ಬಳಿ ಜೀತದಾಳಾಗಿ ದುಡಿಯುತ್ತಿದ್ದ ಶಂಕರ ಕೃಷ್ಟಯ್ಯ ಶಿಕ್ಷೆಗೆ ಒಳಗಾಗಿದ್ದಾನೆ” ಎಂಬ ವಿಚಿತ್ರ ಸಂಗತಿ ಚರ್ಚೆಯ ಮುನ್ನೆಲೆಗೆ ಬಂತು. ಈ ಬಗ್ಗೆ ಲಂಡನ್ನಿನ ಪತ್ರಿಕೆಯೊಂದು ಸಂಪಾದಕೀಯ ಲೇಖನವನ್ನು ಬರೆಯಿತು.
Advertisement
ಪೂಜ್ಯ ಗಾಂಧೀಜಿಯವರ ಹತ್ಯೆಯ ಮೊಕದ್ದಮೆಯ ವಿಚಾರಣೆ ಭಾರತದ ನ್ಯಾಯಾಂಗದ ಒಂದು ಅಪ್ರಿಯ ಅಧ್ಯಾಯ. ಇದು ಭಾರತೀಯರಿಗೆಲ್ಲ ಅತ್ಯಂತ ಭಾವನಾತ್ಮಕ ಮತ್ತು ಸೂಕ್ಷ್ಮ ಸಂವೇದನೆಯ ಸಂಗತಿ. ಪ್ರಕರಣದ ವಿಚಾರಣೆಗೆ ಜಗತ್ತಿನ ತುಂಬ ಗಹನತೆ ಮತ್ತು ಭವ್ಯತೆ ಪ್ರಾಪ್ತವಾಗಿತ್ತು. ಈ ಹತ್ಯೆಯ ವಿಚಾರಣೆ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹತ್ಯೆ ನಡೆದು ಇದೇ ಜನವರಿ 30ಕ್ಕೆ 72 ವರ್ಷಗಳು ಪೂರ್ಣಗೊಳ್ಳುತ್ತವೆ. ಮರುವಿಚಾರಣೆ ಆಗಬೇಕು ಎಂಬ ಕೂಗು ಈಗಲೂ ಇದ್ದೇ ಇದೆ.
Related Articles
Advertisement
ವಿನಾಯಕ ದಾಮೋದರ ಸಾವರ್ಕರ್‌ರನ್ನು ನಿರ್ದೋಶಿ ಎಂದು ಬಿಡುಗಡೆ ಮಾಡಲಾಯಿತು. ಮತ್ತು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದ ದಿಗಂಬರ ರಾಮಚಂದ್ರ ಬಡಗೆಯನ್ನು ನ್ಯಾಯಾಲಯ ವಿಧಿಸಿದ್ದ ಕರಾರು ಕ್ರಮಬದ್ಧವಾಗಿ ಪಾಲಿಸಿದ್ದರಿಂದ ಬಿಡುಗಡೆ ಮಾಡಲಾಯಿತು.
ನ್ಯಾಯಾಲಯ ಪ್ರಕಟಿಸಿದ ಈ ತೀರ್ಪು ಕೇಳಿ ಆರೋಪಿಗಳಾÂರೂ ವಿಚಲಿತರಾಗಲಿಲ್ಲ. ಅವರೆಲ್ಲಾ “”ಅಖಂಡ ಭಾರತವು ಅಮರವಾ ಗಲಿ” ಎಂಬ ಘೋಷಣೆಗಳನ್ನು ಒಂದೇ ಸ್ವರದಲ್ಲಿ ಕೂಗಿದರು. ಅವರ ಎದುರಿಗೆ ನಿಂತಿದ್ದ ಈ ಪ್ರಕರಣದ ಮಾಫಿ ಸಾಕ್ಷಿ ದಿಗಂಬರ ರಾಮಚಂದ್ರ ಬಡಗೆ ತನ್ನ ಬಿಡುಗಡೆಯಾಗಿದ್ದರೂ ಉಮ್ಮಳಿಸಿ ಬಂದ ದುಃಖ ತಡೆದುಕೊಳ್ಳಲು ಆಗದೇ ಗಳಗಳನೆ ಅಳತೊಡಗಿದ.
