Advertisement

ನೆರೆ ಹಾವಳಿ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

08:59 PM Jun 23, 2021 | Team Udayavani |

ಮಂಡ್ಯ: ಮುಂಗಾರು ಮಳೆ ಮಾನ್ಸೂನ್‌ ಆರಂಭವಾಗಿದ್ದು, ಕಾವೇರಿ ನದಿಯನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸುವಕಾರಣದಿಂದ ನದಿಯ ಎರಡುಇಕ್ಕೆಲಗಳಲ್ಲಿ ತುಂಬಿ ಹರಿಯುವ ಸಾಧ್ಯತೆಇದೆ. ಆದ್ದರಿಂದ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಸುರಕ್ಷತಾ ಕ್ರಮ ಗಳನ್ನುಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಸಭಾಂಗಣದಲ್ಲಿ ನಡೆದ ಅತಿವೃಷ್ಟಿಹಾಗೂ ನೆರೆ ಹಾವಳಿ ಸಮಸ್ಯೆಗಳ ನಿರ್ವಹಣೆಯ ಜಿಲ್ಲಾ ವಿಪತ್ತು ನಿರ್ವಹಣಾಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಇರುವಂತೆ ನಮ್ಮ ಜಿಲ್ಲೆಯಲ್ಲಿಪ್ರವಾಹ ಹಾಗೂ ನೆರೆ ಹಾವಳಿಗೆ ಸಂಬಂಧಿಸಿದ ಸಮಸ್ಯೆಗಳು, ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಕಂಡು ಬರುವುದಿಲ್ಲ.ಜಿಲ್ಲೆಯು ಪ್ರಕೃತಿ ವಿಕೋಪ ಮತ್ತು ನೆರೆಹಾವಳಿ ಸಮಸ್ಯೆಗಳಿಂದ ಮುಕ್ತವಾಗಿದೆಎಂದರು.36 ಗ್ರಾಮಗಳಿಗೆ ನೆರೆ ಹಾವಳಿ:ಮಂಡ್ಯ, ಮದ್ದೂರು ಮತ್ತು ನಾಗಮಂಗಲತಾಲೂಕುಗಳಲ್ಲಿಪ್ರವಾಹ-ನೆರೆಹಾವಳಿಗೆ ಸಂಬಂಧಿಸಿದ ಯಾವುದೇಸಮಸ್ಯೆಗಳುಕಂಡು ಬರುವುದಿಲ್ಲ.

ಮಳವಳ್ಳಿ ತಾಲೂಕಿನ 4 ಗ್ರಾ ಪಂಗಳಲ್ಲಿಮುತ್ತತ್ತಿ ಮತ್ತು ತಾಳವಾಡಿ ಸುತ್ತಮುತ್ತಲಿನ 9 ಗ್ರಾಮ, ಪಾಂಡವಪುರ ತಾಲೂಕಿನ 2 ಗ್ರಾಪಂಗಳ ಎಣ್ಣೆಹೊಳೆ ಕೊಪ್ಪಲುಮತ್ತು ಅದರ ಸುತ್ತಮುತ್ತಲಿನ6ಗ್ರಾಮಗಳು ಹಾಗೂ ಕೆ.ಆರ್‌.ಪೇಟೆ ತಾಲೂಕಿನ2 ಗ್ರಾಮ, ಶ್ರೀರಂಗಪಟ್ಟಣ ತಾಲೂಕಿನ7 ಗ್ರಾಪಂಗಳ 19 ಗ್ರಾಮಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14 ಗ್ರಾಪಂಗಳ36 ಗ್ರಾಮಗಳು ಪ್ರವಾಹ, ನೆರೆ ಹಾವಳಿಮತ್ತು ಪ್ರಕೃತಿ ವಿಕೋಪಗಳಿಗೆ ಒಳಗಾಗುವ ಸಂಭವವಿದೆ.

ಆದ್ದರಿಂದ ಆಯಾತಾಲೂಕುಗಳ ತಹಶೀಲ್ದಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧೀಕಕ ‌Ò ಇಂಜಿನಿಯರ್‌ವಿಜಯಕುಮಾರ್‌, ಡಿ ಎಚ್‌ಒಡಾ.ಟಿ.ಎನ್‌.ಧನಂಜಯ್‌, ಉಪವಿಭಾಗಾಧಿಕಾರಿಗಳಾದ ಐಶ್ವರ್ಯ, ಉಪ ವಿಭಾಗಾಕಾರಿ ಶಿವಾನಂದ ಮೂರ್ತಿ, ಜಿಪಂ ಉಪಕಾರ್ಯದರ್ಶಿ ಎನ್‌.ಡಿ. ಪ್ರಕಾಶ್‌, ಕೃಷಿಜಂಟಿ ನಿರ್ದೇ ಶಕ ಡಾ. ಚಂದ್ರಶೇಖರ್‌ಸೇರಿದಂತೆ ಎಲ್ಲ ತಾಲೂ ಕುಗಳತಹಶೀಲ್ದಾರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next