Advertisement

ಹಗರಣದ ರೂವಾರಿಗೆ ಆಡಳಿತ ಮಂಡಳಿ ಶ್ರೀರಕ್ಷೆ

06:50 PM Jun 19, 2021 | Team Udayavani |

ಮಂಡ್ಯ: ಮನ್‌ಮುಲ್‌ನಲ್ಲಿ ನಡೆದಿರುವ ಎಲ್ಲಾ ಹಗರಣಗಳ ರೂವಾರಿ ಪ್ರಧಾನ ವ್ಯವಸ್ಥಾಪಕ ಶಿವಶಂಕರಸ್ವಾಮಿ ಅವರಿಗೆ ಹಾಲಿ ಆಡಳಿತ ಮಂಡಳಿಯ ಕೆಲ ಸದಸ್ಯರು ಶ್ರೀ ರಕ್ಷೆಯಾಗಿ ನಿಂತಿದ್ದಾರೆ ಎಂದು ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್‌ ಆರೋಪಿಸಿದರು.

Advertisement

ಈ ಹಗರಣದ ಆರೋಪಿಯಾಗಿರುವ ಶಿವಶಂಕರಸ್ವಾಮಿಯನ್ನು ಇನ್ನೂ ಅಮಾನತು ಮಾಡದಿರುವುದರಮರ್ಮವೇನು? ಆ ಬಗ್ಗೆ ಬಹಿರಂಗ ಚರ್ಚೆಗೆ ಆಡಳಿತಮಂಡಳಿಬರಲಿಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಸವಾಲು ಹಾಕಿದರು.ಯಾವುದೇ ಆರೋಪಗಳು ಇಲ್ಲವೆಂದ ಮೇಲೆಕಡ್ಡಾಯವಾಗಿ ಸಿಬಿಐ ತನಿಖೆಗೆ ಒಳಪಡಿಸಲೇಬೇಕುಎಂದು ಒತ್ತಾಯಿಸಿದ ಅವರು, ತಪ್ಪಿದ್ದಲ್ಲಿ ಗೆಜ್ಜಲಗೆರೆಮನ್‌ಮುಲ್‌ ಕಚೇರಿ ಎದುರು ಅನಿರ್ದಿಷ್ಟಾವಧಿಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಕೆ ಸಿಬಿಐ ತನಿಖೆಗೆ ಒಪ್ಪಿಸುತ್ತಿಲ್ಲಎಂದು ಆಡಳಿತ ಮಂಡಳಿ ಮತ್ತು ಸರ್ಕಾರವನ್ನು ಪ್ರಶ್ನಿಸಿದಹರೀಶ್‌, 2015-16ರಲ್ಲಿನ ನೇಮಕಾತಿ ಅವ್ಯವಹಾರ,ಮೆಗಾ ಡೇರಿ ಗುತ್ತಿಗೆ ನೀಡಿ ಒಕ್ಕೂಟಕ್ಕೆ ಭಾರೀ ನಷ್ಟ, ಗುತ್ತಿಗೆನೌಕರರ ಭವಿಷ್ಯ ನಿಧಿ ದುರ್ಬಳಕೆ, ಬಿ.ಎಂ.ಸಿ.ಗಳ ಯಂತ್ರಖರೀದಿಯಲ್ಲೂ ಭಾರಿ ಅವ್ಯವಹಾರ.