ಗಾಂಧೀಜಿ ಹತ್ಯೆಯ ಮೊಕದ್ದಮೆ ಷಡ್ಯಂತ್ರದ ನಿಖರ ವಿವರ ಪಡೆಯುವುದು ತುಂಬ ಜಟಿಲವಾಗಿತ್ತು. ಇದಕ್ಕೆ ನ್ಯಾಯಾಲಯದ ಅಭಿಯೋಜಕರು ಬಡಗೆಯನ್ನು ಜಾಣ್ಮೆಯಿಂದ ಬಳಸಿಕೊಂಡರು. ಅವನಿಗೆ ಬಿಡುಗಡೆ ಆಸೆ ತೋರಿಸಿ, ಷಡ್ಯಂತ್ರದ ಎಲ್ಲ ಸತ್ಯವನ್ನು ವಿವರವಾಗಿ ಹೇಳುವಂತೆ ಮನ ಒಲಿಸಿದರು. ನಂತರ ಗೆಜೆಟ್ ಪ್ರಕಟಿಸಿ ಬಡಗೆ ಮಾಫಿಸಾಕ್ಷಿ ಎಂದು ದೃಢಪಡಿಸಲಾಯಿತು. ಬಡಗೆ ನ್ಯಾಯಾಲಯದಲ್ಲಿ ತನ್ನ ದೀರ್ಘ ಹೇಳಿಕೆಯನ್ನು ನೀಡಿದನು. ಅವನ ಹೇಳಿಕೆಯ ಬಗ್ಗೆ ನ್ಯಾಯಾಧೀಶರು “”ಬಡಗೆ ತನ್ನ ಸಾಕ್ಷ್ಯವನ್ನು ನೇರವಾಗಿ, ಸರಾಗವಾಗಿ ಹೇಳಿದ್ದಾನೆ, ಪಾಟೀ ಸವಾಲುಗಳಿಂದ ನುಣುಚಿಕೊಳ್ಳಲು ಸತ್ಯವನ್ನು ಮುಚ್ಚಿಕೊಳ್ಳಲಿಲ್ಲ” ಎಂದು ತೀರ್ಪಿನಲ್ಲಿ ಶ್ಲಾ ಸಿದ್ದಾರೆ.
ದಿಗಂಬರ ಬಡಗೆಗೆ ಬಿಡುಗಡೆ ಹೊಂದಿದ್ದಕ್ಕೆ ಸಹಜವಾಗಿ ಸಂತೋಷವಾಗಬೇಕಾಗಿತ್ತು. ಆದರೆ ಜೊತೆಗಾರರಿಗೆ ನೇರಾ-ನೇರ ತನ್ನಿಂದ ದ್ರೋಹವಾಗಿದೆ ಎಂದು ಕಣ್ಣೀರು ಸುರಿಸತೊಡಗಿದ. ಅವನು ಮಾನಸಿಕ ಸ್ಥಿಮಿತ ಕಳೆದುಕೊಂಡು ನರಳತೊಡಗಿದ.
“”ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ದಿಗಂಬರ ಬಡಗೆ ಮಾಫಿ ಸಾಕ್ಷಿಯಾಗಿ ಬಿಡುಗಡೆಗೊಂಡಿದ್ದಾನೆ. ಆದರೆ ಬಡಗೆಬಳಿ ಜೀತದಾಳಾಗಿದ್ದು ದುಡಿಯುತ್ತಿದ್ದ ಶಂಕರ ಕೃಷ್ಟಯ್ಯ ಶಿಕ್ಷೆಗೆ ಒಳಗಾಗಿದ್ದಾನೆ” ಎಂಬ ವಿಚಿತ್ರ ಸಂಗತಿ ಚರ್ಚೆಯ ಮುನ್ನೆಲೆಗೆ ಬಂತು. ಎಲ್ಲ ಕಡೆ ಈ ವಿಷಯದ ಚರ್ಚೆ ನಡೆಯತೊಡಗಿತು. ಲಂಡನ್ನಿನ ಪತ್ರಿಕೆಯೊಂದು “”ದಿಗಂಬರ ಬಡಗೆ ಎಂಬ ಆರೋಪಿ ಮಾಫೀ ಸಾಕ್ಷಿಯಾಗಿ ಬಿಡುಗಡೆ ಯಾಗಿದ್ದಾನೆ. ವಿಚಿತ್ರ ಎಂದರೆ ಅವನ ನೌಕರನಿಗೆ ಶಿಕ್ಷೆಯಾಗಿದೆ” ಎಂದು ಸಂಪಾದಕೀಯ ಲೇಖನವನ್ನು ಬರೆಯಿತು. ಕಳ್ಳತನ ಮಾಡಿದವನನ್ನು ಬಿಟ್ಟು