Advertisement
ಮಹಾ ಶಿವರಾತ್ರಿಯಲ್ಲಿ ವ್ರತ ಮತ್ತು ಜಾಗರಣೆ ವಿಶೇಷವಾಗಿದ್ದು, ಭಕ್ತರು ಶುಕ್ರವಾರ ಪೂರ್ಣ ವ್ರತಾಚರಣೆ ಮಾಡಿ ರಾತ್ರಿ ಜಾಗರಣೆ ಕೈಗೊಂಡರು. ಮುಂಜಾನೆ ಶಿವಾರ್ಚನೆ ಮಾಡಿದ ಭಕ್ತರು ಬಳಿಕ ಶಿವ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ರುದ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದರು.
ರಾತ್ರಿ ಶಿವ ಪುರಾಣ ಪಾರಾಯಣ, ಶಿವ ಸಹಸ್ರ ನಾಮಾವಳಿ ಪಠಣ, ಮಹಾ ಮೃತ್ಯುಂಜಯ ಜಪ ಪಠಣ ಇತ್ಯಾದಿಗಳಲ್ಲಿ ಕಾಲ ಕಳೆದರು. ಜಾಗರಣೆ ಕೈಗೊಂಡವರು ರಾತ್ರಿಯಿಡೀ ಎಚ್ಚರವಿದ್ದು ಶಿವ ಧ್ಯಾನ, ಪಠಣಗಳಲ್ಲಿ ಸಮಯ ಕಳೆದರು. ವಿಶೇಷವಾಗಿ ಪ್ರಧಾನ ಶಿವ ಮಂದಿರಗಳಲ್ಲಿ ರಾತ್ರಿಯಿಡೀ ಶಿವಾರಾಧನೆ ಇದ್ದ ಕಾರಣ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು. ವಿವಿಧೆಡೆ ಆಚರಣೆ
ವಿಶೇಷವಾಗಿ ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರುದ್ರಯಾಗ ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದಲ್ಲಿ ಮಖೆ ಜಾತ್ರೆ ನಡೆಯಿತು. ಪಂಜ ಶ್ರೀ ಪಂಚಲಿಂಗೇಶ್ವರ, ತೊಡಿಕಾನ ಶ್ರೀ ಮಲ್ಲಿಕಾರ್ಜುನ, ನರಿ ಮೊಗರು ಶ್ರೀ ಮೃತ್ಯುಂಜ ಯೇಶ್ವರ, ಚಾರ್ವಾಕ ಶ್ರೀ ಕಪಿಲೇಶ್ವರ, ಎಡಮಂಗಲ ಶ್ರೀ ಪಂಚಲಿಂಗೇಶ್ವರ, ಕಾಂಚೋಡು ಶ್ರೀಮಂಜು ನಾಥೇಶ್ವರ, ಸಂಪಾಜೆ ಶ್ರೀಪಂಚಲಿಂಗೇಶ್ವರ, ನಾಗ ಪಟ್ಟಣ ಶ್ರೀಸದಾಶಿವ, ಬರೆಪ್ಪಾಡಿ ಶ್ರೀ ಪಂಚ ಲಿಂಗೇಶ್ವರ, ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ, ಸುಬ್ರಹ್ಮಣ್ಯ ಅಗ್ರಹಾರದ ಸೋಮನಾಥೇಶ್ವರ, ಪೇರಾಜೆ ಶ್ರೀ ಶಾಸ್ತಾವು, ಹರಿಹರಪಳ್ಳತ್ತಡ್ಕ ಶ್ರೀ ಹರಿಹರೇಶ್ವರ,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ, ಕಾವು ಶ್ರೀ ಪಂಚಲಿಂಗೇಶ್ವರ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ, ರಾಮಕುಂಜ ಶ್ರೀ ರಾಮಕುಂಜೇಶ್ವರ, ಆರ್ಬಿ ಶ್ರೀ ಮಹಾ ಲಿಂಗೇಶ್ವರ, ಕುಲ್ಕುಂದದ ಶ್ರೀ ಬಸವೇಶ್ವರ, ನೂಜಿಬಾಳ್ತಿಲದ ಅಡೆಂಜ ಶ್ರೀ ಪಂಚಲಿಂಗೇಶ್ವರ, ಮರ್ದಾಳ ಶ್ರೀ ಮಹಾಲಿಂಗೇಶ್ವರ, ಐವರ್ನಾಡು ಶ್ರೀ ಪಂಚಲಿಂಗೇಶ್ವರ, ಕರಾಯ ಶ್ರೀ ಮಹಾ ಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ ಸೇರಿದಂತೆ ಪುತ್ತೂರು, ಸುಳ್ಯ ತಾಲೂಕುಗಳ ಎಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವ್ರತಾಚರಣೆ, ಜಾಗರಣೆ ನಡೆಯಿತು.