Advertisement

ನಾಗರಿಕರ ರಕ್ಷಣೆಯೇ ಪೊಲೀಸ್‌ ಇಲಾಖೆಯ ಕರ್ತವ್ಯ

04:17 PM Feb 13, 2020 | Naveen |

ಮಾಗಡಿ: ನಾಗರಿಕರ ರಕ್ಷಣೆಗೆ ಪೊಲೀಸರು ಸದಾ ಜಾಗೃತರಾಗಿರುತ್ತಾರೆ. ಅವರಿಗೆ ಪ್ರತಿಯೊಬ್ಬ ನಾಗರಿಕ ಸಹಕಾರ ನೀಡಿದರೆ, ಕಾನೂನು ಸುವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ ಚಂದ್ರ ಮನವಿ ಮಾಡಿದರು.

Advertisement

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಪೊಲೀಸ್‌ ಇಲಾಖೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಆಹಾವಾಲು ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ ಠಾಣೆ ಎಂದರೆ ನಾಗರಿಕರು ಭಯ ಪಡುವ ಅಗತ್ಯವಿಲ್ಲ. ನಿಮ್ಮ ರಕ್ಷಣೆಯೇ ನಮ್ಮ ಕರ್ತವ್ಯವಾಗಿರುತ್ತದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾನೂನು ರಕ್ಷಣೆಗೆ ಪೊಲೀಸರು ಸೇವೆ ಮಾಡಲು ಸದಾ ಸಿದ್ದರಿರುತ್ತಾರೆ ಎಂದು ತಿಳಿಸಿದರು.

ಜನಸಂಖ್ಯೆಯ ಸ್ಫೋಟದಿಂದ ಹೆಚ್ಚುತ್ತಿರುವ ಅಪರಾಧ, ಕಳ್ಳತನ, ಮೋಸ, ವಂಚನೆಗಳನ್ನು ತಡೆಗಟ್ಟಲು ಪೊಲೀಸರು ಸದಾ ಜಾಗೃತರಾಗಿರುತ್ತಾರೆ. ಅದರೆ ಮಾಹಿತಿ ಕೊರತೆಯಿಂದಾಗಿ ಅಪರಾಧಿಗಳು ತಪ್ಪಿಸಿಕೊಳ್ಳುವ ಅವಕಾಶಗಳಿರುತ್ತವೆ. ಜಾಗೃತ ನಾಗರಿಕರು ನಿರ್ಭಯವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಅಪರಾಧಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದರು.

ಡಿವೈಎಸ್ಪಿ ಲಕ್ಷ್ಮೀನಾರಾಯಣ ಮಾತನಾಡಿ, ಸಾರ್ವಜನಿಕರ ಸಹಕಾರದಿಂದ ಪೊಲೀಸರು ತಮ್ಮ ಕರ್ತವ್ಯವನ್ನು ಯಶಸ್ವಿಗೊಳಿಸುವ ಪ್ರಯತ್ನದಲ್ಲಿ ಶ್ರಮಿಸುತ್ತಿದ್ದಾರೆ. ನಾಗರಿಕರ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆಗದಂತೆ ರಕ್ಷಣೆ ಮಾಡುವುದು. ಅಪಘಾತ ಮತ್ತು ಅಪರಾಧಗಳ ತಡೆಗೆ ಕಾನೂನು ಪಾಲನೆ ಬಹಳ ಮುಖ್ಯವಾಗಿರುತ್ತದೆ. ಪೊಲೀಸ್‌ ಠಾಣೆ ಕೊಲೆಗಡುಕರಿಗೆ, ಸಲುಗೆಕೋರರಿಗೆ, ಕಳ್ಳಕಾಕರಿಗೆ, ದುಷ್ಕರ್ಮಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ ಸಾರ್ವಜನಿಕರು ಕಾನೂನು ಕೈಗೆ ತ್ತಿಕೊಳ್ಳದೆ ಇಲಾಖೆ ನಿಯಮ ಪಾಲಿಸಿ ಎಂದರು.

ತಾಪಂ ಮಾಜಿ ಸದಸ್ಯ ಸಿ.ಜಯರಾಂ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಠಾಣಾ ವ್ಯಾಪ್ತಿ ಹಾಗೂ ಬೀಟ್‌ ವ್ಯವಸ್ಥೆ ಬದಲಾಗಬೇಕು. ಪೊಲೀಸರು ದೂರು ಬರೆದುಕೊಳ್ಳುವ ಬದಲಾಗಿ ವಿಡಿಯೋ ರೇಕಾರ್ಡ್‌ ದೂರು ದಾಖಲು ಮಾಡಿಕೊಳ್ಳಬೇಕು. ಮೇಲಾಧಿಕಾರಿಗಳು ಪೊಲೀಸರ ಸಮಸ್ಯೆಗಳ ನಿವಾರಣೆಗೂ ಮುಂದಾಗಬೇಕು. ಅವರ ಆರೊಗ್ಯವಾಗಿರಲು ಕ್ರೀಡಾ ಮತ್ತು ಮನೋ ರಂಜನಾ ಚಟುವಟಿಕೆಗೂ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

Advertisement

ಇದೇ ವೇಳೆ ನೂರಾರು ನಾಗರಿಕರು ತಮ್ಮ ಆಹಾವಾಲುಗಳನ್ನು ಸಲ್ಲಿಸಿದರು. ಕಲ್ಕೆರೆ ಶಿವಣ್ಣ, ದಲಿತ ಮುಖಂಡರಾದ ದೊಡ್ಡಿ,ಲಕ್ಷ್ಮಣ್‌, ಮೂರ್ತಿ, ಡಿ.ಶಿವಕುಮಾರ್‌, ದೊಡ್ಡಯ್ಯ, ಪುರಸಭಾ ಸದಸ್ಯರಾದ ಎಂ.ಎನ್‌. ಮಂಜುನಾಥ್‌, ಕೆ.ವಿ.ಬಾಲರಘು, ಎಚ್‌.ಜೆ.ಪುರು ಷೋತ್ತಮ್‌, ರೇಖಾ, ಹೇಮಾವತಿ, ವಿಜಯ ಲಕ್ಷ್ಮೀ, ರೂಪೇಶ್‌, ಶಿವರುದ್ರಮ್ಮ, ರಿಯಾಜ್‌, ಮಹೇಶ್‌, ಜಯರಾಂ, ರಂಗನಾಥ್‌, ರಮೇಶ್‌, ಗೋಪಿ ವನಜಾ, ಎಎಸ್‌ಐ ಮಲ್ಲೇಶ್‌, ಪೊಲೀಸ್‌ ಸಿಬ್ಬಂದಿ ಅಪ್ಪರ್‌ ಸಾಬ್‌, ರಾಜಣ್ಣ, ಅರುಣ್‌, ಶಾಲಿನಿ, ರಾಧಾಮಣಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next