ಇಣುಕಿ ನೋಡಿದವನಿಗೆ ಶಿಕ್ಷೆಯಾಗಿದೆ ಎಂದು ಎಲ್ಲ ಕಡೆ ಅಭಿಪ್ರಾಯ ಪ್ರಕಟವಾಗತೊಡಗಿತು. ನ್ಯಾಯಾಲಯಕ್ಕೂ ಇದು ಮುಜುಗರವನ್ನುಂಟು ಮಾಡಿತು. ಶಂಕರ ಕೃಷ್ಟಯ್ಯ ಮೂಲತಃ ಆಂಧ್ರ ಪ್ರದೇಶದವನು. ಮುಂಬೈಗೆ ಬಂದು ನೆಲೆಸಿದ್ದ. ಹೊಟ್ಟೆಪಾಡಿಗೆ ಜೀತದಾಳಾಗಿ ದಿಗಂಬರ ಬಡಗೆ ಬಳಿ ದುಡಿಯುತ್ತಿದ್ದ. ಬಡಗೆ ಪ್ರತಿ ದಿನ ಶಂಕರಗೆ ವಿಪರೀತ ಕಿರುಕುಳ ನೀಡುತ್ತಿದ್ದ. ತಪ್ಪಿಸಿಕೊಂಡು ಹೋದರೆ ಹಲ್ಲೆ ಮಾಡಿ ಹಿಡಿದುಕೊಂಡು ಬಂದು ಗೃಹ ಬಂಧನದಲ್ಲಿ ಇಡುತ್ತಿದ್ದ. ಈ ಎಲ್ಲ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಿ ವಕೀಲರೊಬ್ಬರು (ಶಿಕ್ಷೆ ಪ್ರಕಟವಾದ 15 ದಿನಗಳೊಳಗಾಗಿ) ಶಂಕರ ಕೃಷ್ಟಯ್ಯನನ್ನೂ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಅಸಹಾಯಕನಾಗಿದ್ದ ಅವನ ಈ ಜೀವನ ವೃತ್ತಾಂತ ನ್ಯಾಯಾಲಯದ ಗಮನಕ್ಕೆ ಬಂತು. ಇದರಿಂದಾಗಿ ನ್ಯಾಯಾಲಯವು ಮೊದಲಿನ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸಿ 7 ವರ್ಷ ಶಿಕ್ಷೆಗೆ ಇಳಿಸಲಾಯಿತು. ಇದಕ್ಕೆ ವಕೀಲರು ಸಮಾಧಾನಗೊಳ್ಳಲಿಲ್ಲ. ಅವರು ತಮ್ಮ ಹೋರಾಟವನ್ನು ಮುಂದುವರಿಸಿದರು. ಶಂಕರ ಕೃಷ್ಟಯ್ಯಗೆ ಬಡಗೆ ನೀಡಿದ ಹಿಂಸೆ ಮತ್ತು ಅವನ ಮೇಲೆ ಎಸಗಿದ ದೌರ್ಜನ್ಯ ಎಲ್ಲದರ ಮಾಹಿತಿಯನ್ನು ಸಂಪೂರ್ಣವಾಗಿ ಕಲೆಹಾಕಿ ನ್ಯಾಯಾಲಯಕ್ಕೆ ಪುನರ್‌ಮನವಿ ಸಲ್ಲಿಸಿದಾಗ ನ್ಯಾಯಾಧೀಶರು ದಾಖಲೆಗಳನ್ನು ಪೂರ್ಣವಾಗಿ ಪರಿಶೀಲಿಸಿ ಶಂಕರ ಕೃಷ್ಟಯ್ಯನನ್ನೂ ಬಿಡುಗಡೆಗೊಳಿಸಿದರು. ದಿಗಂಬರ ಬಡಗೆಗೆ ಮುಂದೆ ನೆಮ್ಮದಿಯಿಂದ ಬದುಕುವುದು ಸಾಧ್ಯವಾಗಲಿಲ್ಲ. ತಾನು ಸಂಗಾತಿಗಳಿಗೆ ದ್ರೋಹ ಮಾಡಿದೆ ಎಂದು ಪರಿತಪಿಸುತ್ತಿದ್ದ. ಅವನಿಗೆ ಮುಂಬೈ ಪೋಲಿಸ್ ಕಮಿಷನರ್ ಕಛೇರಿಯ ಆವರಣದಲ್ಲಿ ಒಂದು ಕೊಠಡಿ ಕೊಟ್ಟು ರಕ್ಷಣೆ ಒದಗಿಸಲಾಗಿತ್ತು. ಅವನು ಮುಂದೆ 2006ರಲ್ಲಿ ಅನಾರೋಗ್ಯ ಹಾಗೂ ವೃದ್ಧಾಪ್ಯದಿಂದ ನಿಧನ ಹೊಂದಿದ. ಶಂಕರ ಕೃಷ್ಟಯ್ಯ ಆಂಧ್ರಕ್ಕೆ ಹೋಗಿ ನೆಲೆಸಿದ. ನಾಥುರಾಮ್ ಗೋಡ್ಸೆಯ ಸಹೋದರ ಗೋಪಾಲ್ ಗೋಡ್ಸೆ ಶಿಕ್ಷೆಯ ಅವಧಿ ಪೂರೈಸಿ ಬಿಡುಗಡೆಯಾಗಿ ಪುಣೆಯಲ್ಲಿ ನೆಲೆಸಿದ್ದ. ಗಾಂಧೀಜಿ ಅವರ ಪುತ್ರ ರಾಮದಾಸ್ ಗಾಂಧಿ ತೀವ್ರ ಅನಾರೋಗ್ಯದಿಂದ ಮುಂಬೈ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾದ ಸಂಗತಿಯನ್ನು ಪತ್ರಿಕೆಯಲ್ಲಿ ಗೋಪಾಲ್ ಗೋಡ್ಸೆ ಒಂದು ದಿನ ಓದಿದ. ಗಾಂಧಿ ಹತ್ಯೆಯ ಆರೋಪಿಗಳಿಗೆ ನೇಣು ಶಿಕ್ಷೆ ಬೇಡ ಎಂದು ರಾಮದಾಸ ಗಾಂಧಿ ಹೋರಾಟ ಮಾಡಿದ್ದು ಹಾಗೂ ಆಗ ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲರಿಗೆ ಮನವಿ ಸಲ್ಲಿಸಿದ್ದನ್ನು ನೆನಪು ಮಾಡಿಕೊಂಡ. ರಾಮದಾಸ್‌ಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮುಂಬೈ ಆಸ್ಪತ್ರೆಗೆ ಹೊರಟು ಬಂದ. ರಾಮದಾಸರ ಮಗಳು ಸುಮಿತ್ರ ಕುಲಕರ್ಣಿ ತಂದೆ ಮಲಗಿದ ರೂಂನ ಹೊರಗೆ ಕುಳಿತಿದ್ದರು. ಅಚಾನಕ್ಕಾಗಿ ಬಂದ ಅತಿಥಿ ತಾನು ಗೋಪಾಲ ಗೋಡ್ಸೆ ಎಂದು ಪರಿಚಯ ಹೇಳಿಕೊಳ್ಳುತ್ತಾನೆ. ಹೆಸರು ಕೇಳುತ್ತಲೇ ಸುಮಿತ್ರ ಅವರು ವಿಚಲಿತಗೊಂಡವರಂತೆ ನಿಂತುಬಿಡುತ್ತಾರೆ. ಅವರ ಉತ್ತರಕ್ಕೂ ಕಾಯಿದೆ ಗೋಪಾಲ ಗೋಡ್ಸೆ ರೂಂ ಒಳಗೆ ನುಗ್ಗಿ ರಾಮದಾಸರ ಚರಣಗಳನ್ನು ಗಟ್ಟಿಯಾಗಿ ಹಿಡಿದು ಹಣೆ ಹಚ್ಚಿ ನಮಸ್ಕರಿಸುತ್ತಾನೆ. ಸುಮಿತ್ರ ಕುಲಕರ್ಣಿ ಅವರು ಈ ಘಟನೆಯನ್ನು “”ಗಾಂಧಿ ಮೇರೆ ಪಿತಾಮಹ” ಕೃತಿಯಲ್ಲಿ ಮನಕಲಕುವಂತೆ ದಾಖಲಿಸಿದ್ದಾರೆ. – ಮಲ್ಲಿಕಾರ್ಜುನ್ ಹೆಗ್ಗಳಗಿ, ಮುಧೋಳ