Advertisement

Gufi Paintal: ʼಮಹಾಭಾರತʼದ ʼಶಕುನಿ ಮಾಮಾʼ ಖ್ಯಾತಿಯ ನಟ ಗುಫಿ ಪೈಂಟಲ್ ನಿಧನ

01:12 PM Jun 05, 2023 | Team Udayavani |

ಮುಂಬಯಿ: ʼಮಹಾಭಾರತʼದಲ್ಲಿ ಧಾರಾವಾಹಿಯಲ್ಲಿ ʼಶಕುನಿ ಮಾಮಾʼನ ಪಾತ್ರದಲ್ಲಿ ಮಿಂಚಿದ್ದ ನಟ ಗುಫಿ ಪೈಂಟಲ್ (79) ಸೋಮವಾರ (ಜೂ.5 ರಂದು) ಮುಂಜಾನೆ ಮುಂಬಯಿಯಲ್ಲಿ ನಿಧನರಾಗಿದ್ದಾರೆ.

Advertisement

ಕಳೆದ ಕೆಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ.31 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ 9 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ತಿಳಿಸಿದೆ.

ಇದನ್ನೂ ಓದಿ: Road mishap: ಭೀಕರ ಅಪಘಾತ; 39 ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ

ಕಾಸ್ಟಿಂಗ್ ಡೈರೆಕ್ಟರ್‌ ಆಗಿ ಬಣ್ಣದ ಯಾನದ ಹೆಜ್ಜೆಯನ್ನಿಟ್ಟ ಅವರು, ಬಿ ಆರ್ ಚೋಪ್ರಾ ಅವರ ʼಮಹಾಭಾರತʼ ಧಾರಾವಾಹಿಯಲ್ಲಿ ʼಶಕುನಿ ಮಾಮಾʼನ ಪಾತ್ರದಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡರು. 80 ದಶಕದಲ್ಲಿ ದೂರದರ್ಶನ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಇವರ ಪಾತ್ರ ಆ ಕಾಲದಲ್ಲಿ ಅಪಾರ ಮಂದಿಯನ್ನು ರಂಜಿಸಿತ್ತು.

ʼರಫೂ ಚಕ್ಕರ್ʼ, ʼದೇಸ್ ಪರ್ದೇಸ್ʼ, ʼದಿಲ್ಲಗಿʼ, ʼಮೈದಾನ್-ಎ-ಜಂಗ್ʼ ʼದಾವಾʼ, ʼಸುಹಾಗ್ʼ ಮುಂತಾದ ಬಾಲಿವುಡ್‌ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ಅವರು ಮಿಂಚಿದ್ದಾರೆ” ಮುಖ್ಯವಾಗಿ ʼಕಾನೂನ್ʼ, ʼಸೌದಾʼ, ʼಅಕ್ಬರ್ ಬೀರ್ಬಲ್ʼ, ʼಓಂ ನಮಃ ಶಿವಾಯʼ, ʼಮಿಸೆಸ್. ಕೌಶಿಕ್ ಕಿ ಪಾಂಚ್ ಬಹುಯೆನ್ʼ, ʼಕರ್ಣ್ ಸಂಘಿನಿʼ.. ಇತ್ಯಾದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೊನೆಯ ಬಾರಿ ʼಜೈ ಕನ್ಹಯ್ಯ ಲಾಲ್ ಕಿʼ ಸಿರಿಯಲ್‌ ನಲ್ಲಿ ಕಾಣಿಸಿಕೊಂಡಿದ್ದರು.

Advertisement

ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿ ನಟನ ಅಂತ್ಯಕ್ರಿಯೆ ನೆರವೇರಲಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next