ಮದ್ದೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳುಕಾಂಗ್ರೆಸ್ ಅಭ್ಯರ್ಥಿಗಳ ಪಾಲಾಗಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳುವಮಾರ್ಗಮಧ್ಯೆ ಶಿವಪುರದಲ್ಲಿ ಕಾಂಗ್ರೆಸ್‌ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿರುವ ಜನರು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲಿದ್ದಾರೆಂದರು.
ಮನ್‌ಮುಲ್ ಹಾಲು ಒಕ್ಕೂಟದಲ್ಲಿನಡೆದಿ ರುವ ಕಲಬೆರಕೆ ಹಾಲು ನೀರಿನಪ್ರಕರಣದ ಬಗ್ಗೆ ತಮಗೆ ಸಂಪೂರ್ಣ ಮಾಹಿತಿಇಲ್ಲದಾಗಿದ್ದು, ಈ ಸಂಬಂದ ಮಾಹಿತಿ ಪಡೆದುಮಾಧ್ಯಮ ದೊದವರೊಂದಿಗೆ ಮಾತನಾಡುವುದಾಗಿ ತಿಳಿಸಿ ದರಲ್ಲದೇ ಮುಖ್ಯಮಂತ್ರಿಬದಲಾವಣೆ ವಿಷಯ ಬಿಜೆಪಿ ಪಕ್ಷದ ಆಂತರಿಕವಿಷಯವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಕಠಿಣ ಶಿಕ್ಷೆಗೆ ಆಗ್ರಹ : ಮನ್‌ಮುಲ್ ಹಾಲುಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಾಲುಹಗರಣವನ್ನು ಉನ್ನತ ತನಿಖೆ ನಡೆಸುವಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿಒಕ್ಕೂಟವನ್ನು ಉಳಿಸಬೇಕೆಂದು ಮಾಜಿಸಚಿವ ಎನ್. ಚಲುವರಾಯಸ್ವಾಮಿತಿಳಿಸಿದರು.
ಈ ವೇಳೆ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿಆರ್. ಮೋಹನ್, ಮುಖಂಡರಾದ ಕೆ.ಆರ್.ಮಹೇಶ್, ಅಮರ್‌ಬಾಬು, ಅರುಣ್‌ಕುಮಾರ್, ಮಹೇಶ್ ಇತರರಿದ್ದರು.