Advertisement

ದುಷ್ಚಟಗಳಿಂದ ದೂರವಿದ್ದರೆ ಮಾತ್ರ ಸತ್ಪ್ರಜೆಗಳಾಗಲು ಸಾಧ್ಯ: ಶಾಸಕ ಕೆ.ಮಹದೇವ್

07:37 PM Jan 11, 2022 | Team Udayavani |

ಪಿರಿಯಾಪಟ್ಟಣ: ದುಷ್ಚಟಗಳಿಂದ ದೂರವಿದ್ದರೆ ಮಾತ್ರ ಸಮಾಜದ ಸತ್ಪಜೆಗಳಾಗಲು ಸಾಧ್ಯ ಎಂದು  ಶಾಸಕ ಕೆ.ಮಹದೇವ್ ತಿಳಿಸಿದರು.

Advertisement

ತಾಲೂಕಿನ ಬೈಲುಕುಪ್ಪ ಗ್ರಾಮದ ಎಸ್.ಎಲ್.ವಿ.ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ 1501 ನೇ ಮದ್ಯವರ್ಜನ  ಶಿಬಿರದಲ್ಲಿ ಮಾತನಾಡಿದರು.

ಮದ್ಯಪಾನ ಸೇವನೆ ಎಣಬುದು ಶ್ರೀಮಂತ ಮನೆತನದ ಯುವಕರಿಗೆ ಮೋಜಿಗಾಗಿ ಬಳಕೆಯಾದರೆ ಬಡ ಮತ್ತು ಕೊಲಿ ಕಾರ್ಮಿಕರಿಗೆ ಚಟವಾಗಿ ಪರಿಣಮಿಸಿದೆ ಇದರಿಂದ ಅವರ ಜೀವ ಮತ್ತು  ಜೀವನವನ್ನೇ ಸರ್ವ ನಾಶವಾಗುತ್ತಿದೆ,  ಮಧ್ಯ ವ್ಯಸನಿಗಳ ಕುಟುಂಬದಲ್ಲಿ ಸುಖ, ಶಾಂತಿ, ಮತ್ತು ನೆಮ್ಮದಿ ಕಾಣದೆ ಕಣ್ಣಿರಿನಲ್ಲಿ ಕೈ ತೂಳೆಯುವಂತಾಗಿರುವುದಲ್ಲದೆ ಸಮಾಜದಲ್ಲಿ ಅವರಿಗೆ ಗೌರವವಿಲ್ಲದೆ ಕೀಳು ಮನೋಭಾವದಿಂದ ಕಾಣುವಂತಾಗಿದೆ. ಇಂತಹಾ ದುಸ್ತಿತಿಯನ್ನರಿತ ಶ್ರೀ ವೀರೇಂದ್ರ ಹೆಗ್ಗಡೆಯವರು ಸರ್ಕಾರವೇ ಮಾಡಲಾಗದ  ಮಧ್ಯವರ್ಜನ ಶಿಬಿರದ ಯೋಜನೆಯನ್ನು ರಾಜ್ಯಾದ್ಯಂತ ಯಶಸ್ವೀಯಾಗಿ ನೆಡೆಸಿ ಲಕ್ಷಾಂತರ ಕುಟುಂಬದ ರಕ್ಷಣೆ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಚಾರ ಎಂದರು.

ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ  ಶ್ರೀಶ್ರೀಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ದುಷ್ಚಟಗಳು ಮನುಷ್ಯನ ದೇಹದೊಳಗೆ ನಿಧಾನವಾಗಿ ಪ್ರವೇಶ ಮಾಡಿ ಅವರ ಜೀವನ ಮತ್ತು ನೈತಿಕತೆಯನ್ನು  ಹೂರಗಟ್ಟಿದ್ದು, ದುಶ್ಚಟಗಳಿಗೆ ಬಲಿಯಾದವರನ್ನು ಸಮಾಜದಲ್ಲಿ ತಲೆ ಎತ್ತಿ ತಿರುಗಾಡದಂತೆ ಮಾಡುತ್ತದೆ. ಆದ್ದರಿಂದ ಮಧ್ಯ ವ್ಯಸನಿಗಳು ಸದಾ ಕಾಲ ತಮ್ಮ ಬದುಕನ್ನು ಜಾಗ್ರೃತರಾಗಿ ಮುನ್ನೆಡೆಸಿಕೂಂಡು ಹೋದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ ಎಲ್ಲಿಯವರೆಗೆ ಈ ದೇಶದಲ್ಲಿ ಕುಡಿತದ ಪೆಡಂಭೂತ ಇರುತ್ತದೆಯೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಅಸಾದ್ಯ. ಅದೆಷ್ಟೋ ಬಡ ಕುಟುಂಬಗಳ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಕುಡಿತದ ಚಟ ಬಿಡಿಸಲು ಢೂಂಗೀ ವೈದ್ಯರ ಬಳಿ ಕರೆದುಕೊಂಡು ಹೋಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಯಾವುದೇ ಪ್ರಯೋಜನವಾಗದೇ ಬರಿಗೈಯಲ್ಲಿ ಮನೆಗೆ ಮರಳಿದ್ದಾರೆ ಎಂದರು.

Advertisement

ಈ ಸಂದರ್ಭದಲ್ಲಿ ಶಿಬಿರದ ಯೋಜನಾಧಿಕಾರಿ ತಿಮ್ಮಯ್ಯ ನಾಯಕ, ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಸ್ವಾಮಿ, ಜನಜಾಗೃತಿ ವೇದಿಕೆಯ ಮುಖಂಡರಾದ ಅರುಣ ಬಾನಂಗಡ ಸೋಮಶೇಖರ್, ರೇಣುಕಸ್ವಾಮಿ, ಕೊಡಗು ಜಿಲ್ಲಾ ನಿರ್ದೇಶಕ ಯೋಗೀಶ್, ಯೋಗಗುರು ಗಜೇಂದ್ರ ರಾಜೇಂದ್ರ,  ಶಿಬಿರಾಧಿಕಾರಿ ದೇವಿಪ್ರಸಾದ್,  ಆರೋಗ್ಯ ಸಹಾಯಕಿ ರಂಜಿತಾ,  ಮದ್ಯವರ್ಜನ ಶಿಬಿರದ ಅಧ್ಯಕ್ಷ ರಾಜೇಶ್,  ಯೋಜನಾಧಿಕಾರಿ ಸುರೇಶ್ ಶೆಟ್ಟಿ,  ಮೇಲ್ವಿಚಾರಕರಾದ ಮಧುರ,  ವಸಂತ್,   ಕೋಶಾಧಿಕಾರಿ ಸಂಜೇಶ್,  ರೋಹಿತ್,  ಭಾರತಿ, ಸ್ವಾಮಿ, ನಾರಾಯಣ ಅರ್ಪಂಗಾಯ,  ಗಣೇಶ,   ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.