Advertisement
ಮಂಗಳೂರಿನಲ್ಲಿ ಡೆಕೊರೇಷನ್ ಕೆಲಸ ಮುಗಿಸಿ ಮಡ್ಯಾರ್ನ ಗೋದಾಮಿಗೆ ಬಂದು ವಿಶ್ರಾಂತಿಯಲ್ಲಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ತಂಡ ಅವಾಚ್ಯವಾಗಿ ಬೈದು ಮರದ ಸೋಂಟೆಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದೆ. ಗಾಯಗೊಂಡಿರುವ 7 ಮಂದಿ ಕಾರ್ಮಿಕರು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಉಳ್ಳಾಲ ನಿವಾಸಿಗಳಾದ ರಾಹುಲ್, ಅಕ್ಷಯ್, ಗುರುಮೂರ್ತಿ ಹಾಗೂ ಸಿನಾನ್ ಎಂಬವರನ್ನು ಬಂಧಿಸಿದೆ. ಎರಡು ಡೆಕೋರೇಟರ್ ಸಂಸ್ಥೆಗಳ ಜಗಳ ಕಾರ್ಮಿಕರ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.