ಮಂಡ್ಯ: ಪುರುಷರಿಗೆ ಇಲ್ಲದ ಸೂಕ್ಷ್ಮತೆ ಮಹಿಳೆಯರಿಗೆ ಇದೆ. ಹೆಣ್ಣು ಮಕ್ಕಳು ಇಂದು ಎಲ್ಲಾಕ್ಷೇತ್ರಗಳನ್ನು ಆವರಿಸಿಕೊಂಡಿದ್ದಾರೆ ಎಂದುಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿನಾಗತೀಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್‌ಭವನದಲ್ಲಿ ಕರ್ನಾಟಕ ಸಂಘ ಹಾಗೂ ಚಿರಂತಪ್ರಕಾಶನ ವತಿಯಿಂದ ಡಾ.ಸುಮಾರಾಣಿಶಂಭುಅವರ ಮೂರು ಕೃತಿಗಳ ಲೋಕಾರ್ಪಣೆಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾತನಾಡುವ ಶಕ್ತಿ ಬಂತು: ಮಹಿಳೆಯರುಎಂತಹದ್ದೇ ಅಡೆತಡೆಗಳ ನಡುವೆಯೂ ಸಾಧಿಸುವ ಛಲವನ್ನು ಹೊಂದಿದ್ದಾರೆ. ಪೈಲೆಟ್,ಶಿಕ್ಷಕಿ, ಸಂಶೋಧಕಿಯಾಗಿಯೂ ಸಾಧನೆಮೆರೆದಿದ್ದಾರೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಚೈತನ್ಯ ಕ್ರಿಯಾಶೀಲರಾಗಿರುತ್ತಾರೆ.ಅ ಧಿಕಾರ ವಿಕೇಂದ್ರೀಕರಣ ಗ್ರಾಮ ಪಂಚಾಯತಿ ಬಂದ ನಂತರ ಹೆಣ್ಣು ಮಕ್ಕಳುಪ್ರಚುರವಾದ ತೊಡಗಿದರು. ಅವರಿಗೆ ಅಸ್ಮಿತೆಮತ್ತು ಮಾತನಾಡುವ ಶಕ್ತಿ ಬಂತು ಎಂದುತಿಳಿಸಿದರು.
ಹೈನುಗಾರಿಕೆ ಪ್ರತಿನಿತ್ಯ ಆರ್ಥಿಕ ಶಕ್ತಿತುಂಬುವ ಉದ್ಯಮವಾಗಿದೆ. ಹೆಣ್ಣು ಮಕ್ಕಳುಕೂಡ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಳ್ಳಿ ಹೆಣ್ಣು ಮಕ್ಕಳು ಎಷ್ಟೋನೋವುಗಳು ಇದ್ದರೂ ಅದನ್ನು ತಾಳಿಕೊಂಡೆಬದುಕುತ್ತಾರೆಂದರು.ಮೂರು ಆಯಾಮ: ಪುರುಷರು ಹೆಣ್ಣುಮಕ್ಕ ಳನ್ನೇ ಕೇಂದ್ರವಾಗಿಟ್ಟುಕೊಂಡು ಏಕೆಬೈಗುಳ ಸೃಷ್ಟಿಸಿಕೊಂಡಿದ್ದಾರೆ. ಬದಲಾದ ಕಾಲದಲ್ಲಿ ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಯೋಚಿಸ ಬೇಕು. ಸುಮಾರಾಣಿ ಅವರು ರಚಿಸಿರುವಮೂರು ಕೃತಿಗಳು ಮೂರು ರೀತಿಯಆಯಾಮ ಒಳಗೊಂಡಿದೆ ಎಂದರು.
ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳಕಾರ್ಯದರ್ಶಿ ಮೀರಾಶಿವಲಿಂಗಯ್ಯ ಮಾತನಾಡಿ, ಲೇಖಕಿ ಅಮೂರ್ತ ಕೃತಿಯಲ್ಲಿ ಅಂತಜಾìಲವನ್ನು ಸಮರ್ಥವಾಗಿ ಬಳಸಿಕೊಂಡುವಿಚಾರಗಳನ್ನು ಜನರಿಗೆ ಸರಳವಾಗಿತಲುಪಿಸಿದ್ದಾರೆ ಎಂದರು.ಪತ್ರಕರ್ತ ಮಾರೇನಹಳ್ಳಿ ಯೋಗೇಶ್‌ಮಾತನಾಡಿ, ಅಮೂರ್ತ ಕೃತಿಯಲ್ಲಿ ಕಿರುಅಂಕಣ ಮುಗ್ಧತೆಯಿಂದ ಕೂಡಿದೆ. ಹಾಗೆಯೇಚಿತ್ತ ಲಹರಿ ಕೃತಿಯಲ್ಲಿ ಲೇಖನ ವಿದ್ವತ್ತನ್ನುಸಾಧಿ ಸಿವೆ ಎಂದರು.
ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ: ಲೇಖಕಿಡಾ.ಶುಭಾಶ್ರೀಪ್ರಸಾದ್ ಮಾತನಾಡಿ, ಜರ್ನಿಜಂಕ್ಷನ್ ಕೃತಿಯು ಎಲ್ಲರೂ ಓದಿ ಸರಳವಾಗಿಅರ್ಥೈಸಬಹುದಾದ ಉತ್ತಮ ಕೃತಿಯಾಗಿದೆ.ಕೃತಿಯಲ್ಲಿರುವ ಲೇಖನಗಳು ಪ್ರವಾಸಿ ತಾಣಗಳನ್ನು ಮನಮುಟ್ಟುವಂತೆ ಪ್ರೇರೇಪಿ ಸಿದೆಎಂದರು. ಸಮಾರಂಭದಲ್ಲಿ ಕೃತಿಯ ಕತೃìಡಾ.ಸುಮಾರಾಣಿ ಕೆ.ಶಂಭು, ಕರ್ನಾಟಕಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ,ಚಿರಂತ ಪ್ರಕಾಶನದ ಅಧ್ಯಕ್ಷ ಕಬ್ಬನಹಳ್ಳಿಶಂಭುಉಪಸ್ಥಿತರಿದ್ದರು.