Advertisement

ಚಾಮುಂಡಿ ಬೆಟ್ಟದ ನಂದಿಗೆ ನ.5ರಂದು ಮಹಾಭಿಷೇಕ 

01:06 PM Nov 03, 2017 | Team Udayavani |

ಮೈಸೂರು: ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನ.5ರಂದು ಚಾಮುಂಡಿ ಬೆಟ್ಟದ ನಂದಿಗೆ 12ನೇ ವರ್ಷದ ಮಹಾಭಿಷೇಕ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಗೋವಿಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಚಾಮುಂಡಿಬೆಟ್ಟದ ನಂದಿ ಆವರಣದಲ್ಲಿ ಅಂದು ಬೆಳಗ್ಗೆ 9.30ಕ್ಕೆ ಮಹಾಭಿಷೇಕ ನಡೆಯಲಿದ್ದು, ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಇದರೊಂದಿಗೆ ಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಶ್ರೀಗಳಾದ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಹೊಸಮಠದ ಚಿದಾನಂದ ಶ್ರೀ, ಆದಿಚುಂಚನಗಿರಿ ಶಾಖಾ ಮಠದ ಸೋಮನಾಥನಂದ ಶ್ರೀ, ಬೆಟ್ಟದ ವ್ಯಾಘ್ರ ಮುಖರುದ್ರಪಾದ ಗುಹೆಯ ಜಮನಗಿರಿ ಸ್ವಾಮೀಜಿ ಮಹಾಭಿಷೇಕದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಹಾಭಿಷೇಕದಂದು ನಂದಿವಿಗ್ರಹಕ್ಕೆ 32 ಬಗೆಯ ದ್ರವ್ಯಗಳಿಂದ ಅಭಿಷೇಕ ನಡೆಸುವ ಜತೆಗೆ ಮೊದಲ ಬಾರಿಗೆ ನಂದಿಗೆ ವಸ್ತ್ರ ಧರಿಸಲಾಗುವುದು. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನಪದವಾದ್ಯಗೋಷ್ಠಿ ನಡೆಯಲಿದ್ದು, ಕಾರ್ಯಕ್ರಮದ ಬಳಿಕ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು. ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್‌, ಖಜಾಂಚಿ ಸುಂದರ್‌, ಪದಾಧಿಕಾರಿಗಳಾದ ಬ್ಯಾಂಕ್‌ ಶಿವಕುಮಾರ್‌, ನಂದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next