Advertisement

ಮಹದಾಯಿ: ಸರ್ವಪಕ್ಷ ಸಭೆಗೆ ಆಗ್ರಹ

09:22 AM Jun 06, 2019 | Suhan S |

ನವಲಗುಂದ: ಮಹದಾಯಿ, ಕಳಸಾ- ಬಂಡೂರಿ ಯೋಜನೆ ಜಾರಿ ಮಾಡಲು ಗೆಜೆಟ್ ನೋಟಿಫಿಕೇಶನ್‌ ಮಾಡಲು ತಜ್ಞರ, ಕಾನೂನು ಸಲಹೆಗಾರರ, ರೈತರ, ಸರ್ವ ಪಕ್ಷಗಳ ಸಭೆಯನ್ನು 15 ದಿನದೊಳಗಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕರೆಯಲು ಆಗ್ರಹಿಸಿ ರೈತ ಹೋರಾಟ ಮುಖಂಡರು ಇಲ್ಲಿನ ನೀಲಮ್ಮನ ಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ರೈತ ಹೋರಾಟ ಮುಖಂಡ ಸುಭಾಸ ಚಂದ್ರಗೌಡ ಪಾಟೀಲ ಮಾತನಾಡಿ, 5 ವರ್ಷ ರಾಜ್ಯದಲ್ಲಿ ಬರಗಾಲ ಆವರಿಸಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್‌ ಬಿಡುಗಡೆಯಾಗಿಲ್ಲ. ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಬಳಿಕ ಗ್ರೇಟ್-2 ತಹಶೀಲ್ದಾರ್‌ ಎಂ.ಜೆ. ಹೊಕ್ರಾಣಿ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ಬಸಪ್ಪ ಭೀರಣ್ಣವರ, ಮಲ್ಲೇಶ ಉಪ್ಪಾರ, ಎ.ಎಂ. ಹಂಚಿನಾಳ, ರಘುನಾಥ ನಡುವಿನಮನಿ, ರವೀಂದ್ರಗೌಡ ಪಾಟೀಲ, ಎ.ಎನ್‌. ಕದಂ, ಸಂಗಪ್ಪ ನಿಡವಣಿ, ಗೌಡಪ್ಪಗೌಡ ದೊಡ್ಡಮನಿ, ಸಿದ್ದಪ್ಪ ಖಂಡಿಬಾಗಿಲ, ಮೈಲಾರಪ್ಪ ಶೆಟ್ಟೆಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next