ಪತ್ತೆ ಹಚ್ಚಿದ್ದು ಡಾ.ಮಂಜೇಶ್‌ಗೌಡ: ಶ್ರೀರಂಗಪಟ್ಟಣದಲ್ಲಿ ಟ್ರಸ್ಟ್‌ನಿಂದ ಜಮೀನು ಖರೀದಿಸುವಾಗ ಕನಿಷ್ಠ 5ಕೋಟಿ ರೂ. ದುರ್ಬಳಕೆ, ಒಕ್ಕೂಟದ ಮಾರುಕಟ್ಟೆವಿಭಾಗದಲ್ಲಿ ಅನಗತ್ಯ ವಾಹನ ಬಳಕೆ, ಅನಗತ್ಯ ಸಾಲನೀಡಿಕೆ, ಖಾಸಗಿ ಡೇರಿಗಳಿಗೆ ಪರಿವರ್ತನೆಗೆ ಹಾಲುನೀಡಿ ಕೋಟ್ಯಂತರ ರೂ. ನಷ್ಟವಾಗಿದೆ. ಈಗ ಟ್ಯಾಂಕರ್‌ನಲ್ಲಿ ಹಾಲು ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಸುಳಿವುನೀಡಿದ್ದು ನಾವೆಂದು ಅಧ್ಯಕ್ಷರು ಹೇಳುತ್ತಿದ್ದಾರೆ. ಆದರೆಇದು ಸುಳ್ಳು. ಇದನ್ನು ಪತ್ತೆ ಹಚ್ಚಿದ್ದು ಡಾ.ಮಂಜೇಶ್‌ಗೌಡ. ಆಡಳಿತ ಮಂಡಳಿ ಸುಳ್ಳೇಕೆ ಹೇಳುತ್ತಿದೆ ಎಂದು ಕಿಡಿಕಾರಿದರು.

ಕ್ರಮ ಕೈಗೊಳ್ಳಲಿ: ಗುತ್ತಿಗೆದಾರರು ಗುತ್ತಿಗೆ ವಾಹನಗಳಬದಲಾಗಿ ಬೇರೆ ವಾಹನಗಳನ್ನು ನೀಡಿದ್ದಾರೆ. ಸಿಸಿಕ್ಯಾಮೆರಾ ಅಳವಡಿಸುವಂತೆ, ಟ್ಯಾಂಕರ್‌ಗಳಲ್ಲಿ ಹೆಚ್ಚಿನತೂಕ ಬರುವಂತೆ ಕಬ್ಬಿಣದ ರಾಡ್‌ ಸೇರಿದಂತೆ ವಸ್ತುಗಳನ್ನಿಟ್ಟಿರುವ ಬಗ್ಗೆ, ಜಿಡ್ಡಿನ ಅಂಶದಲ್ಲಿ ವ್ಯತ್ಯಾಸ, ಹಾಲಿನಫ್ಯಾಟ್‌ ವ್ಯತ್ಯಾಸದ ಬಗ್ಗೆ, ಬಿಎಂಸಿಗಳಿಂದ ಹಾಲಿನಟ್ಯಾಂಕರ್‌ಗಳು ನಿಗದಿತ ಸಮಯಕ್ಕೆ ಬರದಿರುವ ಬಗ್ಗೆಕ್ರಮ ಕೈಗೊಳ್ಳುವಂತೆ ಪ್ರಧಾನ ವ್ಯವಸ್ಥಾಪಕರಿಗೆ ಉಪವ್ಯವಸ್ಥಾಪಕರು ಪತ್ರ ಬರೆದಿದ್ದಾರೆ. ಆದರೂ ಇದರ ಬಗ್ಗೆಪ್ರಧಾನ ವ್ಯವಸ್ಥಾಪಕ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಪ್ರಕರಣದ ಸಾಕ್ಷಿಯಾಗಿ ಕಂಡು ಬಂದಿದೆ.ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೆ,ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದುಆಗ್ರಹಿಸಿದರು. ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದಕೆ.ಬಿ.ಪುಟ್ಟಸ್ವಾಮಿ, ಸಿ.ತಮ್ಮಯ್ಯ, ಸಿ.ವೈರಮುಡಿಗೌಡ,ಹೋರಾಟ ಸಮಿತಿ ಅಧ್ಯಕ್ಷ ಕಾರಸವಾಡಿ ಮಹದೇವು,ಗೌರವ ಸಲಹೆಗಾರರಾದ ಎಚ್‌.ಕೆ.ಕೃಷ್ಣೇಗೌಡ,ಸಿ.ನಾಗರಾಜು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next