Advertisement

“ಮಗನೇ ಮಹಿಷ’ತುಳು ಸಿನೆಮಾ ಬಿಡುಗಡೆ

02:08 AM Apr 30, 2022 | Team Udayavani |

ಮಂಗಳೂರು: ವೀರು ಟಾಕೀಸ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ಕೋಸ್ಟಲ್‌ವುಡ್‌ನ‌ ಬಹು ನಿರೀಕ್ಷಿತ “ಮಗನೇ ಮಹಿಷ’ ತುಳು ಸಿನೆಮಾ ಕರಾವಳಿಯಾದ್ಯಂತ 17 ಚಿತ್ರ ಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಗೊಂಡಿದ್ದು, ಮೊದಲ ದಿನವೇ ತುಳು ಚಿತ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.

Advertisement

ಮಂಗಳೂರಿನ ರೂಪವಾಣಿ, ಬಿಗ್‌ ಸಿನೆಮಾಸ್‌, ಪಿವಿಆರ್‌, ಸಿನೆ ಪೊಲೀಸ್‌, ಸುರತ್ಕಲ್‌ ನಟರಾಜ್‌, ಸಿನೆ ಗ್ಯಾಲಕ್ಸಿ, ಉಡುಪಿಯ ಕಲ್ಪನಾ, ಬಿಗ್‌ ಸಿನೆಮಾಸ್‌, ಐನಾಕ್ಸ್‌, ಕಾರ್ಕಳದ ಪ್ಲಾನೆಟ್‌, ರಾಧಿಕಾ, ಮೂಡುಬಿದಿರೆಯ ಅಮರಶ್ರೀ, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್‌, ಸುಳ್ಯದ ಸಂತೋಷ್‌, ಕಾಸರಗೋಡಲ್ಲಿ ಕೃಷ್ಣ, ಮುಳ್ಳೇರಿ ಯಾದ ಕಾವೇರಿ ಚಿತ್ರಮಂದಿರಗಳಲ್ಲಿ ಸಿನೆಮಾ ಪ್ರದರ್ಶನ ಕಾಣುತ್ತಿದೆ.

ತುಳುವನ್ನು ಪ್ರೋತ್ಸಾಹಿಸಿ
ಸಿನೆಮಾ ಬಿಡುಗಡೆ ಸಮಾರಂಭ ಮಂಗಳೂರಿನ ಭಾರತ್‌ಮಾಲ್‌ನ ಬಿಗ್‌ ಸಿನೆಮಾಸ್‌ನಲ್ಲಿ ಶುಕ್ರವಾರ ನಡೆ ಯಿತು. ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿ ಸೈಮನ್‌ ಅಬ್ರಹಾಂ ಮಾತನಾಡಿ, ತುಳು ಚಿತ್ರಕ್ಕೆ ಅವಕಾಶಗಳು ಕಡಿಮೆ. ಈ ಹಿನ್ನೆಲೆಯಲ್ಲಿ ಎಲ್ಲ ತುಳು ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಕಲಾವಿದರನ್ನು ಹಾಗೂ ತುಳು ಭಾಷೆಯನ್ನು ಪ್ರೋತ್ಸಾಹಿಸಬೇಕು ಎಂದರು.

ಚಿತ್ರವನ್ನು ಗೆಲ್ಲಿಸಿ
ಕನ್ನಡ ಚಲನಚಿತ್ರ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮಾತನಾಡಿ, ಯಾವುದೇ ಭಾಷೆಯ ಚಿತ್ರವಾದರೂ ಪ್ರೇಕ್ಷಕರು ಅದನ್ನು ವೀಕ್ಷಿಸುವ ಮೂಲಕ ಚಿತ್ರವನ್ನು ಗೆಲ್ಲಿಸಬೇಕು ಎಂದರು.

ಚಿತ್ರದ ನಿರ್ದೇಶಕ, ನಿರ್ಮಾಪಕ ವೀರೇಂದ್ರ ಶೆಟ್ಟಿ ಕಾವೂರು ಮಾತನಾಡಿ, ಎರಡು ವರ್ಷಗಳ ಹಿಂದಿನ ಕಠಿಣ ಪರಿಶ್ರಮದ ಫಲವಾಗಿ ಚಿತ್ರಕ್ಕೆ ಅಂತಿಮ ರೂಪ ಸಿಕ್ಕಿ ಈಗ ಬಿಡುಗಡೆಯಾಗಿದೆ. ತುಳು ಭಾಷಾಭಿಮಾನಿಗಳೆಲ್ಲರೂ ಚಿತ್ರವನ್ನು ವೀಕ್ಷಿಸುವ ಮೂಲಕ ತುಳು ಚಿತ್ರರಂಗ ವನ್ನು ಬೆಳೆಸಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.

Advertisement

ಪ್ರಮುಖರಾದ ಡಾ| ದೇವದಾಸ್‌ ಕಾಪಿಕಾಡ್‌, ವಿಜಯ ಕುಮಾರ್‌ ಕೊಡಿಯಾಲಬೈಲ್‌, ನವೀನ್‌ ಡಿ. ಪಡೀಲ್‌, ಗಿರೀಶ್‌ ಶೆಟ್ಟಿ, ಡಾ| ರಾಮಚಂದ್ರ ರಾವ್‌, ಗಣೇಶ್‌ ನೀರ್ಚಾಲ್‌, ವೆಂಕಟೇಶ್‌ ಕಾಮತ್‌ ಉಡುಪಿ, ರವೀಂದ್ರ ಶೆಟ್ಟಿ ಬಾಡೂರು, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ನಿತೇಶ್‌ ಶೆಟ್ಟಿ ಎಕ್ಕಾರು ನಿರೂಪಿಸಿದರು.

“ಮಗನೇ ಮಹಿಷ’ದಲ್ಲಿ ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಭೋಜರಾಜ್‌ ವಾಮಂಜೂರು, ಅರವಿಂದ ಬೋಳಾರ್‌ ಪ್ರಧಾನ ಪಾತ್ರದಲ್ಲಿದ್ದು, ಜ್ಯೋತಿ ರೈ, ಶಿವಧ್ವಜ್‌, ವಿಕ್ರಮ್‌ ಮಾಡ, ಶೋಭರಾಜ್‌ ಪಾವೂರು, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಅವಿನಾಶ್‌ ರೈ ನೀನಾಸಂ, ರಾಘವೇಂದ್ರ ರೈ, ಚೈತ್ರಾ ಶೆಟ್ಟಿ, ಭವ್ಯಾ ಶೆಟ್ಟಿ, ರಕ್ಷಾ ಶೆಟ್ಟಿ, ಗಿರೀಶ್‌ ಶೆಟ್ಟಿ ಕಟೀಲು, ರಮೇಶ್‌ ಕಲ್ಲಡ್ಕ, ದೀಪಕ್‌ ರಾಜ್‌, ಕರುಣಾಕರ ಸರಿಪಲ್ಲ, ದಿನೇಶ್‌ ಕೊಡಪದವು, ಪ್ರಶಾಂತ್‌ ಸಿ.ಕೆ. ಮೊದಲಾದವರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next