Advertisement

75 ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ ಉಚಿತ ಎಸ್‌ಟಿ ಬಸ್‌ ಪ್ರಯಾಣ

04:46 PM Aug 17, 2022 | Team Udayavani |

ಮುಂಬಯಿ: ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿಂಧೆ-ಫಡ್ನವೀಸ್‌ ಸರಕಾರದ ಸಂಪುಟ ಸಭೆ ಇಂದು ನಡೆಯಿತು. ಈ ಸಭೆಯಲ್ಲಿ, ಶಿಂಧೆ ಸರಕಾರ ಸಾರ್ವಜನಿಕರಿಗೆ ಮತ್ತು ಸರಕಾರಿ ನೌಕರರಿಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ ಉಚಿತ ಎಸ್‌ಟಿ ಬಸ್‌ ಪ್ರಯಾಣ ನೀಡುವ ಜತೆಗೆ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

Advertisement

ಶಿಂಧೆ ಸರ‌ಕಾರದ ಹೊಸ ನಿರ್ಧಾರದ ಪ್ರಕಾರ, ಈಗ 75 ವರ್ಷ ಪೂರೈಸಿದ ಹಿರಿಯ ನಾಗರಿಕರು ರಾಜ್ಯ ಸಾರಿಗೆ ಸಂಸ್ಥೆಯ ಎಸ್‌ಟಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಜತೆಗೆ ಗೋವಿಂದ ತಂಡಕ್ಕೆ 10 ಲಕ್ಷ ರೂ.ಗಳ ವಿಮಾ ರಕ್ಷಣೆ ಮತ್ತು ಸರಕಾರಿ ನೌಕಕರರಿಗೆ ಭತ್ಯೆ ಹೆಚ್ಚಿಸಲಾಗಿದೆ.

ಗೋವಿಂದ ತಂಡಕ್ಕೆ ಸರಕಾರ ವಿಮಾ ಸೌಲಭ್ಯ ನೀಡಬೇಕು ಎಂಬ ಬೇಡಿಕೆ ಇತ್ತು. ಈ ಬೇಡಿಕೆಯಂತೆ ಗೋವಿಂದ ತಂಡಕ್ಕೆ ಸರಕಾರದಿಂದ 10 ಲಕ್ಷ ರೂ. ವಿಮಾ ರಕ್ಷಣೆ ನೀಡಲಾಗುವುದು. ಈ ವಿಮಾ ರಕ್ಷಣೆಯ ಪ್ರೀಮಿಯಂ ಅನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಘೋಷಿಸಿದ್ದಾರೆ.

ಇದನ್ನೂ ಓದಿ:ಹೈಕಮಾಂಡ್ ತಂತ್ರ: ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ BSYಗೆ ಸ್ಥಾನ

ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಈ ಮಹತ್ವದ ಘೋಷಣೆ ಮಾಡಿದ್ದಾರೆ.. ತುಟ್ಟಿಭತ್ಯೆ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿದೆ. ಹೆಚ್ಚಳವು ಆಗಸ್ಟ್ ನಿಂದ ಜಾರಿಗೆ ಬರಲಿದೆ. ಇದರಿಂದ ಸರಕಾರಿ ನೌಕರರ ಗಣೇಶೋತ್ಸವ ಸಡಗರದಿಂದ ಸಾಗುವುದರಲ್ಲಿ ಸಂಶಯವಿಲ್ಲ. 7ನೇ ವೇತನ ಆಯೋಗದ ಬಾಕಿಯ ಮೂರನೇ ಕಂತನ್ನು ಮಹಾರಾಷ್ಟ್ರ ಸರಕಾರಿ ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ಕೇಂದ್ರ ಸರಕಾರ ನೌಕರರ ಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದೆ.

Advertisement

ಮಹಾರಾಷ್ಟ್ರ ಸರಕಾರವು ನೌಕರರ ಖಾತೆಗೆ ಎರಡು ಕಂತುಗಳನ್ನು ಜಮಾ ಮಾಡಿದೆ. ಈಗ ಸರಕಾರ ಮೂರನೇ ಕಂತನ್ನು ಖಾತೆಗೆ ಕಳುಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next