Advertisement

ಆಲಮಟ್ಟಿ ನೀರಿನ ಸಂಗ್ರಹ 518.5 ಮೀ.ಮಿತಿಗೆ “ಮಹಾ’ಸರ್ಕಾರ ಪತ್ರ

10:49 PM Aug 02, 2019 | Team Udayavani |

ಬೆಳಗಾವಿ: ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮತ್ತಷ್ಟು ಹೆಚ್ಚಿದ್ದು ಕೊಯ್ನಾ, ವಾರಣಾ, ಧೂಮ್‌ ಮೊದಲಾದ ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿವೆ. ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹವನ್ನು 518 ಮೀ.ದಿಂದ 518.5ಕ್ಕೆ ಮಿತಿಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ತುರ್ತು ಪತ್ರ ಬರೆದಿದೆ.

Advertisement

ಮಹಾರಾಷ್ಟ್ರದ ತುರ್ತು ಸಂದೇಶದಂತೆ ಕರ್ನಾಟಕ ಸರ್ಕಾರ 518.5 ಮೀಟರ್‌ಗೆ ಸಂಗ್ರಹವನ್ನು ಮಿತಿಗೊಳಿಸಿದರೆ, ಇನ್ನೂ 50 ಸಾವಿರ ಕ್ಯೂಸೆಕ್‌ ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಬೇಕು. ಇದರಿಂದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ನೆರೆಹಾವಳಿ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. 519.60 ಮೀ. ಎತ್ತರದ ಆಲಮಟ್ಟಿ ಜಲಾಶಯವು ಭರ್ತಿಯಾಗಲು ಇನ್ನು ಕೇವಲ 25 ಸೆಂ.ಮೀ. ಬಾಕಿಯಿದೆ.

ಇದರ ಪರಿಣಾಮವಾಗಿ ಆಲಮಟ್ಟಿ ಜಲಾಶಯದಿಂದ ಸುಮಾರು ಎರಡು ಲಕ್ಷ ಕ್ಯೂಸೆಕ್‌ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಸತತವಾಗಿ ಹರಿದು ಬರುತ್ತಿರುವ ನೀರಿನಿಂದಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳ ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ನೆರೆಹಾವಳಿಯ ಭೀತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next