ಜೈಪುರ: ರಾಜಸ್ಥಾನದ ಬಿಕಾನೇರ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಅಕ್ಕಪಕ್ಕದ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ.
ಭಾನುವಾರ ಮುಂಜಾನೆ 2:16 ಕ್ಕೆ ಬಿಕಾನೇರ್‌ನ ಪಶ್ಚಿಮಕ್ಕೆ 516 ಕಿಮೀ ದೂರದಲ್ಲಿ 8 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಸದ್ಯ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ದಿಲ್ಲಿ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿ ದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಭೂಕಂಪಿಸಿದ ಅನುಭವವಾಗಿದೆ.
ಇದಲ್ಲದೆ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಇತ್ತೀಚೆಗೆ 6.6 ತೀವ್ರತೆಯ ಭೂಕಂಪನವಾಗಿತ್ತು. ಭೂಕಂಪಕ್ಕೆ ಪಾಕಿಸ್ತಾನದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ ಬಳಿಕ ನಾಲ್ಕು ದಿನಗಳ ನಂತರ ಪಶ್ಚಿಮ ಭಾರತದಲ್ಲಿ ಕಂಪನಗಳು ಸಂಭವಿಸಿರುವುದು ಭೀತಿಗೆ ಕಾರಣವಾಗಿದೆ.