Advertisement
ಪ್ರದರ್ಶನ:ಜಾದೂಗಾರ 100 ರುಪಾಯಿ (ಗಾಂಧೀಜಿ ಚಿತ್ರವಿರುವ ಯಾವುದೇ ನೋಟು ಆಗುತ್ತದೆ) ನೋಟೊಂದನ್ನು ಪ್ರೇಕ್ಷಕರಿಗೆಲ್ಲಾ ತೋರಿಸಿ, ಗಾಂಧಿ ತಾತನ ಚಿತ್ರವನ್ನು ಗಮನಿಸಲು ತಿಳಿಸುತ್ತಾನೆ. ಈಗ ನೋಟನ್ನು ಮಡಚಿ, ಜಾದೂ ಮಂತ್ರವನ್ನು ಉತ್ಛರಿಸುತ್ತಾ ನಿಧಾನವಾಗಿ ನೋಟನ್ನು ಓಪನ್ ಮಾಡಿದರೆ, ಸೀದಾ ಇದ್ದ ಗಾಂಧೀ ತಾತ ತಲೆ ಕೆಳಗಾಗಿರುತ್ತದೆ! ಪ್ರೇಕ್ಷಕರಿಗೆ ನೋಟಿನಲ್ಲಿ ಏನೂ ಮೋಸ ಅಡಗಿಲ್ಲ ಎನ್ನುವುದನ್ನು ಖಚಿತ ಪಡಿಸಲು ಜಾದೂಗಾರ ನೋಟನ್ನು ಪ್ರೇಕ್ಷಕನೊಬ್ಬನ ಕೈಗೆ ನೀಡುತ್ತಾನೆ. ಪ್ರೇಕ್ಷಕ ಅದನ್ನು ಮುಟ್ಟಿ ಪರೀಕ್ಷಿಸಿ ವಾಪಸ್ ಮಾಡುತ್ತಾನೆ. ಜಾದೂಗಾರ ಮತ್ತೂಮ್ಮೆ ಮ್ಯಾಜಿಕ್ಕನ್ನು ಪುನರಾವರ್ತಿಸುತ್ತಾನೆ.
ಗಾಂಧೀಜಿ ಚಿತ್ರವಿರುವ ಯಾವುದೇ ಕರೆನ್ಸಿ ನೋಟು ಮಾಡುವ ವಿಧಾನ:
ಮೊದಲಿಗೆ ಗಾಂಧೀಜಿ ಮುಖ ಮೇಲಿರುವಂತೆ ಹಿಡಿದುಕೊಳ್ಳಿ. ನಂತರ ಅಡ್ಡಡ್ಡವಾಗಿ ಗಾಂಧೀಜಿಯ ಚಿತ್ರ ಕೆಳಮುಖವಾಗುವಂತೆ ಹಾಗೂ ಮಡಚಿದ ಮಡಿಕೆ ನಿಮ್ಮೆಡೆಗೆ ಬರುವಂತೆ ಮಡಚಿ (ಚಿತ್ರಗಳನ್ನು ಗಮನಿಸಿ). ಈಗ ಎರಡನೆಯ ಮಡಿಕೆ ಹಿಂಬಾಗಕ್ಕೆ ತಳ್ಳಿ ಮಡಚಿ. ಅದೇ ಮಡಿಕೆಯನ್ನು ಮತ್ತೂಮ್ಮೆ ನಿಮ್ಮ ಕಡೆಗೆ ಬರುವಂತೆ ಮಡಚಿ. ಈಗ ಜಾದೂ ಮಂತ್ರವನ್ನು ಪಠಿಸುತ್ತಾ ಮುಂದಿನಿಂದಲೇ ಎಲ್ಲಾ ಮಡಚಿದ್ದ ಮಡಿಕೆಯನ್ನು ತೆರೆದು ತೋರಿಸಿದರೆ ಗಾಂಧೀಜಿ ಚಿತ್ರ ತಲೆಕೆಳಗಾಗಿರುತ್ತೆ. ಈ ಮ್ಯಾಜಿಕನ್ನು ಸುಲಭವಾಗಿ ಮಾಡಲು ಕೆಳಗಿನ ವಿಡಿಯೊ ಕೊಂಡಿಗೆ ಭೇಟಿ ನೀಡಿ.
Related Articles
Advertisement
ಗಾಯತ್ರಿ ಯತಿರಾಜ್