Advertisement

ಸಂಖ್ಯಾ ವಿನೋದ

10:16 AM Sep 20, 2019 | mahesh |

ಮ್ಯಾಜಿಕ್‌ನಲ್ಲಿ ವಸ್ತುಗಳನ್ನು ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿ, ಆ ಮೂಲಕ ಅವರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಬಗೆ. ಆದರೆ, ಇದನ್ನೇ ಪದೇ ಪದೇ ಮಾಡುತ್ತಿದ್ದರೆ ನೋಡುಗರಿಗೆ ಬೋರ್‌ ಆಗುತ್ತದೆ. ಹೀಗಾಗಿ, ಮ್ಯಾಜಿಕ್‌ ಪ್ರದರ್ಶನದಲ್ಲಿ ಒಂದೇ ರೀತಿಯ ಐಟಂಗಳ ಪ್ರದರ್ಶನವನ್ನು ಕೆಲಕಾಲವಾದರೂ ಪಕ್ಕಕ್ಕೆ ಇಡಬೇಕಾಗುತ್ತದೆ. ವಸ್ತುಗಳನ್ನು ಬಿಟ್ಟು ಮತ್ತೇನು ಮ್ಯಾಜಿಕ್‌ ಮಾಡೋದು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇದಕ್ಕಾಗಿ ಇಲ್ಲಿದೆ ನಿಮಗೊಂದು ಲೆಕ್ಕದ ಮ್ಯಾಜಿಕ್‌. ಅರೆ, ಏನಿದು ಲೆಕ್ಕದ ಮ್ಯಾಜಿಕ್‌ ಅಂದ್ರಾ? ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.

Advertisement

ಪ್ರೇಕ್ಷಕರಲ್ಲೊಬ್ಬನನ್ನು ವೇದಿಕೆಗೆ ಕರೆಯಿರಿ. ಅವರಿಗೆ ಯಾವುದಾದರೂ ಎರಡು ಅಂಕಿಯ ಸಮ ಸಂಖ್ಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲು ಹೇಳಿ. ಅದನ್ನು 2 ರಿಂದ ಗುಣಿಸಿ ಅದಕ್ಕೆ 12 ಕೂಡಿಸಿ ಬಂದ ಉತ್ತರಕ್ಕೆ 4 ರಿಂದ ಭಾಗಿಸಲು ಹೇಳಿ. ಅನಂತರ ಈ ಉತ್ತರದಿಂದ ಅವರು ನೆನಪಿಸಿಕೊಂಡ ಸಂಖ್ಯೆಯ ಅರ್ಧದಷ್ಟನ್ನು ಕಳೆಯಲು ಹೇಳಿ. ಈಗ ಉಳಿದ ಸಂಖ್ಯೆ 3 ಹೀಗಂತ ನೀವು ನೀವು ಆತ ಹೇಳುವ ಮೊದಲೇ ಹೇಳಬೇಕು. ಆಗಲೇ ನಿಮ್ಮ ಜಾದೂ ಪ್ರಯತ್ನಕ್ಕೆ ಪವರ್‌ ಬರುವುದು. ನಿಮ್ಮ ಉತ್ತರ ಸರಿಯಾಗಿರುತ್ತದೆ. ನೀವು ವೇದಿಕೆಗೆ ಕರೆದ ಪ್ರೇಕ್ಷಕರಲ್ಲಿ- ಅರೆ, ಅದು ಹೇಗೆ ಸರಿಯಾಗಿ ಉತ್ತರ ಹೇಳಿದರು ಅನ್ನೋ ಹುಳ ಹೊಕ್ಕಿರುತ್ತದೆ.

ಜಾಸ್ತಿ ಮಂಡೆ ಬಿಸಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಇದರ ರಹಸ್ಯ ಇಷ್ಟೇ. ನೀವು ಕೂಡಿಸಲು ಹೇಳುವ ಸಂಖ್ಯೆಯನ್ನು 4 ರಿಂದ ಭಾಗಿಸಿದಾಗ ಶೇಷ ಉಳಿಯಬಾರದು. ಇಂತಹ ಸಂಖ್ಯೆಯನ್ನೇ ಕೂಡಿಸಲು ಹೇಳಬೇಕು ಮತ್ತು ಉತ್ತರ ಕೂಡಿಸಲು ಹೇಳಿದ ಸಂಖ್ಯೆಯ ನಾಲ್ಕನೇ ಒಂದರಷ್ಟು ಇರುತ್ತದೆ ಅಷ್ಟೇ. ಆದರೆ, ನೀವು ಬೇರೆ ಬೇರೆ ಸಂಖ್ಯೆಗಳನ್ನು ಕೂಡಿಸಿ ಸರಿಯಾದ ಕ್ರಮವನ್ನು ಅಭ್ಯಾಸ ಮಾಡಿಕೊಳ್ಳಿ.

ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next