Advertisement

ಸದ್ಯಕ್ಕಿಲ್ಲ ಮಹಾಭಾರತ

09:53 AM Apr 05, 2019 | mahesh |

ದುಬಾೖ: ದೇಶದಲ್ಲೇ ಮೊದಲ ಬಾರಿಗೆ ಬೃಹತ್‌ ಬಜೆಟ್‌ನ ಸಿನೆಮಾ ಎಂದೇ ಹೆಸರಾಗಿದ್ದ ಮಹಾಭಾರತ ಸಿನೆಮಾ ನಿರ್ಮಾಣ ಪ್ರಕ್ರಿಯೆ ಸ್ಥಗಿತ ಗೊಂಡಿದೆ. ನಿರ್ದೇಶಕರು ಮತ್ತು ಚಿತ್ರ ಕಥೆಗಾರರ ನಡುವಿನ ಸಂಘರ್ಷದಿಂದ ಈ ಸಿನೆಮಾ ನಿಲ್ಲಿಸಬೇಕಾಯಿತು ಎಂದು ಉದ್ಯಮಿ ಹಾಗೂ ನಿರ್ಮಾಪಕ ಬಿ.ಆರ್‌. ಶೆಟ್ಟಿ ಹೇಳಿದ್ದಾರೆ. ಆದರೆ ಉತ್ತಮ ಚಿತ್ರಕಥೆ ಸಿಕ್ಕರೆ ಈಗಲೂ ಸಿನೆಮಾ ನಿರ್ಮಾಣಕ್ಕೆ ಸಿದ್ಧವಾಗಿದ್ದೇನೆ. ಇದಕ್ಕಾಗಿ ಹಣವನ್ನು ಮೀಸಲಿಟ್ಟಿದ್ದೇನೆ ಎಂದು ಶೆಟ್ಟಿ ಹೇಳಿದ್ದಾರೆ.

Advertisement

ಸಾಹಿತಿ ಎಂ.ಟಿ. ವಾಸುದೇವನ್‌ ನಾಯರ್‌ ವಿರಚಿತ ಮಹಾಭಾರತ ಕೃತಿ ಯನ್ನು ಆಧರಿಸಿ ಈ ಸಿನೆಮಾ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇದು ಪದ್ಮಾವತ್‌ ಸಿನೆಮಾ ರೀತಿಯಲ್ಲೇ ವಿವಾದಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಸಿನೆಮಾ ಕೈಬಿಡಬೇಕಾಯಿತು. ಸಿನೆಮಾ ಕೈಬಿಡುವಂತೆ ಅಧ್ಯಾತ್ಮ ಗುರುಗಳಾದ ಮಾತಾ ಅಮೃತಾನಂದ ಮಯಿ ಸಲಹೆ ನೀಡಿದರು ಎಂದು ಶೆಟ್ಟಿ ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ನಿದೇಶಕ ಶ್ರೀಕುಮಾರ್‌ ಮೆನನ್‌ ಮತ್ತು ನಾಯರ್‌ ಮಧ್ಯದ ಸಂಘರ್ಷ ಬಹಿರಂಗ ಗೊಂಡಿದ್ದು, ತನ್ನ ಚಿತ್ರಕಥೆಯನ್ನು ವಾಪಸ್‌ ನೀಡುವಂತೆ ನಾಯರ್‌ ಅವರು ಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next