Advertisement
ಪ್ರದರ್ಶನ- ಒಂದು ಮ್ಯಾಟ್ ಮೇಲೆವೈನ್ ಗ್ಲಾಸ್ ಅಥವಾ ಯಾವುದೇ ಥರದ ಗ್ಲಾಸ್ ಒಂದನ್ನು ತಲೆಕೆಳಗಾಗಿಡಿ. ಪಕ್ಕದಲ್ಲಿ ಒಂದು ಕಾಯಿನ್ ಇಡಿ. ಒಂದು ಕರವಸ್ತ್ರ ಅಥವಾ ಟಿಶ್ಯೂ ಪೇಪರನ್ನು ಪ್ರೇಕ್ಷಕರಿಗೆ ಪರೀಕ್ಷಿಸಲು ಕೊಡಿ. ಅದರಲ್ಲೇನೂ ಇಲ್ಲವೆಂದು ಖಾತ್ರಿ ಮಾಡಿಸಿ. ಈಗ ಗ್ಲಾಸ್ ಮೇಲೆ ಆ ಕರವಸ್ತ್ರ ಅಥವಾ ಟಿಶ್ಯೂ ಪೇರ್ಪ ಹಾಕಿ ಜಾದೂ ಮಂತ್ರವನ್ನು ಹೇಳುತ್ತಾ ನಿಧಾನವಾಗಿ ಗ್ಲಾಸನ್ನು ಕಾಯಿನ್ ಮೇಲೆ ಇಟ್ಟು ಹೊದೆಸಿದ ಕರವಸ್ತ್ರವನ್ನು ತೆಗಿಯಿರಿ. ಏನಾಶ್ಚರ್ಯ!!! ಕಾಯಿನ್ ಅಲ್ಲಿರದೆ, ಮಾಯವಾಗಿದೆ!! ಪ್ರೇಕ್ಷಕರಿಗೆ ನೀವು ಹೊದೆಸಿದ ಕರವಸ್ತ್ರವನ್ನು ಮತ್ತೂಮ್ಮೆ ಪರೀಕ್ಷಿಸಲು ಕೊಡಿ ಕಾಯಿನ್ ಅಲ್ಲೂ ಇಲ್ಲ ಎನ್ನುವುದನ್ನು ಗಮನಿಸಿ ಅಚ್ಚರಿ ಪಡುವರು. ಈಗ ಮತ್ತೆ ಆ ಕರವಸ್ತವನ್ನು ಗ್ಲಾಸ್ ಮೇಲೆ ಹೊದಿಸಿ ಮೊದಲ ಸ್ಥಾನದಲ್ಲಿಡಿ. ಗಿಲಿ ಗಿಲಿ ಪೂವ್ವ ಕಾಯಿನ್ ತನ್ನ ಸ್ಥಾನದಲ್ಲೇ ಮತ್ತೆ ಪ್ರತ್ಯಕ್ಷ!!!
ಒಂದು ಗ್ಲಾಸ್ ಒಂದು ಕರವಸ್ತ್ರ ಒಂದು ನಾಣ್ಯ ಒಂದು ಯಾವುದೇ ಏಕ ಬಣ್ಣದ ಮ್ಯಾಟ್, ಅಥವಾ ಬಟ್ಟೆ. ಕತ್ತರಿ ಅಂಟು ಮಾಡುವ ವಿಧಾನ-
ಪ್ರದರ್ಶನದ ಮೊದಲೇ ನೀವು ಯಾವ ಮ್ಯಾಟ್ ಅಥವಾ ಬಟ್ಟೆ ತೆಗೆದು ಕೊಳ್ಳುತ್ತಿದ್ದೀರೋ ಅದೇ ಬಣ್ಣದ ಅಥವಾ ಅದೇ ಮ್ಯಾಟಿನ ತುಂಡೊಂದನ್ನು ಗ್ಲಾಸಿನ ಬಾಯಿಯ ಅಳತೆಗೆ ಸರಿಯಾಗಿ ಕತ್ತರಿಸಿ, ತುಂಡಿನ ಮೇಲ್ಮುಖ ಮೇಲೆ ಬರುವಂತೆ ಗ್ಲಾಸಿನ ಬಾಯಿಗೆ (ಚಿತ್ರದಲ್ಲಿ ತೋರಿಸಿರುವಂತೆ) ಸರಿಯಾಗಿ ಅಂಟಿಸಿ ಬೋರಾಲಾಗಿಡಿ. ಈಗ ನೀವು ಹಾಸಿರುವ ಮ್ಯಾಟ್ ಮತ್ತು ಗ್ಲಾಸಿನ ಬಾಯಿಗೆ ಹಚ್ಚಿರುವ ಅದೇ ಮ್ಯಾಟಿನ ತುಂಡು ಒಂದೇ ಆಗಿರುವುದರಿಂದ ನೀವು ಗ್ಲಾಸನ್ನು ಕರವಸ್ತ್ರದಿಂದ ಮುಚ್ಚಿ ಕಾಯಿನ್ ಮೇಲೆ ಇಟ್ಟಾಗ ಕಾಯಿನ್ ಎಲ್ಲೂ ಮಾಯವಾಗದೆ ಅಲ್ಲೇ ಗ್ಲಾಸಿನ ಬಾಯಿಗೆ ಹಚ್ಚಿರುವ ಮ್ಯಾಟಿನ ಪೀಸಿನ ಕೆಳಗೆ ಮುಚ್ಚಿರುತ್ತದೆ. ಇಲ್ಲಿ ಕರವಸ್ತ್ರ ಕೇವಲ ಪ್ರೇಕ್ಷಕರ ಗಮನ ಬೇರೆಡೆಗೆ ಸೆಳೆಯಲು ಮತ್ತು ಗ್ಲಾಸಿನ ಬಾಯಿಗೆ ಅಂಟಿಸಿದ ಮ್ಯಾಟ್ ತುಂಡು ಸ್ಥಳಾಂತರಿಸುವಾಗ ಕಾಣಿಸದೇ ಇರಲಿ ಎನ್ನುವುದ್ದಕ್ಕೆ ಮಾತ್ರ ಉಪಯೋಗ. ಈ ತಂತ್ರದ ರಹಸ್ಯ ಇಷ್ಟೇ. ಇದನ್ನೇ ಅತ್ಯಂತ ಕಲಾತ್ಮಕವಾಗಿ ಮಾಡೋದನ್ನು ಕರಗತ ಮಾಡಿಕೊಂಡರಾಯಿತು.
Related Articles
Advertisement