ಮಂಡ್ಯ: ಜಿಲ್ಲೆಯ ಮುಜರಾಯಿ ವ್ಯಾಪ್ತಿಯದೇವಸ್ಥಾನಗಳ ಆಸ್ತಿಪಾಸ್ತಿ ಹಾಗೂ ಭೂ ಒತ್ತುವರಿ ಬಗ್ಗೆಸಮೀಕ್ಷೆ ನಡೆಸಿ ಸರ್ಕಾರದ ಆಸ್ತಿ ಬೇರೆಯವರಪಾಲಾಗದಂತೆ ಕ್ರಮ ವಹಿಸುವ ಮೂಲಕ ರಕ್ಷಣೆಮಾಡಬೇಕು ಎಂದು ಹಿಂದೂ ಧಾರ್ಮಿಕ ಮತ್ತುಧರ್ಮಾದಾಯ ದತ್ತಿ ಸಚಿವ ಕೋಟ ಶ್ರೀನಿವಾಸಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಧರ್ಮದಾಯ ದತ್ತಿ ಮತ್ತು ಹಿಂದುಳಿದ ವರ್ಗಗಳಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿ,ದೇವಸ್ಥಾನಗಳ ಸಮೀಕ್ಷೆ ನಡೆಸಿಆಡಳಿತಾಧಿಕಾರಿ ಇಲ್ಲದಕಡೆ ಆಡಳಿತ ಮಂಡಳಿ ರಚಿಸಬೇಕೆಂದರು.ಕೊರೊನಾದಿಂದ ನಿಲ್ಲಿಸಲಾಗಿದ್ದ “ಸಪ್ತಪದಿ’ಯೋಜನೆಯನ್ನು ಜು.5ರ ನಂತರ ಪ್ರಾರಂಭಿಸಲುಕ್ರಮ ವಹಿಸಲಾಗುತ್ತಿದೆ.
ಇನ್ನು ಮುಂದೆ ಪ್ರಸಿದ್ಧದೇವಾಲಯಗಳಲ್ಲಿ ಮದುವೆ ಕಾರ್ಯಕ್ರಮಗಳುಸರ್ಕಾರದಿಂದಲೇ ನಡೆಯಲಿವೆ. ಗಂಡು-ಹೆಣ್ಣಿಗೆ ತಾಳಿ,ಬಟ್ಟೆ ಸೇರಿ ಎಲ್ಲಾ ಸೌಲಭ್ಯ ನೀಡಲಾಗುವುದು. ಬಿ ಮತ್ತುಸಿ ದರ್ಜೆ ದೇವಸ್ಥಾನಗಳಿಗೆ ಈಗಾಗಲೇ ವ್ಯವಸ್ಥಾಪನಾಮಂಡಳಿ ರಚನೆಯಾಗಿ ಅವಧಿ ಮುಗಿದಿದ್ದರೆ ಅಂಥವ್ಯವಸ್ಥಾಪನಾ ಮಂಡಳಿ ರಚನೆಗೆ ವಿಶೇಷ ಗಮನನೀಡಬೇಕೆಂದರು.
ಶಾಸಕರಾದ ಕೆ.ಅನ್ನದಾನಿ ಹಾಗೂ ಡಿ.ಸಿ.ತಮ್ಮಣ್ಣತಮ್ಮ ಕ್ಷೇತ್ರಗಳ ದೇವಾಲಯಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆಪ್ರತಿಕ್ರಿಯಿಸಿದ ಸಚಿವ ಶ್ರೀನಿವಾಸ ಪೂಜಾರಿ, ಪಟ್ಟಿತಯಾರಿಸಿ ಕಳುಹಿಸಿಕೊಡುವಂತೆ ತಿಳಿಸಿದರು. ಇನ್ನುಮಳವಳ್ಳಿ ಮತ್ತು ಮಂಡ್ಯದಲ್ಲಿ ಹಿಂದುಳಿದ ವರ್ಗಗಳಮೊರಾರ್ಜಿ ಶಾಲೆ ಸ್ಥಾಪನೆ ಕುರಿತು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ನಂತರ ನಡೆದಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಾಲೆಗಳುಮುಂಬರುವ ದಿನಗಳಲ್ಲಿ ಪ್ರಾರಂಭವಾಗುತ್ತಿದ್ದು,
ಎಲ್ಲಾವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕುಎಂದರು.ಶಾಸಕರಾದ ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ,ಸಿ.ಎಸ್.ಪುಟ್ಟರಾಜು, ಅನ್ನದಾನಿ, ವಿಧಾನ ಪರಿಷತ್‌ಸದಸ್ಯರಾದಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ದಿವ್ಯಾಪ್ರಭು, ಅಪರಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಉಪವಿಭಾಗಾಧಿಕಾರಿಐಶ್ವರ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಜಿಲ್ಲಾಧಿಕಾರಿ ಸೋಮಶೇಖರ್ ಮತ್ತಿತರರಿದ್ದರು.