Advertisement

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

06:43 PM Dec 29, 2024 | Team Udayavani |

ನವದೆಹಲಿ:‘ಮಹಾ ಕುಂಭ’ವನ್ನು “ಏಕತೆಯ ಮಹಾಕುಂಭ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರವಿವಾರ(ಡಿ29) ಬಣ್ಣಿಸಿದ್ದಾರೆ.

Advertisement

ಮಾಸಿಕ ಮನ್ ಕಿ ಬಾತ್ ಪ್ರಸಾರದಲ್ಲಿ ಮಾತನಾಡಿದ ಮೋದಿ, ”ಸಮಾಜದಿಂದ ದ್ವೇಷ ಮತ್ತು ವಿಭಜನೆಯನ್ನು ಹೊರಹಾಕುವ ಸಂಕಲ್ಪದೊಂದಿಗೆ ಭವ್ಯವಾದ ಧಾರ್ಮಿಕ ಸಭೆಗೆ ತೆರಳಲು ಜನರನ್ನು ವಿನಂತಿಸಿಕೊಂಡಿದ್ದಾರೆ.

ಮಹಾ ಕುಂಭದ ಸಂದೇಶವು ಇಡೀ ದೇಶವು ಒಗ್ಗೂಡಬೇಕು. ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಸಭೆಗೆ ವಿವಿಧತೆಯಲ್ಲಿ ಏಕತೆಯಂತಹ ದೃಶ್ಯಕ್ಕೆ ಬೇರೆ ಉದಾಹರಣೆ ಇಲ್ಲ ಎಂದರು.

ಸಂವಿಧಾನ ನಮ್ಮ ಮಾರ್ಗದರ್ಶಕ ಬೆಳಕು

”ಮುಂದಿನ ಗಣರಾಜ್ಯೋತ್ಸವವು ಸಂವಿಧಾನದ ಅನುಷ್ಠಾನದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ. ಇದು ದೇಶವಾಸಿಗಳಿಗೆ ಹೆಮ್ಮೆಯ ವಿಷಯ, ಸಂವಿಧಾನವು ಪ್ರತಿಯೊಂದು ಕಾಲಘಟ್ಟದಲ್ಲೂ ನಮ್ಮ ಮಾರ್ಗದರ್ಶಕ ಬೆಳಕು, ಸಂವಿಧಾನದ ಕಾರಣದಿಂದಾಗಿ ನಾನು ನನ್ನ ಜೀವನದಲ್ಲಿ ಈ ಸ್ಥಾನವನ್ನು ತಲುಪಿದ್ದೇನೆ. constitution75.com ಎಂಬ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ ” ಎಂದರು.

Advertisement

ನಾಲ್ವರು ಐಕಾನ್‌ಗಳ ಸ್ಮರಣೆ 

ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಭಾರತೀಯ ಚಿತ್ರರಂಗದ ನಾಲ್ವರು ಐಕಾನ್‌ಗಳಾದ ರಾಜ್ ಕಪೂರ್, ಮೊಹಮ್ಮದ್ ರಫಿ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ತಪನ್ ಸಿನ್ಹಾ ಅವರನ್ನು ಪ್ರಧಾನಿ ಮೋದಿ ಸ್ಮರಿಸಿದರು.

ರಾಜ್ ಕಪೂರ್ ಅವರು ತಮ್ಮ ಚಲನಚಿತ್ರಗಳ ಮೂಲಕ ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದರು, ಮೊಹಮ್ಮದ್ ರಫಿ ಅವರ ಮಾಂತ್ರಿಕ ಧ್ವನಿ ಪ್ರತಿಯೊಬ್ಬ ಕೇಳುಗರ ಹೃದಯವನ್ನು ಮುಟ್ಟುತ್ತದೆ ಎಂದು ಪ್ರಧಾನಿ ಹೇಳಿದರು.

ಎಎನ್‌ಆರ್ ತೆಲುಗು ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು, ಅವರ ಚಲನಚಿತ್ರಗಳು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಸುಂದರವಾಗಿ ಚಿತ್ರಿಸಿವೆ. ತಪನ್ ಸಿನ್ಹಾ ಅವರ ಚಿತ್ರಗಳು ಸಮಾಜಕ್ಕೆ ಹೊಸ ದೃಷ್ಟಿಕೋನವನ್ನು ನೀಡಿತು. ಅವರ ಚಲನಚಿತ್ರಗಳು ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ನೀಡುತ್ತವೆ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next