Advertisement
ಆರು ಕಾರ್ಡುಗಳ ಮೇಲೆ ಆರು ಹೆಸರುಗಳನ್ನು ಬರೆದಿರುತ್ತದೆ. ಪ್ರೇಕ್ಷಕರಲ್ಲೊಬ್ಬರನ್ನು ಕರೆದು ಯಾವುದಾದರೂ ಹೆಸರನ್ನು ನೆನಪಿಟ್ಟುಕೊಳ್ಳುವಂತೆ ಹೇಳಿ. ನಂತರ, ಅವರಿಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿ. ನೀವು ಒಂದೊಂದೇ ಕಾರ್ಡಿನ ಮೇಲೆ ನಿಮ್ಮ ಮಂತ್ರದಂಡದಿಂದ ಕುಟ್ಟುತ್ತಿದ್ದಂತೆ ಅವರು ಆರಿಸಿಕೊಂಡ ಹೆಸರಿನ ಒಂದೊಂದು ಅಕ್ಷರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.
ಅರೆ, ನೀವು ಹೇಳಿದಷ್ಟು ಸುಲಭವೇ ಇದು? ಅಂತ ಕೇಳಬಹುದು. ನಿಜಕ್ಕೂ ಇದು ಸಲೀಸೆ. ಅದು ಹೇಗೆ ಮಾಡಬೇಕೆಂದು ಇಲ್ಲಿ ಹೇಳುತ್ತಿದ್ದೇನೆ ಕೇಳಿ. ಕಾರ್ಡುಗಳ ಮೇಲೆ ಈ ರೀತಿ ಅಕ್ಷರಗಳಿರುವ ಹೆಸರುಗಳನ್ನೇ ಬರೆಯಬೇಕು. ಅದಾವುದೆಂದರೆ ಜಯಾ, ಮಾಲಾ, ಶಶಿಧರ, ಕುಸುಮಾಕರ, ಜಯಪ್ರಕಾಶ, ಭುವನಮನೋಹರಿ ಎಂದು ಹೆಸರುಗಳನ್ನು ಬರೆದು ಸಾಲಾಗಿ ಇಡಬೇಕು. ಮಂತ್ರದಂಡದ ಮೊದಲ ಪೆಟ್ಟನ್ನು ಯಾವುದಾದರೂ ಒಂದು ಕಾರ್ಡಿನ ಮೇಲೆ ಹಾಕಬೇಕು. ನಂತರದ ಪೆಟ್ಟುಗಳನ್ನು ಮೇಲಿನ ಕ್ರಮದಂತೆ ಸಾಲಾಗಿ ಇಟ್ಟ ಕಾರ್ಡುಗಳ ಮೇಲೆಯೇ ಹಾಕಬೇಕು. ಒಂದೊಂದೇ ಅಕ್ಷರ ಜಾಸ್ತಿಯಾಗುವುದರಿಂದ ಆತ ‘ಹೂಂ’ ಎಂದು ಹೇಳುವಾಗ ಆತನ ಆಯ್ಕೆಯ ಕಾರ್ಡನ್ನೇ ಕುಟ್ಟಿರುತ್ತೀರಿ.
Related Articles
Advertisement
ಉದಯ್ ಜಾದೂಗಾರ್