Advertisement

ಹೆಬ್ಬೆಟ್ಟಿನಲ್ಲಿ ಅತೀಂದ್ರಿಯ ಶಕ್ತಿ!

03:57 PM May 23, 2019 | keerthan |

ಈತಂತ್ರವನ್ನು ಹಲವೆಡೆ ಸುಲಭವಾಗಿ ಮಾಡಿ ತೋರಿಸಬಹುದು.
ಕರವಸ್ತ್ರದಿಂದ ಮುಚ್ಚಿರುವ ನಿಮ್ಮ ಹೆಬ್ಬೆಟ್ಟಿಗೆ ಗುಂಡು ಪಿನ್ನುಗಳನ್ನು ಚುಚ್ಚಿ ನಿಲ್ಲಿಸುವುದೇ ತಂತ್ರ. ಇದನ್ನು ಮಾಡುವುದಕ್ಕೆ ಮೊದಲು ನೀವು ಒಂದು ಆಲೂಗೆಡ್ಡೆಯನ್ನು ಹೆಬ್ಬೆಟ್ಟಿನ ಆಕಾರಕ್ಕೆ ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ಇದನ್ನು ಕೈಯಲ್ಲಿ ಹಿಡಿದು ಕರವಸ್ತ್ರದಿಂದ ಮುಚ್ಚಿಟ್ಟುಕೊಳ್ಳಿ.

Advertisement

ಹೊರನೋಟಕ್ಕೆ ನಿಮ್ಮ ಹೆಬ್ಬೆಟ್ಟನ್ನು ಕರವಸ್ತ್ರದಿಂದ ಮುಚ್ಚಿರುವಂತೆಯೇ ಕಾಣುವುದು. ನೀವು ಪಿನ್ನುಗಳನ್ನು ಚುಚ್ಚುವುದು ಈ ಆಲೂಗೆಡ್ಡೆಗೆ. ಐದಾರು ಪಿನ್ನುಗಳನ್ನು ಚುಚ್ಚಿದ ನಂತರ ಮತ್ತೆ ಎಲ್ಲವನ್ನೂ ಒಂದೊಂದಾಗಿ ತೆಗೆಯಿರಿ. ಅನಂತರ ಕರವಸ್ತ್ರವನ್ನು ತೆಗೆಯುವಾಗ ಉಪಾಯವಾಗಿ ಆಲೂಗೆಡ್ಡೆಯನ್ನು ಅದರೊಳಗೆ ಅಡಗಿಸಿಕೊಂಡಿರಿ. ಸ್ವಲ್ಪವೂ ಚುಚ್ಚಿದ ಗುರುತೂ ಇಲ್ಲದೆ ನಿಮ್ಮ ಹೆಬ್ಬೆಟ್ಟನ್ನು ನೋಡಿ ಗೆಳೆಯರು ಆಶ್ಚರ್ಯ ಚಕಿತರಾಗುವರು.

Advertisement

Udayavani is now on Telegram. Click here to join our channel and stay updated with the latest news.

Next