Advertisement
ಇವತ್ತು ನಗರ ಎಂದಾಕ್ಷಣ ಸಾವಿರಾರು ವಾಹನಗಳು, ಅಲ್ಲಲ್ಲಿ ಟ್ರಾಫಿಕ್ ಜಾಮ್ ನೆನಪಿಗೆ ಬರುತ್ತದೆ. ವಾಹನ ದಟ್ಟಣೆಗೆ ಸರಿಯಾಗಿ ರಸ್ತೆಗಳು ಇರದಿರುವುದು ಒಂದು ಸಮಸ್ಯೆಯಾದರೆ, ನಿಯಮಗಳು ಅಚ್ಚುಕಟ್ಟಾಗಿ ಮತ್ತು ವೈಜ್ಞಾನಿಕವಾಗಿ ಇಲ್ಲದಿರುವುದು ಮೂಲ ಸಮಸ್ಯೆಯಾಗಿದೆ. ಮುಂದುವರಿದ ಅನೇಕ ರಾಷ್ಟ್ರಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಅನೇಕ ರೀತಿಯ ಪರಿಹಾರೋಪಾಯದ ಪ್ರಯತ್ನಗಳು ನಡೆಯುತ್ತಿವೆ. ಅಂತಹುದರಲ್ಲಿ ನಮ್ಮಲ್ಲೂ ಅಳವಡಿಸಬಹುದಾದ ಟ್ರಾಫಿಕ್ ಯೋಜನೆ ಮ್ಯಾಜಿಕ್ ವೃತ್ತಾಕಾರ.
ಇಂಗ್ಲೆಂಡ್‌ನ ಸ್ವೀಡನ್‌ನಲ್ಲಿ ಮ್ಯಾಜಿಕ್ ವೃತ್ತಾಕಾರವನ್ನು 1972ರಲ್ಲಿ ಜಾರಿಗೆ ತರಲಾಯಿತು. ಆರು ಮಾರ್ಗಗಳು ಒಂದು ಕೇಂದ್ರ ವೃತ್ತದ ಸುತ್ತ ವೃತ್ತದಲ್ಲಿ ವೈಜ್ಞಾನಿಕವಾಗಿ ಜೋಡಿಸಲಾದ ಐದು ಮಿನಿವೃತ್ತಾಕಾರಗಳನ್ನು ಒಳಗೊಂಡಿರುವ ರಿಂಗ್ ಜಂಕ್ಷನ್ ಆಗಿದೆ. ಸಂಕೀರ್ಣ ಜಂಕ್ಷನ್ ರಸ್ತೆಗಳ ನಡುವೆ ಟ್ರಾಫಿಕ್ ಒತ್ತಡವನ್ನು ತಪ್ಪಿಸಲು ಅನೇಕ ಮಾರ್ಗಗಳನ್ನು ಒಳಗೊಂಡಿದೆ. ಹೊರಗಿನ ವೃತ್ತ ಸಂಚಾರವನ್ನು ಪ್ರದಕ್ಷಿಣಾಕಾರವಾಗಿ ಸಾಮಾನ್ಯ ವೃತ್ತಾಕಾರದಂತೆ (ರಸ್ತೆಯ ಎಡಭಾಗದಲ್ಲಿ ಟ್ರಾಫಿಕ್ ಡ್ರೈವ್ ಮಾಡುವ ಸ್ಥಳಗಳಲ್ಲಿ) ಒಯ್ಯುತ್ತದೆ ಮತ್ತು ಕಡಿಮೆ ಪ್ರವೀಣ ಬಳಕೆದಾರರು ಹೊರಗಿನ ವಲಯವನ್ನು ಮಾತ್ರ ಬಳಸಲು ಆಯ್ಕೆ ಮಾಡಬಹುದು. ಆಂತರಿಕ ವಲಯವು ದಟ್ಟಣೆಯನ್ನು ಆ್ಯಂಟಿಕ್ಲಾಕ್ ವೈಸ್ ದಿಕ್ಕಿನಲ್ಲಿ ಒಯ್ಯುತ್ತದೆ ಮತ್ತು ಹೆಚ್ಚು ಪ್ರವೀಣ ಬಳಕೆದಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತಹ ಆಯ್ಕೆಗಳಿವೆ. ಹೀಗೆ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಮ್ಯಾಜಿಕ್ ವೃತ್ತಾಕಾರದ ಬಳಕೆ ಮುಂದುವರಿದ ನಗರಗಳಲ್ಲಿದೆ. ನಮ್ಮ ನಗರಗಳಲ್ಲಿ ಅಳವಡಿಕೆಯಾಗಲಿ
