾಗತಾರ್ಹ ಎಂದು ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಹೇಳಿದರು. 

Advertisement

ಇಲ್ಲಿನ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ರವಿವಾರ 670ನೇ ದಿನಕ್ಕೆ ತಲುಪಿದ್ದು, ವೇಳೆ ಮಾತನಾಡಿದ ಅವರು, ಕೇಂದ್ರ ಹಿರಿಯ ಮುಖಂಡರನ್ನು ಯಡಿಯೂಪ್ಪನವರು ಭೇಟಿ ಮಾಡಿದ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸಿರುವುದಲ್ಲೇ ಪ್ರಧಾನಿಗಳು ಪಾಲ್ಗೊಳುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಕಾ ಹೇಳಿಕೆ ನೀಡಿದ್ದಾರೆ.

ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮನವರು ಇದರಲ್ಲಿ ಆಸಕ್ತಿ ತೊರಿಸಿ ಗೋವಾದಲ್ಲಿರುವ ವಿರೋಧ  ಪಕ್ಷದವರನ್ನು ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮನವೊಲಿಸುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.  

ಇಲ್ಲಿಯವರೆಗೂ ನಮ್ಮ ಭಾಗದ ಸಂಸದ ಪ್ರಹ್ಲಾದ ಜೋಶಿ ಅವರು ಪ್ರಧಾನಿ ಮಾತುಕತೆಗೆ ಬರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಈ ಕುರಿತು ಯಡಿಯೂರಪ್ಪನವರ  ಹೇಳಿಕೆ ಆಶಾ ಭಾವನೆ ಮೂಡಿಸಿದ್ದು, ಉತ್ತಮ ಬೆಳವಣಿಗೆಯಾಗಿದೆ. 

ಈ ಕೂಡಲೇ ಮೂರು ಪಕ್ಷದವರ ದುಂಡು ಮೇಜಿನ ಸಭೆ ನಡೆಸಿ ದಿನಾಂಕ ಗೊತ್ತು ಮಾಡಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿದರು. ಹಿರಿಯ ರೈತ ಮುಖಂಡ ಡಿ.ವಿ. ಕುರಹಟ್ಟಿ ಮಾತನಾಡಿ, ಇಷ್ಟು ದಿನಗಳ ಹೋರಾಟಕ್ಕೆ ಈಗಲಾದರೂ ಪ್ರಧಾನಿ ನರೇಂದ್ರ ಮೊದಿ ಅವರು ಸ್ಪಂದಿಸಿರುವುದು ಸಂತಸ ಮೂಡಿಸಿದೆ.

Advertisement

ಇದರಲ್ಲೂ ರಾಜಕೀಯ ಪಕ್ಷಗಳು ರಾಜಕಾರಣ ಮಾಡದೇ ಎಲ್ಲರನ್ನು ಒಪ್ಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದರೆ ಮಲಪ್ರಭೆಗೆ ಮಹದಾಯಿ ಜೋಡಣೆ ಸಾಧ್ಯವಾಗಲಿದೆ ಎಂದರು. ಮುಪ್ಪಯ್ಯನವರ, ಯಲ್ಲರಡ್ಡಿ ವನಹಳ್ಳಿ,  ರುದ್ರಯ್ಯ ಮಠಪತಿ, ಬಸಪ್ಪ ಬಳ್ಳೂಳಿ, ಲಕ್ಷ್ಮಣ ಮಳಲಿ, ಗಿರಿಯಪ್ಪ ಗಾಣಿಗೇರ, ಮಲ್ಲಪ್ಪ ಹತ್ತಿಕಟಗಿ, ಮಲ್ಲಿಕಾರ್ಜುನ ಅಕ್ಕಿ, ಫಕ್ಕಿರಗೌಡ್ರ ಬಸನಗೌಡರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next