Advertisement

ಮಹದಾಯಿ ಹೋರಾಟಗಾರರ ಪಾದಯಾತ್ರೆ-ವಿಜಯೋತ್ಸವ

04:34 PM Feb 29, 2020 | Team Udayavani |

ನರಗುಂದ: ಮಹದಾಯಿ ಯೋಜನೆಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸಿ ಮಹದಾಯಿ ಹೋರಾಟಗಾರರು ಶುಕ್ರವಾರ ಪಾದಯಾತ್ರೆ ಕೈಗೊಂಡು ವಿಜಯೋತ್ಸವ ಆಚರಿಸಿದರು.

Advertisement

ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಜಮಾಯಿಸಿದ ಮಹದಾಯಿ ಹೋರಾಟಗಾರರು ನರಗುಂದ ಸಂಸ್ಥಾನದ ಅರಸ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದರು.  ಬಳಿಕ ಮಹಿಳೆಯರು ಸೇರಿದಂತೆ ಮಹದಾಯಿ ಹೋರಾಟಗಾರರು ಪಟ್ಟಣದ ಪುರಸಭೆ ರಸ್ತೆ, ಗಾಂಧಿ ವೃತ್ತ, ಸರ್ವಜ್ಞ ವೃತ್ತ ಮಾರ್ಗವಾಗಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿ ಶಿವಾಜಿ ವೃತ್ತದಿಂದ ಮಹದಾಯಿ ಹೋರಾಟ ವೇದಿಕೆವರೆಗೆ ಪಾದಯಾತ್ರೆ ನಡೆಸಿ ಗಮನ ಸೆಳೆದರು.  ಮಾರ್ಗದುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದ ಮಹದಾಯಿ ಹೋರಾಟಗಾರರು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ತುಂಬು ಹೃದಯದಿಂದ ಸ್ವಾಗತಿಸಿ, ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ, ವೆಂಕಟೇಶ ಸಾಬಳೆ, ವೆಂಕಪ್ಪ ಹುಜರತ್ತಿ, ಲಕ್ಷ್ಮಣ ಮುನೇನಕೊಪ್ಪ, ಮಾರುತಿ ಬಡಿಗೇರ, ಮಲ್ಲಪ್ಪ ಐನಾಪೂರ, ಕಲ್ಲಪ್ಪ ಮೊರಬದ, ಯಮನಪ್ಪ ಕುರಿ, ಗಿರಡ್ಡಿ ಕಿಲಬನೂರ, ವಾಸು ಚವ್ಹಾಣ, ಯಲ್ಲಪ್ಪ ಗುಡದರಿ, ಅರ್ಜುನ ಮಾನೆ, ಹನಮಂತ ಸರನಾಯ್ಕರ, ವಿರುಪಾಕ್ಷ ಪಾರಣ್ಣವರ, ಈರಣ್ಣ ಗಡಗಿ, ಸುಭಾಷ ಗಿರೆಣ್ಣವರ, ಶಿವಾನಂದ ಹಳಕಟ್ಟಿ, ರಿಯಾಜ ಪಠಾಣ, ಹನಮಂತ ಕೋರಿ, ಎಚ್‌.ಸಿ. ಹಿರೇಹೊಳಿ, ಎಂ.ಎಂ.ನಂದಿ, ಲಚ್ಚವ್ವ ಜೋತೆಣ್ಣವರ, ನಾಗರತ್ನ ಸವಳಭಾವಿ, ಅನಸಮ್ಮ ಶಿಂಧೆ, ಮಾಬೂಬಿ ಕೆರೂರ, ದೇವಕ್ಕ ತಾಳಿ, ಬಸಮ್ಮ ಐನಾಪೂರ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next