ಉಡುಪಿ: ಕೋವಿಡ್ ಲಸಿಕೆ ಪಡೆದರೆ ದೇಹಕ್ಕೆ ಅಯಸ್ಕಾಂತೀಯ ಶಕ್ತಿ ಬರುತ್ತದೆಯೇ? ಮಹಾರಾಷ್ಟ್ರ- ಜಾರ್ಖಂಡ್ ರಾಜ್ಯದಲ್ಲಿನ ವೈರಲ್ ಸುದ್ದಿ ಇದೀಗ ಉಡುಪಿಲ್ಲೂ ಆಗುತ್ತಿದೆ. ಕಾರಣ ಉಡುಪಿ ನಗರದ ವ್ಯಕ್ತಿಯೊಬ್ಬರ ಮೈಯಲ್ಲಿ ಆಯಸ್ಕಾಂತೀಯ ಶಕ್ತಿಯಿದೆ. ಮೈಯಲ್ಲಿ ಸೌಟು, ತಟ್ಟೆ, ಲೋಟ ಅಂಟುತ್ತಿದೆ.
ಉಡುಪಿಯ ಪಿಪಿಸಿ ಬಳಿಯ ವ್ಯಕ್ತಿಯೊಬ್ಬರ ಮೈಯಲ್ಲಿ ವಸ್ತುಗಳು ಅಂಟುತ್ತಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ನಾನು ಕೆಲ ದಿನಗಳ ಹಿಂದೆ ಕೋವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದವರಿಗೆ ಆಯಸ್ಕಾಂತದ ಶಕ್ತಿ ಬರುವ ಬಗ್ಗೆ ವಿಡಿಯೋ ನೋಡಿದ್ದ ಅವರು ತಾನೂ ಪ್ರಯೋಗ ಮಾಡಿದಾಗ ತನ್ನ ಮೈಯಲ್ಲಿ ಸೌಟು, ತಟ್ಟೆ, ಲೋಟಗಳು ಅಂಟಿದ್ದವು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ಅರುಣ್ ಸಿಂಗ್ ಆಗಮನಕ್ಕೂ ಮೊದಲೇ ಬಿಜೆಪಿಯಲ್ಲಿ ತಾಲೀಮು ಶುರು
ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿ ಸ್ಪಷ್ಟನೆ; ಆಯಸ್ಕಾಂತ ಶಕ್ತಿಯ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಲಸಿಕೆ ಪಡೆದರೆ ಯಾವುದೇ ಕಾರಣಕ್ಕೂ ಆಯಸ್ಕಾಂತೀಯ ಶಕ್ತಿ ಬರುವುದಿಲ್ಲ. ಆ ವ್ಯಕ್ತಿಯನ್ನು ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅವರ ಹಣೆ, ಭುಜ, ಬೆನ್ನು, ಹೊಟ್ಟೆ ಮತ್ತು ಮೊಣಕೈ ಭಾಗದಲ್ಲಿ ಅವರಿಗೆ ಆಯಸ್ಕಾಂತೀಯ ಲಕ್ಷಣಗಳು ಇರುವ ಬಗ್ಗೆ ಕಂಡುಬಂದಿದೆ. ಅವರಿಗೆ ಇತರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಲಸಿಕೆಯ ಕಾರಣದಿಂದ ಈ ತರಹದ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಎಂದು ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.