ಮಂಡ್ಯ: ಅಕ್ಕ ನಿನ್ ಗೆಲ್ಲಿಸಿದ್ದು ವೇಸ್ಟ್. ಸ್ವಾಭಿಮಾನದ ಅವಧಿ ಎಷ್ಟು ಬೇಗ ಮುಗಿಯುತ್ತೆ ಅಂಥ ಕಾಯುತ್ತಿದ್ದಾರೆ…ಎಂದು ಸಂಸದೆ ಸುಮಲತಾ ಅಂಬರೀಶ್‌ಅವರು ತಮ್ಮ ಫೇಸ್‌ಬುಕ್‌ನಲ್ಲಿ ಸ್ವಾಭಿಮಾನ ಗೆಲುವಿಗೆ 2 ವರ್ಷ ಎಂದು ಸಂಸದೆಯಾಗಿ ಗೆಲುವು ಸಾಧಿಸಿದ ಸಂಭ್ರಮಾ ಚರಣೆಗೆ ಹಾಕಿಕೊಂಡಿದ್ದ ಪೋಸ್ಟ್‌ಗೆ ನೆಟ್ಟಿಗರು ಟೀಕಿಸುವ ಮೂಲಕ ಕಾಲೆಳೆದಿದ್ದಾರೆ.
ಮೇ23ಕ್ಕೆಸ್ವಾಭಿಮಾನದಹೆಸರಿನಲ್ಲಿಸುಮಲತಾಗೆಲುವುಸಾಧಿಸಿ, ಸಂಸದೆಯಾಗಿ 2ವರ್ಷ ಪೂರೈಸಿರುವ ಸಂದರ್ಭದಲ್ಲಿಸುಮಲತಾ ಅವರು ಫೇಸ್‌ಬುಕ್‌ನಲ್ಲಿ ಎರಡು ವರ್ಷದಸಂಭ್ರಮಾಚರಣೆ ಕುರಿತು ಧನ್ಯವಾದ ತಿಳಿಸಿದ್ದರು. ಇದಕ್ಕೆಪ್ರತಿಕ್ರಿಯಿಸಿರುವ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಮಂಡ್ಯಕ್ಕೆ ಬಾರದಿರುವುದಕ್ಕೆಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನ ಎರಡನೇ ಅಲೆಜೋರಾಗಿದ್ದು, ಸುಮಕ್ಕ ಕಾಣುತ್ತಿಲ್ಲ ಎಂದು ಸಾಮಾಜಿಕಜಾಲತಾಣದಲ್ಲಿ ಸುಮಲತಾ ವಿರುದ್ಧ ಪೋಸ್ಟ್‌ಗಳುಹರಿದಾಡಿದ್ದವು. ಸಾರ್ವಜನಿಕರು ಅವರನ್ನುಪ್ರಶ್ನಿಸಿದ್ದರು.ಕಳೆದ ಕೆಲವು ದಿನಗಳ ಹಿಂದೆಜಿಪಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣಸಂಬಂಧ ಸಭೆಯಲ್ಲಿನಡೆದಆಕ್ಸಿಜನ್‌ವಿವಾದಮಾಡಿಕೊಂಡು ಅರ್ಧಕ್ಕೆ ಸಭೆಯಿಂದ ಹೊರನಡೆದಿದ್ದರು.
ಆ ಬಳಿಕ ಮಂಡ್ಯಕ್ಕೆಆಗಮಿಸಿರಲಿಲ್ಲ.ನಿಮ್ಮನ್ನು ಗೆಲ್ಲಿಸಿದ್ದುವೇಸ್ಟ್,ಏನು ಯೂಸ್ ಇಲ್ಲ.ಕೆ.ಆರ್.ಪೇಟೆ ತಾಲೂಕು ಅಂತಾ ಒಂದು ಇದೆ, ನಿಮಗೆ ಗೊತ್ತಾ…?ನಾವು ನಿಮ್ಮ ಅಭಿಮಾನಿ, ಗೆದ್ದು ಎರಡು ವರ್ಷ ಆಗಿದೆ,ನಮ್ಮ ಊರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ…?ನೀವು ಬೆಂಗಳೂರಿನಲ್ಲಿ ಸುಖವಾಗಿರಿ ಎಂದು ಟೀಕಿಸಿದ್ದಾರೆ.ಇದಲ್ಲದೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರುಕೇಳಿಕೊಂಡಿದ್ದಾರೆ.ಆದರೆನೆಟ್ಟಿಗರುಮಾಡಿರುವಯಾವುದೇಪೋಸ್ಟ್‌ಗೆ ಸಂಸದೆ ಸುಮಲತಾ ಕ್ಯಾರೆ ಎಂದಿಲ್ಲ. ಆದರೆಅವರ ಅಭಿಮಾನಿಗಳು ಮಾತ್ರ ಸಮರ್ಥಿಸಿಕೊಂಡಿದ್ದಾರೆ.