Advertisement

ಮಹಾರಾಷ್ಟ್ರದಲ್ಲಿ ಮಾರ್ಚ್‌ 18ರಿಂದ ಪ್ಲಾಸ್ಟಿಕ್‌ ನಿಷೇಧ

04:39 PM Mar 16, 2018 | udayavani editorial |

ಮುಂಬಯಿ : ಇದೇ ಮಾರ್ಚ್‌ 18ರಂದು ಒದಗುವ ಮಹಾರಾಷ್ಟ್ರೀಯರ ಹೊಸ ವರ್ಷ “ಗುಡಿ ಪಾಡ್ವ’ ದಿನದಿಂದ ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ ಎಂದು ಪರಿಸರ ಸಚಿವ ರಾಮದಾಸ್‌ ಕದಮ್‌ ಇಂದು ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

Advertisement

ಪ್ಲಾಸ್ಟಿಕ್‌ ಉತ್ಪಾದನೆ, ಬಳಕೆ, ಶೇಖರಣೆ, ಮಾರಾಟ, ವಿತರಣೆ, ಆಮದು ಮತ್ತು ಸಾಗಣೆಯನ್ನು ಈ ನಿಷೇಧವು ಒಳಗೊಂಡಿರುತ್ತದೆ ಎಂದು ಸಚಿವರುಹೇಳಿದರು. 

ಪ್ಲಾಸ್ಟಿಕ್‌ ನಿಷೇಧ ಉಲ್ಲಂಘನೆ ಮಾಡುವವರಿಗೆ 25,000 ರೂ. ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಯಾಗಲಿದೆ ಎಂದ ಅವರು ಪ್ಲಾಸ್ಟಿಕ್‌ ಚೀಲಗಳು, ಥರ್ಮೋಕೋಲ್‌, ವಿಲೇವಾರಿಯಾಗಬಲ್ಲ ಕಪ್‌ ಮತ್ತು ಪ್ಲೇಟ್‌ಗಳು, ಕಟ್ಲೆàರಿ, ಹೆಣೆಯಲ್ಪಡದ ಪಾಲಿಪ್ರಾಪಲೀನ್‌ ಬ್ಯಾಗ್‌ಗಳು, ಪ್ಲಾಸ್ಟಿಕ್‌ ಪೌಚ್‌ಗಳು ಮತ್ತು ಪ್ಯಾಕೇಜಿಂಗ್‌ ಈ ನಿಷೇಧಕ್ಕೆ ಒಳಪಡುತ್ತವೆ. 

ಔಷಧ, ಅರಣ್ಯ ಮತ್ತು ತೋಟಗಾರಿಕೆ ಉತ್ಪನ್ನಗಳು, ಘನ ತ್ಯಾಜ್ಯಗಳು, ಸಸಿಗಳು ಮತ್ತು ರಫ್ತು ಉದ್ದೇಶಕ್ಕಾಗಿ ವಿಶೇಷ ಆರ್ಥಿಕ ವಲಯಗಳಲ್ಲಿ ಪ್ಯಾಕ್‌ ಮಾಡಲು ಬಳಸಲ್ಪಡುವ ಪ್ಲಾಸ್ಟಿಕ್‌ಗೆ ವಿನಾಯಿತಿ ಇದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next