Advertisement

ವಿಎಚ್‌ಪಿ ಮೆರವಣಿಗೆ: ಏರ್‌ ಗನ್‌, ತಲವಾರು ಪ್ರದರ್ಶನ; 250 ಮಂದಿ ವಿರುದ್ಧ ಕೇಸ್‌

08:35 AM Jun 04, 2019 | Team Udayavani |

ಪುಣೆ : ಪಿಂಪ್ರಿ ಚಿಂಚವಾಡದ ನಿಗಡಿಯಲ್ಲಿ ನಿನ್ನೆ ಭಾನುವಾರ ನಡೆದ VHP ಮೆರವಣಿಗೆಯಲ್ಲಿ ಏರ್‌ ಗನ್‌ ಮತ್ತು ತಲವಾರುಗಳನ್ನು ಝಳಪಿಸಿದ ವಿಶ್ವ ಹಿಂದೂ ಪರಿಷತ್ತಿನ ಸುಮಾರು 250 ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಕೇಸ್‌ ಬುಕ್‌ ಮಾಡಲ್ಪಟ್ಟವರಲ್ಲಿ ವಿಎಚ್‌ಪಿ ಸ್ಥಳೀಯ ಅಧ್ಯಕ್ಷ ಶರದ್‌ ಇನಾಮ್‌ದಾರ್‌, ಜಿಲ್ಲಾ ಅಧ್ಯಕ್ಷ ಧನಜಿ ಶಿಂಧೆ ಪ್ರಮುಖರಾಗಿದ್ದು ಇವರ ಸಹಿತ 250 ಮಂದಿ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಮತ್ತು ಬಾಂಬೆ ಪೊಲೀಸ್‌ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಇಂದು ಸೋಮವಾರ ತಿಳಿಸಿದ್ದಾರೆ.

ಅನುಮತಿ ನಿರಾಕರಿಸಲಾದ ಹೊರತಾಗಿಯೂ ವಿಎಚ್‌ಪಿ ಕಾರ್ಯಕರ್ತರು ನಿನ್ನೆ ಭಾನುವಾರ ಯಮುನಾನಗರದಲ್ಲಿ ಶೋಭಾ ಯಾತ್ರೆ ನಡೆಸಿದ್ದರು. ಇವರಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿದ್ದರು. ಮೆರವಣಿಗೆಯಲ್ಲಿದ್ದ ನಾಲ್ವರು ಮಹಿಳೆಯರು ತಮ್ಮ ಕೈಯಲ್ಲಿದ್ದ ಏರ್‌ ರೈಫ‌ಲ್‌ಗ‌ಳು ಮತ್ತು ಇತರ ಐವರು ಮಹಿಳೆಯರು ತಮ್ಮ ಕೈಯಲ್ಲಿದ್ದ ತಲವಾರುಗಳನ್ನು ಝಳಪಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಪಿಂಪ್ರಿ ಚಿಂಚವಾಡ ಕಮಿಷನರೇಟ್‌ ಪ್ರದೇಶದಲ್ಲಿ ಮೇ 21ರಿಂದ ಜೂನ್‌ 3ರ ವರೆಗೆ ನಿಷೇಧಾಜ್ಞೆ ಇದೆ. ಇದರ ಪ್ರಕಾರ ಯಾರೂ ಮೆರವಣಿಗೆ ನಡೆಸುವಂತಿಲ್ಲ; ಮೇಲಾಗಿ ಇತರರಿಗೆ ದೈಹಿಕ ಹಿಂಸೆ ನಡೆಸಬಹುದಾದ ಚೂರಿ, ಕತ್ತಿ, ತಲವಾರು ಗನ್‌, ಲಾಠಿ ಇತ್ಯಾದಿ ಯಾವುದೇ ಬಗೆಯ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next