ಈ ಮೇಲಿನ ಕೆಲವೊಂದು ಚಿತ್ರಗಳನ್ನು ಗಮನಿಸಿದಾಗ ಇಲ್ಲಿನ ಕೆಲವೊಂದು ಟ್ರಾಫಿಕ್ ಕೇಂದ್ರಗಳನ್ನು ಕಂಡಂತೆ ಭಾಸವಾಗುತ್ತದೆ. ಸದಾ ಟ್ರಾಫಿಕ್ ಸಮಸ್ಯೆಯಲ್ಲಿ ಸುಳಿಯುತ್ತಿರುವ ನಂತೂರ್ ಸರ್ಕಲ್ ಅದೆಷ್ಟೋ ಅಪಘಾತಗಳನ್ನು ಕಂಡಿದೆ. ಇದಕ್ಕೆ ಅನೇಕ ಕಾರಣಗಳು. ಇಲ್ಲಿನ ಟ್ರಾಫಿಕ್ ಕೇಂದ್ರ ತುಂಬಾ ವಿಶಾಲವಾಗಿದೆ. ಸರಿಯಾದ ಟ್ರಾಫಿಕ್ ವ್ಯವಸ್ಥೆ ಇಲ್ಲದಿರುವುದು ಹೀಗೆ ಮುಂತಾದ ಕಾರಣಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತಿದು. ಈ ಮ್ಯಾಜಿಕ್ ವೃತ್ತಾಕಾರವನ್ನು ಅಳವಡಿಸಿದ ವಿದೇಶಿ ನಗರಗಳನ್ನು ಅನುಸರಿಸಿ ಅಲ್ಲಿನ ತಂತ್ರಜ್ಞರಿಂದ ಮಾಹಿತಿ ಸಂಗ್ರಹಿಸಿ ಮಂಗಳೂರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಿಸಿಕೊಡಬಹುದು.
Related Articles
ಒಂದು ಕೇಂದ್ರ ಸ್ಥಳವು 5, 6 ರಸ್ತೆಗಳನ್ನು ಹೊಂದಿದ್ದಲ್ಲಿ ಅಲ್ಲಿ ಸಾಮಾನ್ಯವಾಗಿ ವಾಹನ ದಟ್ಟಣೆ, ಅಪಘಾತಗಳು ಕಂಡುಬರುತ್ತವೆ. ಇದನ್ನು ತಪ್ಪಿಸಲು ಮೇಲೆ ಹೇಳಿದ ಮ್ಯಾಜಿಕ್ ವೃತ್ತಾಕಾರದ ನಿಯಮವನ್ನು ಅಳವಡಿಸಬಹುದು. ಇದು ತಜ್ಞರನ್ನು ಒಳಗೊಂಡು ಮಾಡಬಹುದಾಗಿದ್ದು. ತುಂಬಾ ರಸ್ತೆಗಳು, ಕೇಂದ್ರ ಸ್ಥಳದ ವ್ಯಾಪ್ತಿಯ ಪರಿದಿಯನ್ನು ಆಧರಿಸಿ ನಿರ್ಮಿಸಲಾಗುತ್ತದೆ. ವ್ಯಾಪ್ತಿಯ ಲೆಕ್ಕವನ್ನು ಪರಿಗಣನೆಗೆ ಪಡೆದು ಜ್ಯಾಮಿತಿ ಮುಖೇನ ಇಲ್ಲಿ ರಸ್ತೆಯ ದಿಕ್ಕನ್ನು ಸಂಕೇತದ ಮೂಲಕ ಸೂಚಿಸಲಾಗುತ್ತದೆ.
Advertisement
- ವಿಶ್ವಾಸ್ ಅಡ್ಯಾರ್